ವಾರ್ತಾ ಇಲಾಖೆ: ವರ್ಗಾವಣೆಗೊಂಡ ನೌಕರರಿಗೆ ಬೀಳ್ಕೊಡುಗೆ. ಚಿತ್ರದುರ್ಗ ಮಾಧ್ಯಮದವರ ಒಡನಾಟ ತುಂಬಾ ಆತ್ಮೀಯವಾಗಿತ್ತು: ಬಿ.ವಿ.ತುಕಾರಾಂ ರಾವ್
1 min readಚಿತ್ರದುರ್ಗ, ಆ.14:
ಚಿತ್ರದುರ್ಗ ವಾರ್ತಾ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿ ಮುಂಬಡ್ತಿ ಹೊಂದಿ ವರ್ಗಾವಣೆಗೊಂಡ ಇಲಾಖೆಯ ನೌಕರರಿಗೆ ಕಚೇರಿಯಲ್ಲಿ ಗುರುವಾರ ಸನ್ಮಾನಿಸಿ ಆತ್ಮೀಯವಾಗಿ ಬೀಳ್ಕೊಡಲಾಯಿತು.
ಸಹಾಯಕ ನಿರ್ದೇಶಕರಾಗಿ ಮುಂಬಡ್ತಿ ಹೊಂದಿ ದಾವಣಗೆರೆ ಜಿಲ್ಲೆಗೆ ವರ್ಗಾವಣೆಗೊಂಡ ಬಿ.ವಿ.ತುಕಾರಾಂರಾವ್ ಹಾಗೂ ಬೆಂಗಳೂರಿಗೆ ವರ್ಗಾವಣೆಗೊಂಡ ಪ್ರಥಮ ದರ್ಜೆ ಸಹಾಯಕ ಎಚ್.ಟಿ. ನಾಗರಾಜ್ ಅವರಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಿಬ್ಬಂದಿ ಹಾಗೂ ಪತ್ರಕರ್ತರು ಆತ್ಮೀಯವಾಗಿ ಅಭಿನಂದಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಬಿ.ವಿ.ತುಕಾರಾಂರಾವ್, ಸರ್ಕಾರಿ ಕೆಲಸಗಳಲ್ಲಿ ವರ್ಗಾವಣೆ ಸಹಜ ಪ್ರಕ್ರಿಯೆ. ಬೇರೆ ಬೇರೆ ಜಿಲ್ಲೆಗಳಲ್ಲಿ 17 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ಆದರೆ ಚಿತ್ರದುರ್ಗ ಜಿಲ್ಲೆಯಲ್ಲಿನ ವಾತಾವರಣ, ಇಲ್ಲಿನ ಕಚೇರಿ ಸಿಬ್ಬಂದಿಗಳ ಹಾಗೂ ಮಾಧ್ಯಮದವರ ಒಡನಾಟ ಬಹಳ ಆತ್ಮೀಯವಾಗಿತ್ತು ಎಂದು ಸ್ಮರಿಸಿದರು.
ಪ್ರಥಮ ದರ್ಜೆ ಸಹಾಯಕ ಎಚ್.ಟಿ.ನಾಗರಾಜ್ ಅವರು ತಮ್ಮ ಸೇವಾಧಿಯಲ್ಲಿನ ಅನುಭವಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಜಿಲ್ಲಾ ವಾರ್ತಾಧಿಕಾರಿ ಬಿ.ಧನಂಜಯಪ್ಪ ಅಧ್ಯಕ್ಷತೆ ವಹಿಸಿದ್ದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಿಬ್ಬಂದಿಗಳಾದ ಎಚ್. ತಿಪ್ಪಯ್ಯ, ಎಸ್. ಚಂದ್ರಶೇಖರ್, ತರಬೇತಾರ್ಥಿಗಳು ಹಾಗೂ ಮಾಧ್ಯಮದವರು ಉಪಸ್ಥಿತರಿದ್ದರು.