April 20, 2024

Chitradurga hoysala

Kannada news portal

ವಿದ್ಯೆ ಕಲಿಯುವುದರ ಮೂಲಕ ಕತ್ತಲ್ಲಿಂದ ಬೆಳಕಿನ ಕಡೆಗೆ ಸಾಗಿ: ನಿವೃತ್ತ ಹೈಕೋರ್ಟ್ ನ್ಯಾಯಾಧೀಶ ಹೆಚ್.ಬಿಲ್ಲಪ್ಪ

1 min read

ವಿದ್ಯೆ ಕಲಿಯುವುದರ ಮೂಲಕ ಕತ್ತಲ್ಲಿಂದ ಬೆಳಕಿನ ಕಡೆಗೆ ಸಾಗಿ: ನಿವೃತ್ತ ಹೈಕೋರ್ಟ್ ನ್ಯಾಯಾಧೀಶ ಹೆಚ್.ಬಿಲ್ಲಪ್ಪ

CHITRADURGA HOYSALA NEWS/

ವರದಿ:ಕಾವೇರಿ ಮಂಜ್ಮನವರ್

ಹೊಸದುರ್ಗ:

ಶ್ರೇಷ್ಠ ಜೀವನ ಕೊಡುವ ಉದ್ದೇಶದಿಂದ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. ಶಿಕ್ಷಣ ಪಡೆದ ಮಕ್ಕಳು ಸತ್ಯವಂತರಾಗಿ, ಕತ್ತಲಿನಿಂದ ಬೆಳಕಿನೆಡೆಗೆ ಹೋಗಬೇಕು. ಕನ್ನಡವನ್ನು ಅರ್ಥೈಸಿಕೊಂಡು ಸರ್ವ ಜನಾಂಗದ ಸುಂದರ ತೋಟ ಮಾಡಬೇಕು. ಕನ್ನಡ ನಾಡು ನುಡಿ. ಕರ್ನಾಟಕದ ನೆಲ ಜಲ ನಮ್ಮದೆಂಬ ಭಾವನೆ ಪ್ರತಿಯೊಬ್ಬರಲ್ಲೂ ಇರಬೇಕು ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹೆಚ್.ಬಿಲ್ಲಪ್ಪ ಕರೆ ನೀಡಿದರು.

ತಾಲ್ಲೂಕಿನ ಮತ್ತೋಡು ಸಿದ್ಧಗೊಂಡನಹಳ್ಳಿಯ ಸನ್ ಶೈನ್ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಮತ್ತು ಸಾಹಿತಿ ಹಾಗೂ ಕವಿ ನಾಗತಿಹಳ್ಳಿ ಮಂಜುನಾಥ್ ಹೊನ್ನಾರ ಪುಸ್ತಕ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕನ್ನಡ ಭಾಷೆ ಬಗ್ಗೆ ಕೀಳರಿಮೆ ಬೇಡ. ನಾವು ಬದುಕುವ ಭಾಷೆಯದು. ಹಲವರಿಗೆ ಬದುಕು ನೀಡಿರುವ ಶ್ರೀಮಂತ ಭಾಷೆ ಕನ್ನಡ ಎಂದು ಕನ್ನಡದ ಬಗ್ಗೆ ಅಭಿಮಾನ ವ್ಯಕ್ತಪಡಿಸಿದರು.

ಹೊನ್ನಾರ ಕೃತಿ ಬಿಡುಗಡೆ ಮಾಡಿದ ನಿವೃತ್ತ ಡಿಡಿಪಿಐ ಎನ್.ರಮೇಶ್ ಮಾತನಾಡಿ ಶಾಲೆಯ ಕಟ್ಟಡ ಸುಂದರವಾಗಿದ್ದಾರೆ ಸಾಲದು ಅಲ್ಲಿ ಗುಣಾತ್ಮಕವಾದ ಶಿಕ್ಷಣ ನೀಡುವ ಕೆಲಸ ಆಗಬೇಕು. ಮಕ್ಕಳಿಗೆ ಕೇವಲ ಪಠ್ಯ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುವುದರ ಜೊತೆಗೆ ಮಕ್ಕಳಲ್ಲಿರುವ ಕಲೆ ಪ್ರತಿಭೆಯನ್ನು ಹೊರತರುವ ಕೆಲಸವನ್ನು ಶಿಕ್ಷಕರು ಮಾಡಬೇಕಿದೆ. ಮಕ್ಕಳು ಹತ್ತು ಭಾಷೆ ಕಲಿಯಲಿ ಆದರೆ ಮಾತೃ ಭಾಷೆಯ ಬಗ್ಗೆ ಅಭಿಮಾನ ಪ್ರೀತಿ ಇರಲಿ ಎಂದರು.

