Close Menu
chitradurga hoysala
  • HOME
  • ದೇಶ ವಿದೇಶ
  • ಜಿಲ್ಲಾ ಸುದ್ದಿ
  • ಅಪರಾಧ
  • ಸಂಪಾದಕರ ನೋಟ
Facebook X (Twitter) Instagram
Saturday, January 24
Facebook X (Twitter) Instagram LinkedIn VKontakte
chitradurga hoysala
  • HOME
  • ದೇಶ ವಿದೇಶ
  • ಜಿಲ್ಲಾ ಸುದ್ದಿ
  • ಅಪರಾಧ
  • ಸಂಪಾದಕರ ನೋಟ
chitradurga hoysala
  • HOME
  • ದೇಶ ವಿದೇಶ
  • ಜಿಲ್ಲಾ ಸುದ್ದಿ
  • ಅಪರಾಧ
  • ಸಂಪಾದಕರ ನೋಟ
You are at:Home » Blog » ಸಾಮಾನ್ಯ ಮಹಿಳೆಯಾಗಿ ಇತಿಹಾಸ ಪುಟ ಸೇರಿದ ಧೀರ ಮಹಿಳೆ ಒನಕೆ ಓಬವ್ವ: ಶಾಸಕ ಟಿ ರಘುಮೂರ್ತಿ
Uncategorized

ಸಾಮಾನ್ಯ ಮಹಿಳೆಯಾಗಿ ಇತಿಹಾಸ ಪುಟ ಸೇರಿದ ಧೀರ ಮಹಿಳೆ ಒನಕೆ ಓಬವ್ವ: ಶಾಸಕ ಟಿ ರಘುಮೂರ್ತಿ

KumarBy KumarNovember 13, 2025No Comments2 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email
Spread the love

ಸಾಮಾನ್ಯ ಮಹಿಳೆಯಾಗಿ ಇತಿಹಾಸ ಪುಟ ಸೇರಿದ ಧೀರ ಮಹಿಳೆ ಒನಕೆ ಓಬವ್ವ: ಶಾಸಕ ಟಿ ರಘುಮೂರ್ತಿ

ಚಿತ್ರದುರ್ಗ ಹೊಯ್ಸಳ
ಚಳ್ಳಕೆರೆ:

ಏಳು ಸುತ್ತಿನ ಕೋಟೆಯ ರಕ್ಷಣೆ ಮಾಡಲು ಇದಂತ ಕಾವಲುಗರಾನ ಹೆಂಡತಿಯಾಗಿದ ಸಾಮಾನ್ಯ ಮಹಿಳೆ ತನ್ನ ಗಂಡ ಊಟ ಮಾಡುವ ಸಮಯದಲ್ಲಿ ಸಿಹಿನೀರು ತರಲು ಹೋದಾಗ ಕೋಟೆಯನ್ನು ಆಕ್ರಮಿಸಲು ಬಂದ ಹೈದರಾಲಿಯ ಸೈನ್ಯದ ಸೈನಿಕರನ್ನು ಯಾವುದೇ ಶಸ್ತ್ರಾಭ್ಯಾಸ ಇಲ್ಲದೆ ಒನಕೆ ಯಿಂದಲೇ ಶತ್ರುಗಳ ದಾಳಿಯನ್ನು ಹಿಮ್ಮೆಟ್ಟಿ ಕೋಟೆಯನ್ನು ರಕ್ಷಣೆ ಮಾಡಿದ ಧೀರ ಮಹಿಳೆ ಒನಕೆ ಓಬವ್ವನವರು ಇತಿಹಾಸ ಪುಟ ಸೇರಿದ ಧೀರ ಮಹಿಳೆ ಎಂದು ಶಾಸಕ ಟಿ ರಘುಮೂರ್ತಿ ಹೇಳಿದರು.

