April 20, 2024

Chitradurga hoysala

Kannada news portal

ಜಿಲ್ಲೆಯ ಪಕ್ಷದ ಎಲ್ಲಾರ ಜೊತೆ ಸೇರಿ ಅದ್ದೂರಿಯಾಗಿ ಉದ್ಘಾಟನೆ ಮಾಡೋಣ: ಸಚಿವ ಬಿ.ನಾಗೇಂದ್ರ

1 min read

ವಾಲ್ಮೀಕಿ ಭವನ ಪೂರ್ಣಗೊಳಿಸಲು ಅಗತ್ಯ ಅನುದಾನ ಬಿಡುಗಡೆಗೆ ಕ್ರಮ:

ಜಿಲ್ಲೆಯ ಪಕ್ಷದ ಎಲ್ಲಾರ ಜೊತೆ ಸೇರಿ ಅದ್ದೂರಿಯಾಗಿ ಉದ್ಘಾಟನೆ ಮಾಡೋಣ: ಸಚಿವ ಬಿ.ನಾಗೇಂದ್ರ

ಮಾಜಿ ಸಚಿವ ಎಚ್.ಆಂಜನೇಯ ನವರು ಬಹಳ ಅಚ್ಚುಕಟ್ಟಾಗಿ ಭವನದ ನಕ್ಷೆಯನ್ನು ಮಾಡಿಸಿದ್ದಾರೆ.

ಚಿತ್ರದುರ್ಗ ಹೊಯ್ಸಳ ನ್ಯೂಸ್/

ಚಿತ್ರದುರ್ಗ:

ವಾಲ್ಮೀಕಿ ಭವನ ಪೂರ್ಣಗೊಳಿಸಲು ಅಗತ್ಯವಿರುವ ಅನುದಾನ ನೀಡಿ ಪೂರ್ಣಗೊಳಿಸಿ ಅದ್ದೂರಿಯಾಗಿ ಉದ್ಘಾಟನೆ ನೇರವೇರಿಸಲಾಗುತ್ತದೆ ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಬಿ.ನಾಗೇಂದ್ರ ಅವರು ಅಭಯ ನೀಡಿದರು.

ಭಾನುವಾರದಂದು ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಚಿವರು ಮದಕರಿನಾಯಕ ಪ್ರತಿಮೆಗೆ ಮಾಲರ್ಪಣೆ ಮಾಡಿ ನಂತರ ನಾಯಕ‌ ಸಮಾಜದವರು ಮನವಿಯಂತೆ ವಾಲ್ಮೀಕಿ ಭವನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಚಿತ್ರದುರ್ಗ ನಾಯಕ ಸಮಾಜದ ಅಧ್ಯಕ್ಷ ಬಿ.ಕಾಂತರಾಜ್ ಅವರು ಈಗ ಹಾಕಿರುವ ಖುರ್ಚಿಗಳು ಫಿಕ್ಸ್ ಇವೆ ಅವನ್ನು ತೆಗೆದು ಅಗತ್ಯವಿದ್ದಾಗ ಬಳಸುವಂತೆ ಕುರ್ಚಿಗಳು ಹಾಕಬೇಕು,