ಹೊನ್ನಾರ ಕೃತಿಯ ಲೇಖಕ ನಾಗತಿಹಳ್ಳಿ ಮಂಜುನಾಥ್ ಮಾತನಾಡಿ, ಹಲವು ವರ್ಷಗಳ ಪ್ರಯತ್ನದಿಂದಾಗಿ, ಸ್ನೇಹಿತರು, ಹಿತೈಷಿಗಳ ಸಹಕಾರದಿಂದ ಹೊನ್ನಾರ ಪುಸ್ತಕ ಬಿಡುಗಡೆಗೊಂಡಿದೆ. ವಿದ್ಯಾರ್ಥಿ ದೆಸೆಯಲ್ಲಿ ಕುವೆಂಪು ಹಾಗೂ ದಾ.ರಾ. ಬೇಂದ್ರ ಸೇರಿದಂತೆ ಹಲವರ ಸಾಹಿತ್ಯ ಅಧ್ಯಯನದಿಂದಾಗಿ ಕವನ ಬರೆಯಲು ಆರಂಭಿಸಿದೆ. ರೈತರು ಬೇಸಾಯದ ಆರಂಭದಲ್ಲಿ ಹೊನ್ನಾರ ಹೂಡಿ, ನಂತರ ಕೃಷಿ ಚಟುವಟಿಕೆ ಆರಂಭಿಸುತ್ತಾರೆ. ಅದೇ ರೀತಿ ಚೊಚ್ಚಲ ಕವನ ಸಂಕಲನಕ್ಕೆ ‘ಹೊನ್ನಾರ’ ಎಂದು ಹೆಸರಿಡಲಾಗಿದೆ ಎಂದರು.

ತಾಲೂಕು.ಕ.ಸಾ.ಪ ನಿಕಟ ಪೂರ್ವ ಅಧ್ಯಕ್ಷ ಧನಂಜಯ ಮೆಂಗಸಂದ್ರ ಹೊನ್ನಾರ ಕೃತಿ ಕುರಿತು ಉಪನ್ಯಾಸ ನೀಡಿದರು.

ಸುಜ್ಞಾನ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಎಂ. ಶಿವಲಿಂಗಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕ.ಸಾ.ಪ ಪ್ರಧಾನ ಕಾರ್ಯಧರ್ಶಿ ಹುರುಳಿ ಎಂ.ಬಸವರಾಜ್,ಹಿರಿಯ ಪತ್ರಕರ್ತ ಎನ್.ಕೆ.ತಿಪ್ಪೇಸ್ವಾಮಿ(ನಾಗತಿಹಳ್ಳಿ) ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಪಿ. ಓಂಕಾರಪ್ಪ, ಮಾಜಿ ಅಧ್ಯಕ್ಷರುಗಳಾದ ಬಾ.ಮೈಲಾರಪ್ಪ,ರಾಜಣ್ಣ, ಕಸಾಪ ಮತ್ತೋಡು ಹೋಬಳಿ ಅಧ್ಯಕ್ಷ ರಮೇಶ್,
ಹೊನ್ನೇನಹಳ್ಳಿ ಮಂಜುನಾಥ್, ಕವಿಯತ್ರಿ ಕುಮಾರಿ ಎಂ.ಆರ್. ನಳಿನ, ಸೌಮ್ಯಕುಮಾರಿ, ಯುವ ಕವಿ ಲಕ್ಷ್ಮೀಸಾಗರ್, ಚಿತ್ರದುರ್ಗ ಜಗನ್ನಾಥ್, ಪತ್ರಕರ್ತರ ಸಂಘದ ಅಧ್ಯಕ್ಷ ಎನ್.ವಿಶ್ವನಾಥ್‌ ಶ್ರೀರಾಂಪುರ, ತುಂಬಿನಕೆರೆ ಬಸವರಾಜ್, ಪಶು ಸಂಗೋಪನಾ ಇಲಾಖೆಯ ನಿವೃತ್ತ ನೌಕರ ತಿಪ್ಪೇಸ್ವಾಮಿ, ಆರೋಗ್ಯ ಇಲಾಖೆಯ ಹರೀಶ್‌ ಮಡಿವಾಳ್ ಶಾಲಾ ಶಿಕ್ಷಕರುಗಳು ಹಾಗೂ ವಿದ್ಯಾರ್ಥಿಗಳು ಸಾಹಿತ್ಯಾಸಕ್ತರು ಭಾಗವಹಿಸಿದ್ದರು.

About The Author

Leave a Reply

Your email address will not be published. Required fields are marked *