ಗಣೇಶ ಹಬ್ಬಕ್ಕೆ ಮಾರ್ಗ ಸೂಚಿ ಪ್ರಕಟ , ಸರಳವಾಗಿ ಮನೆಯಲ್ಲಿ ಹಬ್ಬ ಮಾಡಿ
1 min readಬೆಂಗಳೂರು : ದೇಶದಾದ್ಯಂತ ನಡೆಯುವ ಗಣೇಶ ಚತುರ್ಥಿ ಹಬ್ಬದ ಸಂಭ್ರಮಕ್ಕೆ ಈಗ ಇದೀಗ ಕೊವೀಡ್ ಅಡ್ಡಿಯಾಗಿದೆ. ಆಗಸ್ಟ್ 22 ರಂದು ನಡೆಯುವ ದೇಶದ ಬೃಹತ್ ಗಣೇಶ ಹಬ್ಬಕ್ಕೆ ಈ ಬಾರಿ ಸಾರ್ವಜನಿಕವಾಗಿ ಗಣೇಶನನ್ನು ಪ್ರತಿಷ್ಟಾಪನೆ ಮಾಡುವುದಕ್ಕೆ ರಾಜ್ಯ ಸರ್ಕಾರ ನಿಷೇಧ ಹೇರಿದೆ.
ರಾಜ್ಯದಲ್ಲಿ ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆ ಸಾರ್ವಜನಿಕವಾಗಿ ಗಣೇಶೋತ್ಸವ ಆಚರಣೆಗೆ ಬ್ರೇಕ್ ನೀಡಲಾಗಿದೆ.
ಗಣೇಶ ಹಬ್ಬದ ಮಾರ್ಗಸೂಚಿ ಹೀಗಿದೆ:
ಗಣೇಶ ಹಬ್ಬವನ್ನ ಸರಳ ರೀತಿಯಲ್ಲಿ ದೇವಸ್ಥಾನ/ಮನೆಗಳಲ್ಲಿಯೇ ಆಚರಣೆ ಮಾಡಬೇಕು.
ಯಾವುದೇ ಕಾರಣಕ್ಕೂ ರಸ್ತೆ, ಮೈದಾನಗಳಲ್ಲಿ ಸಾರ್ವಜನಿಕವಾಗಿ ಪ್ರತಿಷ್ಟಾಪನೆ ಮಾಡಬಾರದು.
ನದಿ,ಕೆರೆ,ಬಾವಿಗಳಲ್ಲಿ,ಕಲ್ಯಾಣಿಗಳಲ್ಲಿ ಗಣೇಶ ಮೂರ್ತಿಯನ್ನ ವಿಸರ್ಜನೆ ಮಾಡುವಂತೆ ಇಲ್ಲ ಎಂದು ಖಡಕ್ ಆದೇಶ ಸರ್ಕಾರ ಹೊರಡಿಸಿದೆ.