ಉಪ್ಪಾರರ ವಾಸ್ತವ ಚಿತ್ರಣ ಸಮೀಕ್ಷೆಯಲ್ಲಿ ಹೊರ ಹೊಮ್ಮುವಂತೆ ನೋಡಿಕೊಳ್ಳಿ
– ಶ್ರೀ ಪುರುಷೋತ್ತಮಾನಂದ ಪುರಿ ಶ್ರೀಗಳು
ಚಿತ್ರದುರ್ಗ ಹೊಯ್ಸಳ ನ್ಯೂಸ್/
ಹೊಸದುರ್ಗ :
ತಾಲೂಕಿನ ಬ್ರಹ್ಮ ವಿದ್ಯಾ ನಗರದ ಭಗೀರಥ ಗುರುಪೀಠದಲ್ಲಿ ಸೋಮವಾರ ತಾಲ್ಲೂಕು ಉಪ್ಪಾರ ಸಂಘವು
ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಆಯೋಗವು ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಬರುವ ಗಣತಿದಾರರಿಗೆ ಮಾಹಿತಿ ನೀಡುವ ಬಗ್ಗೆ ಸಭೆ ಆಯೋಜಿಸಿದ್ದು ಸಭೆಯ ದಿವ್ಯ ಸಾನಿಧ್ಯವನ್ನು ಶ್ರೀ ಪುರುಷೋತ್ತಮಾನಂದ ಪುರಿ ಸ್ವಾಮೀಜಿಗಳು ವಹಿಸಿ ಮಾತನಾಡಿದರು.
ತಮ್ಮ ಕುಟುಂಬದ ಸದಸ್ಯರ ನೈಜ ಮಾಹಿತಿಗಳನ್ನು ಒದಗಿಸಲು ಮತ್ತು ಸಮೀಕ್ಷೆಯ ನಮೂನೆಯ ಕಾಲಂ 9 ರಲ್ಲಿ ಜಾತಿಯನ್ನು ಕೋಡ್ ನಂ.A1465 ರ *ಉಪ್ಪಾರ* ಎಂದೇ ನಮೂದಿಸಲು, ಮತ್ತು ಕಾಲಂ ನಂ.10 ರಲ್ಲಿ ತಮ್ಮ-ತಮ್ಮ ಉಪಜಾತಿ ಇದ್ದಲ್ಲಿ,ಇಲ್ಲದಿದ್ದಲ್ಲಿ ಅಥವಾ ಗೊತ್ತಿಲ್ಲದಿದ್ದರೆ ಇಲ್ಲ
ಎಂದು ನಮೂದಿಸುವಂತೆ ಸಮಾಜದ ಜನರಿಗೆ ಕರೆ ನೀಡಿದರು.
ಉಪ್ಪಾರರ ವಾಸ್ತವ ಚಿತ್ರಣ ಸಮೀಕ್ಷೆಯಲ್ಲಿ ಹೊರ ಹೊಮ್ಮುವಂತೆ ನೋಡಿಕೊಳ್ಳಲು ಆದೇಶ ನೀಡಿದರು,ಜಿಲ್ಲಾ ಮತ್ತು ತಾಲ್ಲೂಕುಗಳ ಸಮಾಜದ ಮುಖಂಡರುಗಳು,
ಸಂಘಟನೆಗಳು ಭಾಗಿಯಾಗಿದ್ದರು.
ಈ ವೇಳೆ ತಾಲ್ಲೂಕು ಉಪ್ಪಾರ ಸಂಘದ ಅಧ್ಯಕ್ಷ ಪಿ.ಕೆ.ಪರಪ್ಪ, ಕೆಪಿಸಿಸಿ ಸದಸ್ಯ ಎಂ.ಪಿ.ಶಂಕರ್, ಸಿ.ತಿಪ್ಪೇಶಪ್ಪ, ಆರ್.ಲಕ್ಷ್ಮಯ್ಯ, ಸುಮಂಗಳ,ಅನಿತಾ,ಮಧುರೆ ನಟರಾಜ್,ಮಹಿಳಾ ಸಂಘದ ಅಧ್ಯಕ್ಷೆ ಭಾಗೀರಥಮ್ಮ, ಆರ್.ಕುಮಾರಪ್ಪ, ವೈ.ಕೆ. ರಾಜೇಶ್,ಧನಂಜಯ,ಎಲ್ ರಂಗಪ್ಪ ,ಎನ್.ಟಿ. ಭೈರಲಿಂಗಪ್ಪ , ಸೋಮಸಂದ್ರ ರಾಮಚಂದ್ರಪ್ಪ , ಚಂದ್ರಯ್ಯ, ಎಂ.ಹೆಚ್.ಶೇಖರ್, ಅರಲಹಳ್ಳಿ ನಿಂಗಪ್ಪ , ಕೊಂಡಾಪುರ ವಿನಯ್ ,ನಿ, ಉಪನ್ಯಾಸಕರಾದ ಮಲ್ಲಪ್ಪ, ಮಂಜುನಾಥ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.
