Close Menu
chitradurga hoysala
  • HOME
  • ದೇಶ ವಿದೇಶ
  • ಜಿಲ್ಲಾ ಸುದ್ದಿ
  • ಅಪರಾಧ
  • ಸಂಪಾದಕರ ನೋಟ
Facebook X (Twitter) Instagram
Sunday, January 25
Facebook X (Twitter) Instagram LinkedIn VKontakte
chitradurga hoysala
  • HOME
  • ದೇಶ ವಿದೇಶ
  • ಜಿಲ್ಲಾ ಸುದ್ದಿ
  • ಅಪರಾಧ
  • ಸಂಪಾದಕರ ನೋಟ
chitradurga hoysala
  • HOME
  • ದೇಶ ವಿದೇಶ
  • ಜಿಲ್ಲಾ ಸುದ್ದಿ
  • ಅಪರಾಧ
  • ಸಂಪಾದಕರ ನೋಟ
You are at:Home » Blog » ರಾಜಕೀಯದಿಂದ ದೂರವಿರಲು ಭಕ್ತರ ಸಹಕಾರ ಅವಶ್ಯಕ – ಶಾಂತವೀರ ಸ್ವಾಮೀಜಿಗಳು ಅಭಿಪ್ರಾಯ
Uncategorized

ರಾಜಕೀಯದಿಂದ ದೂರವಿರಲು ಭಕ್ತರ ಸಹಕಾರ ಅವಶ್ಯಕ – ಶಾಂತವೀರ ಸ್ವಾಮೀಜಿಗಳು ಅಭಿಪ್ರಾಯ

KumarBy KumarJanuary 11, 2026No Comments3 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email
Spread the love

ರಾಜಕೀಯದಿಂದ ದೂರವಿರಲು ಭಕ್ತರ ಸಹಕಾರ ಅವಶ್ಯಕ – ಶಾಂತವೀರ ಸ್ವಾಮೀಜಿಗಳು ಅಭಿಪ್ರಾಯ

ಕಾವೇರಿ ಮಂಜಮ್ಮ ನವರು,

ಚಿತ್ರದುರ್ಗ ಹೊಯ್ಸಳ ಸುದ್ದಿ.

ಹೊಸದುರ್ಗ :

ಪ್ರಸ್ತುತ ಕಾಲಮಾನದಲ್ಲಿ ಸಾಂಸಾರಿಕ ವ್ಯವಹಾರಿಕ ಅಸಮತೋಲನಕ್ಕೆ ಒಳಗಾಗಿ ಮಾನವ ಜರ್ಜರಿತನಾಗಿದ್ದಾನೆ ಅವರಿಗೆ ಶಾಂತಿ ಹಾಗೂ ಸೂಕ್ತ ಗುರುವಿನ ಮಾರ್ಗದರ್ಶನ ಅವಶ್ಯಕತೆ ಇದೆ ಎಂದು ಶಾಂತವೀರ ಶ್ರೀಗಳ ಹೇಳಿದರು.

ಪಟ್ಟಣದ ಶ್ರೀಕ್ಷೇತ್ರ ಕುಂಚಗಿರಿಯ ಕುಂಚಿಟಿಗ ಮಹಾಸಂಸ್ಥಾನ ಮಠದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಸುಜ್ಞಾನ- ಸಂಗಮ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು ಶ್ರೀಮಠದಲ್ಲಿ ಪಂಚಾಯಿತಿ ಮಾಡುವ ಮೂಲಕ ಅನೇಕ ಸಮಸ್ಯೆಗಳನ್ನು
ಬಗೆಹರಿಸುತಿದ್ದೇವೆ.ಯಾವುದೇ ಕಾರಣಕ್ಕೆ ಭಕ್ತಾದಿಗಳು ಉದ್ವೇಗಕ್ಕೆ ಒಳಗಾಗದೆ ಸಮಾಧಾನದಿಂದ ಜೀವನವನ್ನು ನಡೆಸಬೇಕೆಂದು ಬಯಸುತ್ತೇವೆ ಧ್ಯಾನ.ಪೂಜೆ.ಅಧ್ಯಯನ. ಆಧ್ಯಾತ್ಮಿಕ ಅಂತರ್ಮುಖಿಗಳಾದರೆ,ಯಾವುದೇ ಸಮಸ್ಯೆಗಳನ್ನು ಮೆಟ್ಟಿನಿಲ್ಲುವ ಮನೋಬಲ ವೃದ್ಧಿಸುತ್ತದೆ.

