ಸಾರಿಗೆ ಬಸ್ ನಿಲ್ದಾಣದ ಅರಮನೆ ಹೋಟೆಲ್ ಕರ್ಮಕಾಂಡ ಬಯಲು ಮಾಡಿದ ಸಾರ್ವಜನಿಕರು
ಅರಮನೆ ಹೋಟೆಲ್ ನಲ್ಲಿ ಕಳಪೆ ಅಕ್ಕಿಯಿಂದ ಆಹಾರ ಪದಾರ್ಥ ತಯಾರಿಸುತ್ತಾರೆ, ಎಂದು ಅಡುಗೆ ತಯಾರಿಸುವ ಭಟ್ಟರೆ ಇಲ್ಲಿನ ಊಟ ತಿಂಡಿ ಮಾಡುತ್ತಿಲ್ಲ
ವರದಿ: ದ್ಯಾಮಕುಮಾರ್. ಟಿ ಗೋಪನಹಳ್ಳಿ
ಚಿತ್ರದುರ್ಗ ಹೊಯ್ಸಳ
ಚಳ್ಳಕೆರೆ: ಅರಮನೆ ಹೋಟೆಲ್ ಮಾಲೀಕರು ಗ್ರಾಹಕರಿಗೆ ದಿನ ನಿತ್ಯ ನೀಡುವ ತಿಂಡಿಗೆ ಕಳಪೆ ಅಕ್ಕಿಯನ್ನು ಹಿಟ್ಟಿನ ಗಿರಣಿಗೆ ಹಾಕಿಸುವಗ ರೇಡ್ ಹ್ಯಾಂಡ್ ಆಗಿ ಹಿಡಿದು ತರಾಟೆಗೆ ತೆಗೆದು ಕೊಂಡು ಹೋಟೆಲ್ ಕರ್ಮಕಾಂಡ ಬಯಲು ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಹೌದು ಚಳ್ಳಕೆರೆ ನಗರದ ಸಾರಿಗೆ ಬಸ್ ನಿಲ್ದಾಣದಲ್ಲಿ ಇರುವ ಅರಮನೆ ಹೋಟೆಲ್ ಮಾಲೀಕರು ಅಕ್ಕಿಯಲ್ಲಿ ಕಸ ಕಡ್ಡಿ ಗುಟುಕ್ಕ ಪದಾರ್ಥ ಹುಳಗಳು ತುಂಬಿರುವ ಕಳಪೆ ಗುಣಮಟ್ಟದ ಅಕ್ಕಿಯನ್ನು ಸಂತೆ ಮೈದಾನದ ಶ್ರೀ ಲೋಕೇಶ್ ಫ್ಲೋರ್ ಮಿಲಿನಲ್ಲಿ ಹಿಟ್ಟು ಬಿಡಿಸಲು ಬಂದಾಗ ಸಾರ್ವಜನಿಕರೇ ಕಲ್ಲು ಮಣ್ಣು ಮಿಶ್ರಣದ ಅಕ್ಕಿಯನ್ನು ನೋಡಿ ಹೋಟೆಲ್ ಮಾಲೀಕರು ಗ್ರಾಹಕರಿಗೆ ಯಾವ ರೀತಿ ಮೋಸ ಮಾಡಿ ಆಹಾರ ಪದಾರ್ಥಗಳನ್ನು ನೀಡಿ ಹೋಟೆಲ್ ನಡೆಸುತ್ತಿರುವ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳಪೆ ಆಹಾರ ಪದಾರ್ಥಗಳ ಬಳಸಿ ಹೆಚ್ಚು ಬೆಲೆಗೆ ಊಟ ತಿಂಡಿ ಮಾರಾಟ: ನಗರದ ಹೃದಯ ಭಾಗದಿಂದ ಕೂದಲಾಳತೆ ದೂರದಲ್ಲಿ ಇರುವ ಇರುವ ಸಾರಿಗೆ ಬಸ್ ನಿಲ್ದಾಣದ ಆವರಣದಲ್ಲಿ ಇರುವ ಅರಮನೆ ಹೋಟೆಲ್ ಮಾಲೀಕರು ಕಡಿಮೆ ಬೆಲೆಗೆ ಕಳಪೆ ಗುಣಮಟ್ಟದ ಅಕ್ಕಿ, ಹುರುಳಿ, ಕುಸುಮೆ, ತಂದು ಕ್ಲೀನಿಂಗ್ ಮಾಡಿಸದೆ ಹಿಟ್ಟಿನ ಗಿರಣಿಗೆ ಹಾಕಿಸಿಕೊಂಡು ಇಟ್ಟನು ತಂದು ಅದರಲ್ಲಿ ದೋಸೆ, ಇಡ್ಲಿ, ವಡೆ, ಪಡು, ಇಗೆ ನಾನಾ ಬಗೆಯ ಅಡುಗೆ ಪದಾರ್ಥ ತಯಾರಿಸಿ ಗ್ರಾಹಕರಿಗೆ ಹೆಚ್ಚಿನ ಬೆಲೆಗೆ ಊಟ ತಿಂಡಿ ಮಾರಾಟ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಅಡುಗೆ ತಯಾರಿಸುವ ಭಟ್ಟರೆ ಇಲ್ಲಿನ ಊಟ ಸೇವನೆ ಮಾಡುತ್ತಿಲ್ಲ: ಅರಮನೆ ಹೋಟೆಲ್ ನಲ್ಲಿ ಸಾಕಷ್ಟು ಅಡುಗೆ ತಯಾರಿಸುವ ಅಡುಗೆ ಭಟ್ಟರೆ ಇಲ್ಲಿನ ಊಟ ತಿಂಡಿ ಮಾಡುತ್ತಿಲ್ಲ, ಏಕೆಂದರೆ ಮಾಲೀಕರು ಯಾವ ರೀತಿಯ ಕಳಪೆ ಗುಣಮಟ್ಟದ ಸಾಮಗ್ರಿಗಳನ್ನು ತಂದು ಹೋಟೆಲ್ ನೆಡೆಸುತ್ತಿದ್ದಾರೆ ಎಂದು ತಿಳಿದುಕೊಂಡಿದ್ದಾರೆ, ಆದರಿಂದ ಇಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು ಪ್ರತಿ ದಿನ ಬೇರೆ ಹೋಟೆಲ್ ಗಳಿಗೆ ಹೋಗಿ ಊಟ ತಿಂಡಿ ಮಾಡುತ್ತಾರೆ ಎಂದು ನಗರದ ಸ್ಥಳೀಯರು ಆರೋಪಿಸಿದ್ದಾರೆ.
ದಿನನಿತ್ಯ ಸಾವಿರಾರು ಗ್ರಾಹಕರು ಬರುವ ಹೋಟೆಲ್: ಸಾರಿಗೆ ಬಸ್ ನಿಲ್ದಾಣದಲ್ಲಿ ಇರುವ ಅರಮನೆ ಹೋಟೆಲ್ ಗೆ ದಿನನಿತ್ಯ ನಾಗರೀಕರು, ವಿದ್ಯಾರ್ಥಿಗಳು, ವೃದ್ಧರು, ಬರುತ್ತಾರೆ. ಹಾಗೂ ಸಾವಿರಾರು ಸಂಖ್ಯೆಯಲ್ಲಿ ಬೆಂಗಳೂರು, ಮೈಸೂರು, ತುಮಕೂರು, ಬಳ್ಳಾರಿ, ಮಂತ್ರಾಲಯ, ರಾಯಚೂರು, ದಾವಣಗೆರೆ, ನಾನಾ ಜಿಲ್ಲೆಗೆ ತೆರಳುವ ಮಾರ್ಗದ ಬಸುಗಳಲ್ಲಿ ಪ್ರಯಾಣಿಕರು ಸಹ ನಿಲ್ದಾಣದನ ಹೋಟೆಲ್ ಗೆ ಬಂದು ಊಟ ತಿಂಡಿ ಮಾಡವ ಗ್ರಾಹಕರಿಗೆ ಈ ರೀತಿ ಕಳಪೆ ಆಹಾರ ಕೊಟ್ಟರೆ ಅವರ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಮರೆತು ಮಾಲೀಕರು ಹೋಟೆಲ್ ನೆಡೆಸುತ್ತಿದ್ದಾರೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ಕಳಪೆ ಅಕ್ಕಿ ಬಳಸಿ ಆಹಾರ ತಯಾರಿಸಿ ಗ್ರಾಹಕರಿಗೆ ನೀಡಿ ಮೋಸ ಮಾಡುತ್ತಿರುವ ಹೋಟೆಲ್ ಗಳ ಮೇಲೆ ಈಗಲಾದರೂ ಸಂಬಂಧಪಟ್ಟ ಆಹಾರ ಇಲಾಖೆಯ ಅಧಿಕಾರಿಗಳು ಯಾವ ರೀತಿಯ ಕ್ರಮ ಕೈ ಗೊಳುತ್ತಾರೆ ಎಂದು ಕಾದು ನೋಡಬೇಕಿದೆ.
