Recent Posts

October 16, 2021

Chitradurga hoysala

Kannada news portal

ರಾಷ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಪ್ರಗತಿ ಪರಿಶೀಲನಾ ಸಭೆ;ಆಯೋಗದ ಸದಸ್ಯರಾದ ಡಾ; ಆರ್.ಜಿ.ಆನಂದ್

ಆಯೋಗದ ಸದಸ್ಯರಾದ ಡಾ; ಆರ್.ಜಿ.ಆನಂದ್ರಾಷ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಪ್ರಗತಿ ಪರಿಶೀಲನಾ ಸಭೆ;ಆಯೋಗದ ಸದಸ್ಯರಾದ ಡಾ; ಆರ್.ಜಿ.ಆನಂದ್
ಚಿತ್ರದುರ್ಗ,ಜುಲೈ
ದೇಶದಲ್ಲಿ ಕೋವಿಡ್-19 ಮೊದಲ ಅಲೆಗಿಂತ ಎರಡನೇ ಅಲೆ ಸಾಕಷ್ಟು ನಷ್ಟ ಉಂಟು ಮಾಡಿದ್ದು ಸಂಭಾವ್ಯ ಮೂರನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾ ಆಡಳಿತದಿಂದ ಕೈಗೊಂಡ ಕ್ರಮಗಳನ್ನು ಪರಿಶೀಲನೆ ನಡೆಸಲಾಗಿದ್ದು ತೃಪ್ತಿ ತಂದಿದೆ ಎಂದು ಆಯೋಗದ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯರಾದ ಡಾ; ಆರ್.ಜಿ.ಆನಂದ್ ತಿಳಿಸಿದರು.
ಅವರು ಜೂನ್ 30 ರಂದು ಬುದ್ದ ನಗರದ ಆರೋಗ್ಯ ಕೇಂದ್ರದಲ್ಲಿ ತಾಯಂದಿರಿಗೆ ಹಾಕಿದ ಲಸಿಕಾ ಕಾರ್ಯಕ್ರಮ ಪರಿಶೀಲನೆ ನಡೆಸಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಕೋವಿಡ್ ಹಿನ್ನಲೆಯಲ್ಲಿ ಈಗಾಗಲೇ ಜಿಲ್ಲಾ ಆಡಳಿತದಿಂದ ಸಿದ್ದತೆಯನ್ನು ಕೈಗೊಳ್ಳಲಾಗಿದೆ. ಕೋವಿಡ್ ತಡೆಗಟ್ಟಲು ಹೆಚ್ಚು ಜನರಿಗೆ ಲಸಿಕೆ ಹಾಕುವುದು, ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಪಾಡುವುದು ಬಹಳ ಮುಖ್ಯವಾಗಿದೆ. ಜಿಲ್ಲೆಯಲ್ಲಿ ತಾಯಂದಿರಿಗೆ ಲಸಿಕೆಯನ್ನು ಹಾಕಲಾಗುತ್ತಿದೆ.
ತಾಯಾಂದಿರಿಗೆ ಲಸಿಕೆ ಹಾಕುವುದರಿಂದ ಮಗುವಿಗೂ ಇದರಿಂದ ರಕ್ಷಣೆ ಸಿಗುತ್ತಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಸುಮಾರು 4000 ಹೆಚ್ಚು ತಾಯಂದಿರಿಗೆ ಲಸಿಕೆ ಹಾಕಲಾಗಿದೆ. ಮಕ್ಕಳ ದೈಹಿಕ ಹಾಗೂ ಬೌದ್ದಿಕ ಬೆಳೆವಣಿಗೆಗೆ ಹೆಚ್ಚು ಆಟವಾಡಬೇಕು. ಆದರೆ ಮಕ್ಕಳು ಕೋವಿಡ್ ಹಿನ್ನಲೆಯಲ್ಲಿ ಹೆಚ್ಚು ಆಟವಾಡಲು ಸಾಧ್ಯವಾಗುತ್ತಿಲ್ಲ. ಮಕ್ಕಳು ಹೆಚ್ಚು ಮನೆಯಲ್ಲಿಯೇ ಕಾಲ ಕಳೆಯುವುದರಿಂದ ಅವರ ಮೊಬೈಲ್ ಬದಲಾಗಿ ಕೈಗೆ ಬಣ್ಣಗಳ ಆಟಿಕೆಗಳನ್ನು ನೀಡುವುದರಿಂದ ಅವರ ಕಣ್ಣುಗಳ ಆರೋಗ್ಯದಲ್ಲಿ ವೃದ್ದಿ ಹಾಗೂ ಬೌದ್ದಿಕತೆ ಮಟ್ಟವು ವೃದ್ದಿಯಾಗಲಿದೆ. ಆದ್ದರಿಂದ ಪೋಷಕರು ತಮ್ಮ ಮಕ್ಕಳ ಕೈಗೆ ವಿವಿಧ ಬಣ್ಣ, ವೀಭಿನ್ನತೆಯುಳ್ಳ ಆಟಿಕೆ ಸಾಮಾನುಗಳನ್ನು ನೀಡಲು ಸಲಹೆ ನೀಡಿದ ಅವರು ಇದು ವೈಜ್ಞಾನಿಕವಾಗಿಯು ದೃಢಪಟ್ಟಿರುತ್ತದೆ ಎಂದರು.
ಮಕ್ಕಳ ಮೇಲಾಗುವ ದೌರ್ಜನ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಕ್ಕಳ ರಕ್ಷಣಾ ಘಟಕ ಚನ್ನಾಗಿ ಕೆಲಸ ಮಾಡಬೇಕು. ಇವರ ರಕ್ಷಣೆಗಾಗಿ ಸ್ಥಾಪಿಸಲಾಗಿರುವ ಸಹಾಯವಾಣಿ ಸರಿಯಾಗಿ ಕೆಲಸ ಮಾಡಬೇಕು ಹಾಗೂ ಇದರ ಮೇಲ್ವಿಚಾರಣೆಯು ಅಷ್ಟೆ ಸಮರ್ಪಕವಾಗಿರಬೇಕು. ರಕ್ಷಣಾ ಸಮಿತಿಯವರು ಕೈಗೊಳ್ಳುವ ಕೆಲಸದ ಬಗ್ಗೆ ಜಿಲ್ಲಾ ಆಡಳಿತದ ಗಮನಕ್ಕೆ ತರಬೇಕು ಎಂದರು.
ಮಕ್ಕಳ ಬಾಲ್ಯವಿವಾಹವನ್ನು ಕಡ್ಡಾಯವಾಗಿ ತಡೆಗಟ್ಟಬೇಕೆಂದ ಅವರು ಮಹಿಳೆಯರು ಸ್ವಾವಲಂಭಿಯಾಗಿ ಬದುಕಲು ಬೇಕಾದ ಎಲ್ಲಾ ಆರ್ಥಿಕಾಭಿವೃದ್ದಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ಕೈಗೊಳ್ಳಲು ತಿಳಿಸಿದರು.
ಸಂಭಾವ್ಯ ಕೋವಿಡ್ 3 ನೇ ಅಲೆಯ ಸಿದ್ದತೆ ಬಗ್ಗೆ ಪರಿಶೀಲಿಸಿದ ಸದಸ್ಯರು ಜಿಲ್ಲಾ ಆಡಳಿತ ಎಲ್ಲಾ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಂಡಿದ್ದಕ್ಕೆ ಶ್ಲಾಘಿಸಿದರು.
ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ; ಕೆ.ನಂದಿನಿದೇವಿ, ಜಿಲ್ಲಾ ರಕ್ಷಣಾಧಿಕಾರಿ ಜಿ.ರಾಧಿಕಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ; ರಂಗನಾಥ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ರಾಜಾನಾಯ್ಕ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

You may have missed