ಜೀವನದಲ್ಲಿ ನಡೆಯುವ ತಲ್ಲಣಗಳಿಂದ ಹೊರಬರಲು ಗುರುವಿನ ಮಾರ್ಗದರ್ಶನ,ಮೌನ,ಧ್ಯಾನ,ಭಜನೆ, ಸತ್ಸಂಗಗಳು ಅತ್ಯಂತ ಪರಿಣಾಮಕಾರಿ ಎಂಬುದನ್ನು ಮನಗಣಬೇಕು ಖಿನ್ನತೆ ಎಂಬುದು ಯುವ ಪೀಳಿಗೆಯ ಸರ್ವೇಸಾಮಾನ್ಯ ಕಾಯಿಲೆಯಾಗಿದೆ ಹಾಗಾಗಿ ಯುವಕರು ಕೇವಲ ಮೋಜು ಮಸ್ತಿಗೆ ಒಳಗಾಗದೆ ಅಧ್ಯಯನ ಸೂಕ್ತ ಮಾರ್ಗದರ್ಶನ ಪಡೆಯುವ ಮೂಲಕ ಬದುಕಿನಲ್ಲಿ ಬೆಳವಣಿಗೆ ಮತ್ತು ಬೆಳಕನ್ನು ಕಾಣಬೇಕು.

ಇವತ್ತಿನ ಯುವ ಜನತೆಗೆ ತಂದೆ ತಾಯಿಗಳು ಬುದ್ಧಿವಾದ ಹೇಳುವುದು ಅಪರಾಧವಾಗಿ ಭಾವಿಸುವ ಯುವಕರ ಸಂಖ್ಯೆಯೇ ಹೆಚ್ಚಾಗಿದೆ ಇಂದಿನ ಯುವ ಪೀಳಿಗೆ ಅರ್ಥೈಸಿಕೊಳ್ಳಬೇಕಾಗಿರುವುದು ತಂದೆ ತಾಯಿಗಳೆ ಮೊದಲ ದೇವರು ಎಂಬ ವಾಸ್ತವ್ಯ ಸತ್ಯವನ್ನ ಅರಿತು ಅವರ ನೆರಳಲ್ಲಿ ಅವರ ಮಾರ್ಗದರ್ಶನದಲ್ಲಿ ಅವರಿಗೆ ನೋವಾಗದಂತೆ ಜೀವನ ನಡೆಸ ಬೇಕಾಗಿರುವುದು ಮಕ್ಕಳ ಕರ್ತವ್ಯ ಮತ್ತು ಜವಾಬ್ದಾರಿ ಎಂದು ಆಶೀರ್ವಚನ ನೀಡಿದರು.

ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಶಿಕ್ಷಕ ಪ್ರಕಾಶ್ ಮಾತನಾಡಿ ಪರಮಪೂಜ್ಯರ ಪೀಠಕ್ಕೆ ಬಂದಾಗಿನಿಂದ ಅನೇಕ ರೀತಿಯ ಸವಾಲುಗಳನ್ನು ಮೆಟ್ಟಿನಿಂತು ಕ್ರಾಂತಿವೀರ ಶ್ರೀಗಳಾಗಿ ಆದರ್ಶ ಗುರುಗಳಾಗಿ ಆದರ್ಶ ರೈತರಾಗಿ ತಮ್ಮ ಸರಳ ಸಜ್ಜನಿಕೆಯ ನಡಬಳಕೆಯ ಮೂಲಕ ಇತರರಿಗೆ ಮಾರ್ಗದರ್ಶಿಗಳಾಗಿದ್ದಾರೆ.

ಸಮಾಜಕ್ಕೆ ತಮ್ಮ ದುಡಿಮೆಯ ಮೂಲಕ ಹತ್ತಾರು ಕಟ್ಟಡಗಳನ್ನು ರಾಜ್ಯಾದ್ಯಂತ ಆಸ್ತಿಗಳನ್ನು ಮಾಡುವ ಮೂಲಕ ಸಮಾಜದ ಕಟ್ಟ ಕಡೆಯ ಬಡವರಿಗೆ ಶಿಕ್ಷಣ ಕೊಡುವ ಹಾಗೂ ರೈತರಿಗೆ ಆರ್ಥಿಕ ಸಬಲೀಕರಣ ಮಾಡುವ ಸಂಕಲ್ಪವನ್ನು ತೊಟ್ಟಿದ್ದಾರೆ ಅವರ ಎಲ್ಲ ಕಾರ್ಯಗಳ ಹಿಂದೆ ನಾನು ನಿಲ್ಲುತ್ತೇನೆ ಮತ್ತು ಆರ್ಥಿಕ ಸಹಾಯ ಮಾಡುತ್ತೇನೆ ಎಂದು ತಿಳಿಸಿದರು.

ಉಪನ್ಯಾಸ ನೀಡಿದ ನಾಗಭೂಷಣ್ ನಡೆವ ನೆಲವೊಂದೇ ಕುಡಿಯುವ ಜಲ ಒಂದೇ ಆದರೆ ನೆಲ ಒಂದೆಯಾದರೂ ಭಿನ್ನ-ಭಿನ್ನವಾದ ಮರಗಳನ್ನು ಭಿನ್ನ-ಭಿನ್ನವಾದ ಹಣ್ಣುಗಳನ್ನು ಭೂಮಿ ನೀಡುತ್ತದೆ ವಿಜ್ಞಾನ ಯಾವಾಗಲೂ ಸಂದೇಹ ಪಡುತ್ತದೆ ಸುಜ್ಞಾನ ಸಂದೇಶ ಕೊಡುತ್ತದೆ ವಿಜ್ಞಾನ ಮನೆಯನ್ನು ಬೆಳಗಿಸುತ್ತದೆ ಸುಜ್ಞಾನ ಮನಸ್ಸನ್ನು ಪ್ರಕಾಶಿಸುತ್ತದೆ ಶ್ರೀಗಳು ಕೇವಲ ಕುಂಚಗಿರಿಯಲ್ಲಿ ಮಠವನ್ನು ಕಟ್ಟಿಲ್ಲ ನಿಮ್ಮ ಮನಸ್ಸಿನಲ್ಲಿ ಮಠವನ್ನು ಕಟ್ಟುವ ಕಾಯಕ ಮಾಡಿದ್ದಾರೆ ಎಂದು ಹೇಳಿದರು.

ಕುಮಾರಸ್ವಾಮಿ ಮಾತನಾಡಿ ಕಟ್ಟಕಡೆಯ ವ್ಯಕ್ತಿಗಳನ್ನು ಗುರುತಿಸಿದವರು ಬಸವೇಶ್ವರರು ಹಾಗೆ ಅವರ ಪಥದಲ್ಲಿ ಸಾಗುತ್ತಿರುವ ಶಾಂತವೀರ ಶ್ರೀ ಕಟ್ಟ ಕಡೆಯವರನ್ನು ಗುರುತಿಸುವ ಸನ್ಮಾನಿಸುವ ಗೌರವಿಸುವ ಕಾರ್ಯವನ್ನು ಮಾಡುತ್ತಿದ್ದಾರೆ ಮಠಮಾನ್ಯಗಳಿಂದ ಮಾತ್ರ ಸಾಧ್ಯ ಗುರುಪರಂಪರೆಯಿಂದ ಮಾತ್ರ ಜನಸಾಮಾನ್ಯರನ್ನು ಎತ್ತಿ ಹಿಡಿಯುವ ಪ್ರೋತ್ಸಾಹಿಸುವ ಕೆಲಸವಾಗುತ್ತದೆ ಸಿದ್ದಗಂಗಾ ಶ್ರೀಗಳ ದಾರಿಯಲ್ಲಿ ಶ್ರೀಗಳು ನಡೆಯುತ್ತಿರುವುದು ಸಂತಸ ತಂದಿದೆ ಎಂದರು.