ನಗರದ ತಾಲೂಕು ಕಚೇರಿ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಸಮಿತಿ ಹಾಗೂ ಛಲವಾದಿ ಸಮುದಾಯದ ವತಿಯಿಂದ ಹಮ್ಮಿಕೊಂಡಿದ್ದ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಕಿತ್ತೂರು ರಾಣಿ ಚೆನ್ನಮ್ಮ ರಾಣಿ ಅಬ್ಬಕ್ಕ, ಝಾನ್ಸಿ ರಾಣಿ, ಸಾವಿತ್ರಿ ಬಾಯಿ ಫುಲೆ, ಹೆಸರು ಮಾಡಿದ್ದಾರೆ. ಒನಕೆ ಓಬವ್ವರಂತಹ ಅನೇಕ ಧೀಮಂತ ಮಹಿಳೆಯರು ಹೋರಾಡಿದ್ದಾರೆ ಮನಸ್ಸು ಮಾಡಿದರೆ ಮಹಿಳೆ ಏನು ಬೇಕಾದರೂ ಸಾಧಿಸಬಹುದು ಎಂದು ತೋರಿಸಿಕೊಟ್ಟಂತಹ ಮಹಿಳೆಯರಾಗಿದ್ದಾರೆ ತಮ್ಮ ಶೌರ್ಯ ತ್ಯಾಗ ಬಲಿದಾನದ ಮೂಲಕ ಇತಿಹಾಸದ ಪುಟವನ್ನು ಸೇರಿದ್ದಾರೆ ಚಲನಚಿತ್ರ ನಿರ್ದೇಶಕ ಪುಟ್ಟಣ್ಣ ಕಣಗಾಲ್ ರವರು ವಿಷ್ಣುವರ್ಧನ್ ಅಭಿನಯದ ತಮ್ಮ ನಾಗರಹಾವು ಚಿತ್ರದಲ್ಲಿ ಓಬವ್ವನ ಪಾತ್ರವನ್ನು ಉತ್ತಮ ರೀತಿಯಲ್ಲಿ ಚಿತ್ರಿಸಿದ್ದರಿಂದ ಇಂದಿನ ಪೀಳಿಗೆಗೂ ಸಹ ಓಬವ್ವರ ಸಾಹಸ ತಿಳಿಯಲು ಈ ಚಲನಚಿತ್ರ ಸಾಕ್ಷಿಯಾಗಿದೆ ಇಂದಿನ ಯುವ ಮಹಿಳೆಯರಿಗೆ ಒಬ್ಬವರ ಹೋರಾಟದ ಆದರ್ಶಗಳು ಸ್ಪೂರ್ತಿಯಾಗಬೇಕು ಹಾಗೆಯೇ ಚಲವಾದಿ ಸಮುದಾಯ ಶೈಕ್ಷಣಿಕವಾಗಿ ಆರ್ಥಿಕವಾಗಿ ಇನ್ನಷ್ಟು ಸದೃಢರಾಗಬೇಕಿದೆ ಎಂದರು.

ತಹಶೀಲ್ದಾರ್ ರೆಹಾನ್ ಪಾಷ ಮಾತನಾಡಿ ಚಿತ್ರದುರ್ಗದ ಕೋಟೆಯ ರಕ್ಷಣೆಗೆ ಒಬ್ಬ ಕಾವಲುಗಾರನ ಪತ್ನಿಯಾಗಿ ಯಾವುದೇ ಯುದ್ಧದ ಪರಿಣಿತಿ ಪಡೆಯದೆ ಕೇವಲ ತನ್ನ ಸಾಹಸದ ಮೂಲಕ ಶತ್ರುಗಳನ್ನು ಹಿಮ್ಮೆಟ್ಟಿಸಿದ ವೀರ ಮಹಿಳೆ ಒನಕೆ ಓಬವ್ವರಾಗಿದ್ದಾರೆ ಅವರ ಧೈರ್ಯ ಮತ್ತು ಸಾಹಸ ಇಂದಿನ ಸಮಾಜಕ್ಕೆ ಮಾದರಿಯಾಗಿದೆ. ಕರ್ನಾಟಕದ ಯಾವ ಮೂಲೆಗೆ ಹೋದರೂ ಚಿತ್ರದುರ್ಗ ಕೋಟೆಯ ರಕ್ಷಣೆಗೆ ಹೋರಾಡಿದ ಒಬ್ಬವರ ಸಾಹಸವನ್ನು ಪ್ರತಿಯೊಬ್ಬರು ಕೊಂಡಾಡುತ್ತಾರೆ ಚಿತ್ರದುರ್ಗ ಎಂದರೆ ಮೊದಲು ನೆನಪಿಗೆ ಬರುವುದೇ ಮದಕರಿ ನಾಯಕರ ಕೋಟೆ ಇಂತಹ ಏಳು ಸುತ್ತಿನ ಕೋಟೆಯನ್ನು ಶತ್ರುಗಳ ದಾಳಿಯಿಂದ ರಕ್ಷಿಸಿ ತನ್ನ ಕರ್ತವ್ಯ ಪ್ರಜ್ಞೆಯನ್ನು ಮೆರೆದಿದ್ದರು ಇಂತಹ ಕರ್ತವ್ಯ ಪ್ರಜ್ಞೆಯನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದರು.

