January 26, 2025

Chitradurga hoysala

Kannada news portal

ಅಶೋಕ್‍ಬಾದರದಿನ್ನಿಯವರ ಅಘಾದವಾದ ಪ್ರತಿಭೆ ಇನ್ನು ಜೀವಂತವಾಗಿದೆ : ಚನ್ನಯ್ಯಸ್ವಾಮೀಜಿ

1 min read

ಚಿತ್ರದುರ್ಗ :

ರಂಗಭೂಮಿ ಕಲೆಗೆ ಜಾತಿ, ಮತ, ಧರ್ಮ, ಪಂಥದ ಸೋಂಕಿಲ್ಲ ಎಂದು ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯಸ್ವಾಮೀಜಿ ಹೇಳಿದರು.
ಬಾದರದಿನ್ನಿ ಆಟ್ರ್ಸ್ ಅಕಾಡೆಮಿ, ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ ಬೆಂಗಳೂರು ಇವರ ಸಹಯೋಗದೊಂದಿಗೆ ತ.ರಾ.ಸು.ರಂಗಮಂದಿರದಲ್ಲಿ ಶುಕ್ರವಾರ ಆರಂಭಗೊಂಡ ಬಾದರದಿನ್ನಿ ರಂಗೋತ್ಸವ ಎರಡು ದಿನಗಳ ರಂಗ ಸಂಗೀತ ನಾಟಕಗಳ ಪ್ರದರ್ಶನದ ಸಾನಿಧ್ಯ ವಹಿಸಿ ಮಾತನಾಡಿದರು.