ಶಿಕ್ಷಕಿ ವಿಜಯ ಲಕ್ಷ್ಮಿ ಮಾತನಾಡಿ ಬೆಂಗಳೂರಿನ ಕಾರ್ಮಿಕರೇ ಹೆಚ್ಚು ವಾಸಿಸುವ ಪೀಣ್ಯದಲ್ಲಿ ಶ್ರೀಮಠದ ಆಶ್ರಯದಲ್ಲಿ ನಡೆಯುತ್ತಿರುವ ಪ್ರೌಢಶಾಲೆಯ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಶಾಂತವೀರ ಶ್ರೀಗಳು ವರ್ಷಕ್ಕೆ ನಾಲ್ಕರಿಂದ ಆರು ಲಕ್ಷ ಹಣವನ್ನು ಬಡವರ ವಿದ್ಯಾಭ್ಯಾಸಕ್ಕಾಗಿ ಕೊಡುತ್ತಿರುವ ಆಶ್ರಯದಾತರು ನಮ್ಮ ಶಾಲೆ ಮುಚ್ಚುವ ಸ್ಥಿತಿಯಲ್ಲಿದ್ದಾಗ ಕ್ರಾಂತಿವೀರ ಶ್ರೀಗಳು ನಮ್ಮನ್ನು ಕಾಪಾಡಿ ಮುಳುಗುತ್ತಿದ್ದ ನಮ್ಮ ಬದುಕನ್ನು ಎತ್ತಿ ಕಾಪಾಡಿದ ನಮ್ಮ ಗುರುಗಳು ಎಂದು ಕೃತಜ್ಞತೆ ಸಮರ್ಪಿಸಿದ್ದರು.

ಅಧ್ಯಕ್ಷತೆವಹಿಸಿ ಮಾತ್ನಡಿದ ಶಿಕ್ಷಕ ಅಶೋಕ ಅವರು ಶಾಂತವೀರ ಶ್ರೀಗಳನ್ನು ಕಳೆದ 20 ವರ್ಷದಿಂದ ಬಲ್ಲೆ ನಮ್ಮ ಗ್ರಾಮದ ಪಕ್ಕದ ಗ್ರಾಮದವರು ಸಧ್ಯ ಶ್ರೀಗಳು ಶೂನ್ಯದಿಂದ ಮಠವನ್ನು ಕಟ್ಟಿದ ಪ್ರತಿ ತಿಂಗಳು ಸಂಸ್ಕಾರ ಕಲಿಸುವ ಜ್ಞಾನ ಸಂಗಮ ಸಮಸ್ಯೆಗಳಿಗೆ ನ್ಯಾಯ ಒದಗಿಸುವ ಸಂಗಮ ನ್ಯಾಯ ಪೀಠ ವಿದೇಶದಲ್ಲಿರುವ ಭಕ್ತರನ್ನು ಸಂಘಟಿಸಲು ಪ್ರವಾಸ ಮಠದ ಜೊತೆ ಜೊತೆಗೆ ಮನಸ್ಸನ್ನು ಕಟ್ಟುವ ಅವರ ತುಡಿತ ಸಮಾಜಕ್ಕೆ ಬೆಳಕಾಗಿದೆ ದೊಡ್ಡ ಸಮಾರಂಭಕ್ಕೆ ಮಾಡುವ ದುಂದು ವೆಚ್ಚವನ್ನು ಸಮಾಜದ ಸತ್ಕಾಲಿಕೆ ಬಳಸುತ್ತೇವೆಂದು ಶ್ರೀಗಳು ತಿಳಿಸಿದ್ದಾರೆ.

