ತುರುವನೂರು ಕಾಲೇಜು ಸ್ಥಳಾಂತರ ವಿಚಾರವಾಗಿ ಡಿಕೆಶಿ ಜೊತೆ ಶಾಸಕ ಟಿ.ರಘುಮೂರ್ತಿ ಚರ್ಚೆ
1 min readಚಳ್ಳಕೆರೆ-ತುರುವನೂರು ಕಾಲೇಜು ಸ್ಥಳಾಂತರ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರವರೊಂದಿಗೆ ಶಾಸಕ ಟಿ.ರಘುಮೂರ್ತಿ ಚರ್ಚಿಸಿದರು.
2014-15ನೇ ಸಾಲಿನಲ್ಲಿ ಬಡ ಮಕ್ಕಳಿಗಾಗಿ ಕಾಂಗ್ರೆಸ್ ಸರ್ಕಾರ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತುರುವನೂರು ಗ್ರಾಮದಲ್ಲಿ ಕಾಲೇಜು ಸ್ಥಾಪನೆ ಮಾಡಿ, ಹೋಬಳಿಯ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಕಾಲೇಜು ಸ್ಥಾಪನೆ ಮಾಡಲಾಗಿದೆ. ಆದರೆ, ಸರ್ಕಾರ ಕಡಿಮೆ ದಾಖಲಾತಿ ನೆಪವೊಡ್ಡಿ ಕಾಲೇಜು ಸ್ಥಳಾಂತರ ಮಾಡುತ್ತಿದೆ. ಕಾಲೇಜು ಸ್ಥಳಾಂತರವಾದಲ್ಲಿ ಆ ಭಾಗದ ನೂರಾರು ವಿದ್ಯಾರ್ಥಿಗಳಿಗೆ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿದಂತಾಗುತ್ತದೆ. ಕಳೆದ ಐದಾರು ದಿನಗಳಿಂದ ನಾನು ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿಸತ್ಯಾಗ್ರಹ ನಡೆಸಿದರೂ ಸರ್ಕಾರ ಮಾತ್ರ ಸ್ಪಂದನೆ ಮಾಡುತ್ತಿಲ್ಲ. ಈ ಕೂಡಲೆ ಸರ್ಕಾರದ ಮೇಲೆ ಒತ್ತಡ ತಂದು ಕಾಲೇಜು ಉಳಿಸಬೇಕೆಂದು ಮನವಿ ಮಾಡಿದರು. ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಇದ್ದರು.