ಬಸವಲಿಂಗ ಮಹಾ ಸ್ವಾಮೀಜಿ ಮಾತನಾಡಿ ಬುದ್ಧ ಬಸವ ಅಂಬೇಡ್ಕರ್ ಮಾರ್ಗ ದರ್ಶನದಲ್ಲಿ ಎಲ್ಲರು ಸಮಾನರು ನಾವು ಬದಲಾವಣೆ ಪರಿವರ್ತನೆ ಮೂಲಕ ಸಮಾಜದಲ್ಲಿ ಬದಲಾಗಬೇಕು. ಸಂಘಟನೆ ಮಾಡಿ ಶೈಕ್ಷಣಿಕವಾಗಿ ಮುಂದೆ ಬರಬೇಕು, ಬಸವ ಶಿಕ್ಷಣದಿಂದ ಪ್ರತಿಯೊಬ್ಬರನ್ನು ಮೇಲಕ್ಕೆ ಎತ್ತುವ ಕೆಲಸ ಮಾಡಿದ್ದಾರೆ. ಇದರಿಂದ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸದೃಢರಾಗಿ ಮುಂದೆ ಬರಲು ಮಕ್ಕಳನ್ನ ವಿದ್ಯಾವಂತರನ್ನಾಗಿ ಮಾಡಿ ಮಕ್ಕಳನ್ನು ದಾರಿ ತಪ್ಪದಂತೆ ನೋಡಿಕೊಳ್ಳಿ ಎಂದರು

ಛಲವಾದಿ ಮಹಾಸಭಾ ರಾಜ್ಯಧ್ಯಕ್ಷೆ ವಾಣಿ ಶಿವರಾಮ್ ಮಾತನಾಡಿ ಒನಕೆ ಓಬವ್ವ ಚಿತ್ರದುರ್ಗ ಕೋಟೆಯನ್ನು ರಕ್ಷಣೆ ಮಾಡಿದರಲ್ಲದೆ ರಾಜನೀತಿ ಸ್ವಾಮಿ ನಿಷ್ಠೆ ಸಾಹಸ ಪ್ರವೃತ್ತಿಯನ್ನು ಮೈಗೋಡಿಸಿಕೊಂಡಿದ್ದರು ಇವರು ಮಹಿಳೆಯರಿಗೆ ಪ್ರೇರಕ ಶಕ್ತಿಯಾಗಿದ್ದರು ಮುಂದಿನ ಪೀಳಿಗೆಗೆ ಓಬವ್ವ ರವರನ್ನು ಸ್ಮರಿಸುವ ಕಾರ್ಯವಾಗಬೇಕು ಎಂದರು.