ಪ್ರತಿ ತಿಂಗಳ ಸುಜ್ಞಾನ ಸಂಗಮ ಸಮಾಜದ ಸೌಹಾರ್ದತೆಗೆ ಮಾನವ ಸಂಬಂಧಕ್ಕೆ ಪುಷ್ಟಿ ನೀಡುವ ಮೂಲಕ ಪರಸ್ಪರರಲ್ಲಿ ಪ್ರೀತಿ ವಿಶ್ವಾಸ ಗೌರವ ಹೆಚ್ಚಾಗಲು ಸತ್ಸಂಗ ಸಾಧು ದರ್ಶನ ಆಧ್ಯಾತ್ಮಿಕ ಪತ ನಮ್ಮೆಲ್ಲರಿಗೂ ಅನಿವಾರ್ಯ ಹಬ್ಬಗಳಿಗೆ ಸಿಗುವ ಉಚಿತ ಹುಡುಗರಿಗೆ ಮುಗಿಬೀಡುವ ಜನ ನಿಧಾನಕ್ಕೆ ಆಧ್ಯಾತ್ಮಕ್ಕೆ ಸುಜ್ಞಾನಕ್ಕೆ ಆಸಕ್ತಿ ತೋರಿಸದಿದ್ದರೆ ಮುಂದೆ ಸಮಾಜ ಸುಸ್ಥಿರವಾಗಿರಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಸಮಾರಂಭದಲ್ಲಿ ಸಂಗಮೇಶ್ವರ ನಿಧಿ ಸಂಗ್ರಹಿಸುವ ಸಂಗಮೇಶ್ವರ ಯುವ ವೇದಿಕೆಯನ್ನು ಉದ್ಘಾಟಿಸಲಾಯಿತು.
ಭಜನಾ ಸೇವೆಯನ್ನು ಕುಂಚಶ್ರೀ ಸಂಗಮೇಶ್ವರ ಮಹಿಳಾ ಸಂಘದವರು ನೆರವೇರಿಸಿದರು.

ಈ ವೇಳೆ ಸಮಾರಂಭದಲ್ಲಿ ಶ್ರೀ ಸಂಗಮೇಶ್ವರ ಸಮುದಾಯ ಭವನ ಸಮಿತಿ. ಶ್ರೀ ಸಂಗಮೇಶ್ವರರ ನೌಕರರ ಸಂಘ. ಶ್ರೀ ಸಂಗಮೇಶ್ವರ ಯುವ ವೇದಿಕೆ. ಕುಂಚಶ್ರೀ ಸಂಗಮೇಶ್ವರ ಮಹಿಳಾ ಸಂಘ.
ಶಾಂತವೀರಶ್ರೀ ಸೌಹಾರ್ದ ಪತ್ತಿನ ಸಹಕಾರ ಸಂಘದ ಪದಾಧಿಕಾರಿಗಳು ಭಕ್ತರಂದ ಭಾಗವಹಿಸಿದ್ದರು.

*ಬಾಕ್ಸ್ ಲೈನ್*
ನಮ್ಮ ಮಠವನ್ನು ಜಾತ್ಯತೀತ ಮತ್ತು ಪಕ್ಷಾತೀತವಾಗಿ ಬೆಳೆಸಲು ಇಚ್ಚಿಸಿದ್ದು ಯಾವುದೇ ರಾಜಕೀಯ ವ್ಯಕ್ತಿಗಳ ಪರವು ಇಲ್ಲ ಯಾರ ವಿರುದ್ಧವು ಇಲ್ಲ ಪ್ರಜಾಪ್ರಭುತ್ವದ ಆಶಯದಂತೆ ಮತದಾರರೇ ತೀರ್ಮಾನವೇ ಅಂತಿಮ ನಮ್ಮ ಹೆಸರನ್ನು ಯಾರಾದರೂ ದುರುಪಯೋಗಪಡಿಸಿಕೊಂಡರೆ ತಕ್ಷಣ ಶ್ರೀಮಠಕ್ಕೆ ತಿಳಿಸಿ ಮಠಗಳು ಧಾರ್ಮಿಕ ಮತ್ತು ಶೈಕ್ಷಣಿಕ ಸಾಂಸ್ಕೃತಿಕ ಸೇವಾ ಕೇಂದ್ರಗಳಾಗಬೇಕು ಎಂಬುದು ನಮ್ಮ ಆಶಯ ಇದಕ್ಕೆ ಭಕ್ತಾದಿಗಳು ಸಹಕರಿಸಬೇಕು ಮತ್ತು ಅನುಷ್ಠಾನಗೊಳಿಸಬೇಕು ನಮ್ಮನ್ನು ಮತ್ತು ಮಠವನ್ನು ಯಾವುದೇ ಕಾರಣಕ್ಕೂ ಜಾತಿಗೆ ಪಕ್ಷಕ್ಕೆ ಗುರುತಿಸುವ ಅವಕಾಶ ಕೊಡಬೇಡಿ*

