April 17, 2024

Chitradurga hoysala

Kannada news portal

ವಿದ್ಯಾರ್ಥಿಗಳಿಗಾಗಿ ಕಾನೂನು ಅರಿವು ಕಾರ್ಯಗಾರ

1 min read

ವಿದ್ಯಾರ್ಥಿಗಳಿಗಾಗಿ ಕಾನೂನು ಅರಿವು ಕಾರ್ಯಗಾರ

ಚಿತ್ರದುರ್ಗ ಹೊಯ್ಸಳ ನ್ಯೂಸ್/

ಹೊಸದುರ್ಗ:

ಮಡಿಲು ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಆಲಘಟ್ಟ ಚಿತ್ರದುರ್ಗ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊಸದುರ್ಗ ಇವರ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗಾಗಿ ಕಾನೂನು ಅರಿವು ಕುರಿತು ಕಾರ್ಯಕಾರವನ್ನು ಹೊಸ ದುರ್ಗದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಬೆಳಗ್ಗೆ 10:30 ಕ್ಕೆ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಹೊಸದುರ್ಗ ಶಾಸಕರಾದ ಬಿಜಿ ಗೋವಿಂದಪ್ಪ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಬ್ರಮರಾಂಬ ರವರು ವಹಿಸಿಕೊಳ್ಳಲಿದ್ದಾರೆ.

ಸಂಪನ್ಮೂಲ ವ್ಯಕ್ತಿಗಳಾಗಿ ಹೈಕೋರ್ಟ ನ ನಿವೃತ್ತ ನ್ಯಾಯಾಧೀಶರಾದ ಬಿಲ್ಲಪ್ಪ- ಪೋಕ್ಸೋ ವಿಷಯ ಕುರಿತು ಮಾತನಾಡಲಿದ್ದಾರೆ. ಚಿತ್ರದುರ್ಗ ಸಂಚಾರಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಪಿ.ರಾಜುರವರು ಸಂಚಾರಿ ನಿಯಮಗಳ ಕುರಿತು ಮಾತನಾಡಲಿದ್ದಾರೆ. ಎಂ ಕೆ ಹರೀಶ್ ರವರು ಯುವ ಸಮೂಹ ದುಚ್ಛಟಗಳಿಗೆ ಬಲಿಯಾಗುತ್ತಿರುವುದು ಕುರಿತು ಮಾತನಾಡಲಿದ್ದಾರೆ.

ಸಿಎನ್ ಕುಮಾರ್ ಮಡಿಲು ಸಂಸ್ಥೆಯ ಗೌರವಧ್ಯಕ್ಷರು, ಕುಮಾರಸ್ವಾಮಿ ಅಧ್ಯಕ್ಷರು, ಕಿರಣ್ ಉಪಾಧ್ಯಕ್ಷರು, ಆನಂದ್ ಡಿ ಆಲಘಟ್ಟ ಕಾರ್ಯದರ್ಶಿ, ದರ್ಶನ್ ಸಂಘಟನಾ ಕಾರ್ಯದರ್ಶಿ, ಪ್ರದೀಪ್, ಮಹಾಂತೇಶ್, ದ್ಯಾಮ ಕುಮಾರ್, ಪ್ರವೀಣ್ ನಿರ್ದೇಶಕರು ಉಪಸ್ಥಿತಿಯಲ್ಲಿರುವರು ಎಂದು ಮಡಿಲು ಸಂಸ್ಥೆಯ ಕಾರ್ಯದರ್ಶಿ ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *