ವಿವಿಧ ಇಲಾಖೆಗಳಿಗೆ ಸರ್ಕಾರದ ನಾಮ ನಿರ್ದೇಶನ ಸದಸ್ಯರಿಗೆ ಶಾಸಕಿ ಪೂರ್ಣಿಮಾ ಸನ್ಮಾನ
1 min readಹಿರಿಯೂರು: ಶಾಸಕರಾದ ಕೆ ಪೂರ್ಣಿಮಾ ಶ್ರೀನಿವಾಸ ರವರ ಶಿಫಾರಸ್ಸಿನಂತೆ ಈ ಮೇಲ್ಕಂಡ ಬಿಜೆಪಿ ಮುಖಂಡರುಗಳು ವಿವಿಧ ಇಲಾಖೆಗಳಿಗೆ ಸರ್ಕಾರದಿಂದ ನಾಮ ನಿರ್ದೇಶನ ಸದಸ್ಯರಾಗಿ ನೂತನವಾಗಿ ನೇಮಕವಾಗಿರುವುದರಿಂದ ಇಂದು ಶಾಸಕರಾದ ಶ್ರೀಮತಿ ಕೆ ಪೂರ್ಣಿಮಾ ಶ್ರೀನಿವಾಸ ರವರು ತಾಲ್ಲೂಕು ಕಛೇರಿಯಲ್ಲಿ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಗರ್ ಹುಕುಂ ಸಮಿತಿ ಸದಸ್ಯರಾದ ಜಿಪಂ ಮಾಜಿ ಸದಸ್ಯೆ ಶ್ರೀಮತಿ ಕರಿಯಮ್ಮ ಶಿವಣ್ಣ, ಕಬಡ್ಡಿ ಶ್ರೀನಿವಾಸ, ಯಲ್ಲಪ್ಪ, ಎಪಿಎಂಸಿ ಸದಸ್ಯರಾದ ಶ್ರೀ ಓಜಿ. ಬಸವರಾಜ, ಕಾಟನಹಟ್ಟಿ ಈರಣ್ಣ, ಜ್ಯೋತಿ ತಿಪ್ಪೇಸ್ವಾಮಿ, ಭೂ ನ್ಯಾಯ ಮಂಡಳಿ ಸದಸ್ಯರಾದ ವಕೀಲರಾದ ಮ್ಯಾಕ್ಲೂರಹಳ್ಳಿ ಬಸವರಾಜ, ವಕೀಲರಾದ ಸುರೇಶ್, ವಕೀಲರಾದ ರಂಗಸ್ವಾಮಿ, ಟಿಎಪಿಸಿಎಂಎಸ್ ಸದಸ್ಯರಾದ ಪಿ. ಕರಿಯಣ್ಣ, ಡಿಸಿಸಿ ಬ್ಯಾಂಕ್ ನಿರ್ದೇಶಕ ದ್ಯಾಮೆಗೌಡ, ವನ್ಯಜೀವಿ ಪರಿಪಾಲಕ ರಘುರಾಮ್ ರವರನ್ನು ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಉಪಾಧ್ಯಕ್ಷರಾದ ಶ್ರೀ ಡಿ ಟಿ ಶ್ರೀನಿವಾಸ ರವರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷರಾದ ಬಿ ಕೆ ಉಗ್ರಮೂರ್ತಿ, ತಹಶೀಲ್ದಾರ್ ಸತ್ಯನಾರಾಯಣ, ಮುಖಂಡರಾದ ತಮ್ಮಣ್ಣ, ಜಿಪಂ ಸದಸ್ಯೆ ಶ್ರೀಮತಿ ರಾಜೇಶ್ವರಿ, ದಿಂಡಾವರ ಶಿವಣ್ಣ, ಚಿರಂಜೀವಿ ಮುಂತಾದವರು ಉಪಸ್ಥಿತರಿದ್ದರು.