*ಕೋರ್ಟ್* 1.
ವಿವಿಧ ಕಡೆ ನನ್ನ ಸಾಹಿತ್ಯ ಬರವಣಿಗೆ ಗುರುತಿಸಿ ಗೌರವಿಸಿದ್ದಾರೆ,ಆದರೆ ನನ್ನ ತಾಲ್ಲೂಕಿನಲ್ಲಿನ ಪ್ರತಿಷ್ಠಿತ ಮಠ,ಮತ್ತು ಸಮಾಜ ಸೇವೆಯಿಂದ ಅನ್ನ, ಅಕ್ಷರ, ಕೃಷಿಗೆ ಹೆಚ್ಚು ಹೊತ್ತು ನೀಡುತ್ತಿರುವ ಈ ಮಠದಲ್ಲಿ ಸನ್ಮಾನಿಸಿದ್ದಕ್ಕೆ ಶ್ರೀ ಮಠಕ್ಕೆ ಆಭಾರಿಯಾಗಿದ್ದೇನೆ ಎಂದು ತಿಳಿಸಿದರು.

ಯುವಕವಿ
ಸಂಕಲ್ಪ ಸದಾಶಿವ

Share. Facebook Twitter Pinterest LinkedIn Tumblr Email
Previous ArticleThe Ultimate Guide to Online Betting in Zambia
Next Article ಸರ್ಕಾರಿ ನೌಕರರಲ್ಲಿ ಕಾರ್ಯಕ್ಷಮತೆ,ಸೌಹಾರ್ದತೆಯನ್ನು ಉತ್ತೇಜಿಸುವ ಕ್ರೀಡೆ ಸಹಕಾರಿ
Kumar
  • Website

Related Posts

Discover the Best Skrill and Neteller Gambling Enterprises for Smooth Online Gaming

January 24, 2026

No Deposit Gambling Establishment Benefit Codes: Your Guide to Free Gambling Enterprise Benefits

January 24, 2026

Highest Possible Payout Online Casinos: A Guide to Winning Big

January 24, 2026
Leave A Reply Cancel Reply

Search
Tags
Amazing gadgets Apartment guides Beauty essentials Biggest fashion angel Brave Business Business insurances Business schools Celebrity photos Cheapest flights Civil societies culture Culture tips Electronic gadgets Fashion Fashion shows Feature featured fitness Flight scanners Food Good stock quotes Interview questions leisure Lifestyle Link Luxury homes Makeup artists Music Open source software Pretty dresses Preventative medicines Sports Staff Pick Stockcharts Studio apartments Tech Tech reviews Topic Trending Trip activities Unbelievable home decor Vaccination schedules Weight loss meal plans Weight loss supplements

Corporate clients and leisure travelers has been relying on Groundlink for dependable safe, and professional chauffeured car end service in major cities across World.

  • Facebook
  • Twitter
  • Instagram
  • Pinterest
Don't Miss

Cresus casino juridiction jeu scuris et lgal

Discover the Best Skrill and Neteller Gambling Enterprises for Smooth Online Gaming

No Deposit Gambling Establishment Benefit Codes: Your Guide to Free Gambling Enterprise Benefits

Highest Possible Payout Online Casinos: A Guide to Winning Big

ಚಿತ್ರದುರ್ಗ ಹೊಯ್ಸಳ ನ್ಯೂಸ್ – ಚಿತ್ರದುರ್ಗ ಜಿಲ್ಲೆಯ ತಾಜಾ ಸುದ್ದಿಗಳು, ರಾಜಕೀಯ, ಸಮಾಜ, ಸಂಸ್ಕೃತಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ಬೆಳವಣಿಗೆಗಳನ್ನು ತಲುಪಿಸುವ ವಿಶ್ವಾಸಾರ್ಹ ಕನ್ನಡ ಸುದ್ದಿ ಜಾಲತಾಣ.

Popular Posts

Cresus casino juridiction jeu scuris et lgal

January 25, 2026

Discover the Best Skrill and Neteller Gambling Enterprises for Smooth Online Gaming

January 24, 2026

No Deposit Gambling Establishment Benefit Codes: Your Guide to Free Gambling Enterprise Benefits

January 24, 2026
Copyright © 2026 CHITRADURGA HOYSALA. Designed by WEBBRAHMA.
  • About
  • Contact
  • Advertise
  • Terms
  • FAQ
  • Policy

Type above and press Enter to search. Press Esc to cancel.