ಅಶೋಕ್‍ಬಾದರದಿನ್ನಿಯವರಲ್ಲಿ ನಿಖರವಾದ ವಿಚಾರಧಾರೆಯಿತ್ತು. ಅವರ ರೂಪಕ, ನಾಟಕಗಳು ಇಂದಿಗೂ ಪ್ರಖ್ಯಾತಿಯನ್ನು ಪಡೆದಿವೆ. ಭೌತಿಕವಾಗಿ ಅವರು ನಮ್ಮೊಂದಿಗೆ ಇಲ್ಲದಿರಬಹುದು. ಆದರೆ ಅವರಲ್ಲಿದ್ದ ಅಘಾದವಾದ ಪ್ರತಿಭೆ ಇನ್ನು ಜೀವಂತವಾಗಿದೆ. ರಂಗಭೂಮಿಯಲ್ಲಿ ಅಪಾರ ಶಿಷ್ಯವೃಂದವನ್ನು ಬೆಳಸಿ ಕಣ್ಮರೆಯಾಗಿದ್ದಾರೆ. ಕಲಾವಿದರು ನಮ್ಮ ನಡುವೆ ಇರಬೇಕು. ಅದಕ್ಕಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕಲಾವಿದರಿಗೆ ಪ್ರೋತ್ಸಾಹಿಸಿದಾಗ ಮಾತ್ರ ರಂಗಭೂಮಿ ಚಟುವಟಿಕೆಗಳು ನಿರಂತರವಾಗಿ ನಡೆಯಲು ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ವೀರೇಶ್ ಮಾತನಾಡಿ ನೂರಾರು ನಾಟಕ ರೂಪಕಗಳನ್ನು ನಿರ್ದೇಶಿಸಿರುವ ರಂಗಭೂಮಿ ಕಲಾವಿದ ಅಶೋಕ್ ಬಾದರದಿನ್ನಿಗೂ ನಮಗೆ ಅನೇಕ ವರ್ಷಗಳ ನಂಟಿದೆ. ಸಿರಿಗೆರೆ, ಸಾಣೆಹಳ್ಳಿ ಸೇರಿದಂತೆ ನಾಡಿನ ನಾನಾ ಕಡೆ ಅವರ ನಾಟಕಗಳು ಪ್ರದರ್ಶನಗೊಂಡು ಇಂದಿಗೂ ಪ್ರೇಕ್ಷಕರ ಮನದಲ್ಲಿ ಉಳಿದಿದೆ. ಅಂಬೇಡ್ಕರ್, ಬುದ್ದ, ಬಸವ ಇವರುಗಳೆಲ್ಲರೂ ತಮ್ಮ ಮರಣದ ನಂತರ ಇನ್ನು ನೆನಪಿನಲ್ಲಿ ಉಳಿದಿದ್ದಾರೆ. ಅದೇ ರೀತಿ ಅಶೋಕ್‍ಬಾದರದಿನ್ನಿ ಕೂಡ ತಮ್ಮ ನಾಟಕ ರೂಪಕಗಳ ಮೂಲಕ ಇನ್ನು ಪ್ರೇಕ್ಷಕರ ಮನದಲ್ಲಿ ಬೇರೂರಿದ್ದಾರೆಂದು ಸ್ಮರಿಸಿದರು.
ರಂಗಭೂಮಿ ಕಲಾವಿದರ ಬದುಕು ಕಷ್ಟದಲ್ಲಿರುವುದರಿಂದ ಪ್ರೋತ್ಸಾಹ ಬೇಕಿದೆ ಎಂದು ಪ್ರೇಕ್ಷಕರಲ್ಲಿ ಮನವಿ ಮಾಡಿದರು.
ರಂಗ ಸಂಗೀತ ನಾಟಕಗಳ ಪ್ರದರ್ಶನವನ್ನು ತಬಲಾ ಬಾರಿಸುವ ಮೂಲಕ ಉದ್ಗಾಟಿಸಿದ ಕಿರುತೆರೆ ನಟಿ ಸಿತಾರ ಮಾತನಾಡಿ ನನ್ನ ರಂಗಭೂಮಿ ಜೀವನ ಚಿತ್ರದುರ್ಗದಿಂದಲೇ ಆರಂಭವಾಯಿತು. ಅಶೋಕ್ ಬಾದರದಿನ್ನಿ ರಂಗ ತಂಡ ಕಟ್ಟಿಕೊಂಡು ಅಮೋಘವಾದ ನಾಟಕ ರೂಪಕಗಳನ್ನು ಪ್ರದರ್ಶಿಸಿ ಇಂದಿಗೂ ರಂಗಭೂಮಿಯಲ್ಲಿ ಮನೆ ಮಾತಾಗಿ ಉಳಿದಿದ್ದಾರೆ. ಚಿತ್ರರಂಗ, ರಂಗಭೂಮಿಯಲ್ಲೂ ತಮ್ಮಲ್ಲಿನ ಅದ್ಬುತವಾದ ಕಲೆಯನ್ನು ಪ್ರದರ್ಶಿಸಿದ್ದಾರೆಂದು ಗುಣಗಾನ ಮಾಡಿದರು.
ಹಿರಿಯ ಪತ್ರಕರ್ತ ಜಿ.ಎಸ್.ಉಜ್ಜಿನಪ್ಪ ಮಾತನಾಡುತ್ತ ದೊಡ್ಡ ರಂಗ ನಿರ್ದೇಶಕರಾಗಿದ್ದ ಅಶೋಕ್ ಬಾದರದಿನ್ನಿ ತಮ್ಮಲ್ಲಿನ ಅಮೋಘವಾದ ಪ್ರತಿಭೆಯಿಂದ ಪ್ರೇಕ್ಷಕರ ಮನ ಗೆದ್ದರು. ರಂಗಭೂಮಿಯಲ್ಲಿ ಸಾಮ್ರಾಟನಂತೆ ಮೆರೆದ ಅಶೋಕ್‍ಬಾದರದಿನ್ನಿ ನಾಟಕಗಳು ನಾಡಿನೆಲ್ಲೆಡೆ ಪ್ರದರ್ಶನಗೊಂಡಿವೆ. ಕಲಾವಿದರನ್ನು ಪ್ರೇಕ್ಷಕರುಗಳು ಮರೆಯಬಾರದು. ಪ್ರೋತ್ಸಾಹಿಸಿ ಬೆಳೆಸಬೇಕು ಎಂದು ಹೇಳಿದರು.
ನಿವೃತ್ತ ಪ್ರಾಚಾರ್ಯರಾದ ರುದ್ರಪ್ಪ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ, ಎ.ಜಿ.ಬಸವರಾಜಪ್ಪ ವೇದಿಕೆಯಲ್ಲಿದ್ದರು.

About The Author

Leave a Reply

Your email address will not be published. Required fields are marked *