ಶೌಚಾಲಯ ಸಮಸ್ಯೆ ಮತ್ತು ಭವನದ ಮೇಲೆ ಪ್ರತಿಮೆಗಳು ನಿರ್ಮಿಸಬೇಕು.ಸಚಿವರಿಗೆ ಮನವಿ ಮಾಡಿದರು ಇದಕ್ಕೆ ಉತ್ತವರಿಸಿದ ಸಚಿವ ಬಿ.ನಾಗೇಂದ್ರ ಅವರು ನಮ್ಮ‌ಸಮಾಜದ ಅಭಿವೃದ್ಧಿಗೆ ನಾನು ಬದ್ದವಾಗಿದ್ದೇನೆ.
ಭವನದ ಅಭಿವೃದ್ಧಿಗೆ ಅಗತ್ಯವಿರುವ ಹಣಕ್ಕೆ ನಾಯಕ‌ ಸಮಾಜದ ಮುಖಂಡರು ಮನವಿ ಮಾಡಿದ್ದಾರೆ. ಇದು ನನ್ನ ಜವಬ್ದಾರಿಯಾಗಿದೆ ಎಂದುರು.ತಕ್ಷಣವೆ ಇಲಾಖೆಯ ಎಂಡಿ ಅವರಿಗೆ ಫೋನ್ ಮಾಡಿ ಮಾತನಾಡಿದ ಸಚಿವರು ವಾಲ್ಮೀಕಿ ಜಯಂತಿ ನಂತರ ಬೆಂಗಳೂರಿನ ನಮ್ಮ ಇಲಾಖೆ ಪಿಎಸ್, ಇಂಜಿನಿಯರ್ ಗಳ ತಂಡ ಚಿತ್ರದುರ್ಗಕ್ಕೆ ಆಗಮಿಸಿ ಭವನ ಪೂರ್ಣಗೂಳಲು ಎಷ್ಟು ಹಣ ಅಗತ್ಯವಿದೆ ಎಂದು ಅಂದಾಜು ಪಟ್ಟಿ ಮಾಡಿ ಕೂಡಲೇ ಹಣ ಬಿಡುಗಡೆ ಮಾಡಲು ಅಗತ್ಯಕ್ರಮಕ್ಕೆ ಸೂಚಿಸಿದರು.

ವಾಲ್ಮೀಕಿ ಭವನವದ ಅಭಿವೃದ್ಧಿ ವಿಚಾರಕ್ಕೆ ಸರ್ಕಾರ ಬಂದವಿದೆ. ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಭವನ ಸರಿಪಡಿಸಿಕೊಳ್ಳಿ, ಭವನ ಸುಂದರವಾಗಿದೆ,ಮಾಜಿ ಸಚಿವ ಎಚ್.ಆಂಜನೇಯನವರು ಬಹಳ ಅಚ್ಚುಕಟ್ಟಾಗಿ ಭವನದ ನಕ್ಷೆಯನ್ನು ಮಾಡಿಸಿದ್ದಾರೆ ಎಂದರು. ಜನರಿಗೆ ಸದುಪಯೋಗ ಆಗಬೇಕು. ಆ ದೃಷ್ಟಿಯಿಂದ ಎಲ್ಲಾ ಅಭಿವೃದ್ಧಿಗೆ ಸಹಕಾರ ನೀಡುತ್ತೇನೆ. ಜಿಲ್ಲೆಯ ಎಲ್ಲಾರ ಜೊತೆ ಸೇರಿ ಅದ್ದೂರಿಯಾಗಿ ಉದ್ಘಾಟನೆ ಮಾಡೋಣ ಎಂದು ಸಮುದಾಯದ ಮುಖಂಡರಿಗೆ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಹೆಚ್.ಆಂಜನೇಯ,ನಾಯಕ ಸಮಾಜದ ತಾಲೂಕು ಅಧ್ಯಕ್ಷ ಬಿ.ಕಾಂತರಾಜ್, ಕಾಂಗ್ರೆಸ್ ಎಸ್ಟಿ ಸೆಲ್ ಜಿಲ್ಲಾ ಅಧ್ಯಕ್ಷ ಅಂಜಿನಪ್ಪ,ಶ್ರೀಅಹೋಬಲ ಟಿವಿಎಸ್ ಮಾಲೀಕ ಅರುಣ್,ಮುಖಂಡರಾದ ಗೋಪಾಲಸ್ವಾಮಿ ನಾಯಕ್,ದರ್ಶನ್ ಇಂಗಳದಾಳ್,ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಧಿಕಾರಿ ಓ.ಪರಮೇಶ್ವರಪ್ಪ,ಮ್ಯಾನೇಜರ್ ದಯಾನಂದ್ ಸೇರಿ ಸಮಾಜದ ಮುಖಂಡರು,ಅಧಿಕಾರಿಗಳು ಇದ್ದರು.

About The Author

Leave a Reply

Your email address will not be published. Required fields are marked *