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ, ವೃತ್ತ ನಿರೀಕ್ಷಕ ಕೆ ಕುಮಾರ್ ಛಲವಾದಿ ಮಹಾಸಭಾದ ರಾಜ್ಯಾಧ್ಯಕ್ಷೆ ವಾಣಿ ಶಿವರಾಮ್, ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ್, ಜಿಲ್ಲಾ ಪಂಚಾಯತಿ ಕೆಡಿಪಿ ನಾಮ ನಿರ್ದೇಶನ ಸದಸ್ಯ ರಂಗಸ್ವಾಮಿ, ಮಾಜಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಭದ್ರಯ್ಯ, ತಾಲ್ಲೂಕು ಛಲವಾದಿ ಮಹಾಸಭಾದ ಅಧ್ಯಕ್ಷ ರಾಮಕೃಷ್ಣಪ್ಪ, ಉಪಾಧ್ಯಕ್ಷ ಕುಶ ,ಮುಖಂಡರಾದ ಸಿಟಿ ಶ್ರೀನಿವಾಸ, ನಿಜಲಿಂಗಪ್ಪ, ಓಂಕಾರ ಮೂರ್ತಿ, ರವೀಂದ್ರ, ಪರಮೇಶ್ವರಪ್ಪ, ಜಯರಾಮಪ್ಪ, ಜಯವೀರಾಚಾರಿ, ಮಲ್ಲಿಕಾರ್ಜುನ್, ಮಂಜುಳಮ್ಮ ಉಪಸ್ಥಿತರಿದ್ದರು.

Share. Facebook Twitter Pinterest LinkedIn Tumblr Email
Previous Articleಸಾರಿಗೆ ಬಸ್ ನಿಲ್ದಾಣದ ಅರಮನೆ ಹೋಟೆಲ್ ಕರ್ಮಕಾಂಡ ಬಯಲು ಮಾಡಿದ ಸಾರ್ವಜನಿಕರು
Next Article The Impact of Artificial Intelligence on Casino Operations
Kumar
  • Website

Related Posts

No Account Casino Sites: The Future of Online Betting

January 23, 2026

The Ultimate Overview to Recruitment Software

January 23, 2026

Exploring the Advantages of Online Psychology Therapy

January 23, 2026
Leave A Reply Cancel Reply

Search
Tags
Amazing gadgets Apartment guides Beauty essentials Biggest fashion angel Brave Business Business insurances Business schools Celebrity photos Cheapest flights Civil societies culture Culture tips Electronic gadgets Fashion Fashion shows Feature featured fitness Flight scanners Food Good stock quotes Interview questions leisure Lifestyle Link Luxury homes Makeup artists Music Open source software Pretty dresses Preventative medicines Sports Staff Pick Stockcharts Studio apartments Tech Tech reviews Topic Trending Trip activities Unbelievable home decor Vaccination schedules Weight loss meal plans Weight loss supplements

Corporate clients and leisure travelers has been relying on Groundlink for dependable safe, and professional chauffeured car end service in major cities across World.

  • Facebook
  • Twitter
  • Instagram
  • Pinterest
Don't Miss

No Account Casino Sites: The Future of Online Betting

The Ultimate Overview to Recruitment Software

Exploring the Advantages of Online Psychology Therapy

Online Psychologist Diagnosis: A Comprehensive Guide

ಚಿತ್ರದುರ್ಗ ಹೊಯ್ಸಳ ನ್ಯೂಸ್ – ಚಿತ್ರದುರ್ಗ ಜಿಲ್ಲೆಯ ತಾಜಾ ಸುದ್ದಿಗಳು, ರಾಜಕೀಯ, ಸಮಾಜ, ಸಂಸ್ಕೃತಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ಬೆಳವಣಿಗೆಗಳನ್ನು ತಲುಪಿಸುವ ವಿಶ್ವಾಸಾರ್ಹ ಕನ್ನಡ ಸುದ್ದಿ ಜಾಲತಾಣ.

Popular Posts

No Account Casino Sites: The Future of Online Betting

January 23, 2026

The Ultimate Overview to Recruitment Software

January 23, 2026

Exploring the Advantages of Online Psychology Therapy

January 23, 2026
Copyright © 2026 CHITRADURGA HOYSALA. Designed by WEBBRAHMA.
  • About
  • Contact
  • Advertise
  • Terms
  • FAQ
  • Policy

Type above and press Enter to search. Press Esc to cancel.