ಉಸ್ತವಾರಿ ಸಚಿವ ಶ್ರೀರಾಮುಲು ಅವರ ಸಂದೇಶ ತಿಳಿಸಿದ ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ
1 min readಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ನಗರದ ಜಿಲ್ಲಾ ಪೋಲಿಸ್ ಕವಯಾತ ಮೈದಾನದಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸುದರು.
ಚಿತ್ರದುರ್ಗ: ನಗರದ ಜಿಲ್ಲಾ ಪೋಲಿಸ್ ಕವಾಯತು ಮೈದಾನದಲ್ಲಿ ನಡೆದ 74 ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಕೋವಿಡ್ ನಿಂದ ಬಳಲುತ್ತಿರುವ ಆರೋಗ್ಯ ಸಚಿವರು ಮತ್ತು ಜಿಲ್ಲಾ ಉಸ್ತವಾರಿ ಸಚಿವರಾದ ಶ್ರೀರಾಮುಲು ಅವರು ಸ್ವಾತಂತ್ರ್ಯ ದಿನಾಚರಣೆಗೆ ಬರಲು ಆಗದ ಕಾರಣ ಸಂದೇಶ ಕಳುಸಿದ್ದರು ಅದನ್ನು ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಕೇರಿ ಸಂದೇಶ ತಿಳಿಸಿದರು.
ಗಂಡು ಮೆಟ್ಟಿದ ನಾಡು ಕೋಟೆ ನಗರಿ ಹಿಡಿಂಬ ನಗರಿ ಎಂದೇ ಪ್ರಸಿದ್ದಿ ಪಡೆದಿರುವ ಚಿತ್ರದುರ್ಗ ಜನತಗೆ ಸ್ವಾತಂತ್ರ್ಯ ದಿನಾಚರಣೆ ತಿಳಿಸುತ್ತ ಜಿಲ್ಲೆಯ ಅಧಿಕಾರಿ ವರ್ಗ,ಮಾಧ್ಯಮ ಮಿತ್ರರಿಗೆ ಚುನಾಯಿತ ಪ್ರತಿನಿಧಿಗಳಿಗೆ ಜಿಲ್ಲಾಡಳಿತ ಮತ್ತು ವೈಯಕ್ತಿಕವಾಗಿ ಶುಭಾಷಯ ಕೋರುತ್ತೇನೆ.
ಸ್ವಾತಂತ್ರ್ಯ ದಿನಾಚರಣೆ ಮಾನ್ಯರ ಸ್ವಾತಂತ್ರ್ಯ ಹೋರಾಟಗಾರರ , ಮಹನೀಯರ ತ್ಯಾಗ ಬಲುದಾನದ ಫಲ ಎಂದು ಸ್ಮರಿಸಿದ್ದಾರೆ.
ಗಾಂಧಿಗೆ ಕಂಡ ಕನಸು ನನಸಾಗಲಿ, ಸ್ವಾತಂತ್ರ್ಯ ಭಾರತದ ಬಾಹ್ಯ ಮತ್ತು ಅಂತರಿಕ ಶಕ್ತಿಯಲ್ಲಿ ನಾವು ಎದುರಿಸಲು ಸಿದ್ದಾವಾಗಿದ್ದೇವೆ. ನಮ್ಮ ದೇಶದಲ್ಲಿ ಕೃಷಿಯಲ್ಲಿ , ಶೈಕ್ಷಣಿಕ, ಕೈಗಾರಿಕೆ, ವಿಜ್ಞಾನ, ತಂತ್ರಜ್ಞಾನ, ಕಲೆ ಎಲ್ಲಾ ರಂಗದಲ್ಲಿ ಭಾರತ ಸದೃಡವಾಗಿ ಪ್ರಗತಿ ಸಾಧಿಸುತ್ತಿದೆ.
ನಾವು ಕೋವಿಡ್ 19 ರಿಂದ ಸ್ವತಂತ್ರವಾಗಿರಬೇಕು.ಇನ್ನು ಆತಂಕ ಪಡುವ ಅವಶ್ಯಕತೆ ಇಲ್ಲ, ಗುಣಪಡುವ ಲಸಿಕೆ ಅವಿಷ್ಕಾರ ಹಂತದಲ್ಲಿದೆ. ನಾವು 3 ಸೂತ್ರಗಳಾದ ಸ್ಯಾನಿಟೈಸರ್, ಮಾಸ್ಕ್, ಸಾಮಾಜಿಕ ಅಂತರ ಅನುಸರಿಸಬೇಕು.
ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿದೆ. ಶೀಫ್ರವೇ ಸಮಗ್ರ ಅಭಿವೃದ್ಧಿ ಯೋಜನೆ ರೂಪಿಸುವುದಾಗಿ ತಿಳಿಸಿದರು.
ಕೋಟೆ ನಾಡು ಕೃಷಿ, ಗಣಿ, ಮತ್ತು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದಿದೆ.
ಸಾಹಿತ್ಯ ಕ್ಷೇತ್ರದಲ್ಲಿ ಪ್ರಸಿದ್ದಿಯಾಗಿರುವ ತ.ರಾ.ಸುಬ್ಬರಾಯರು, ತಳುಕಿನ ವೆಂಕಣ್ಣಯ್ಯ, ಹುಲ್ಲೂರು ಶ್ರೀನಿವಾಸ್,ಬಿ.ಎಲ್‌ವೇಣು, ಬೆಳಗೆರೆ ಜಾನಕಮ್ಮ, ಸಂಶೋಧಕರಾದ ಬಿ.ರಾಜಶೇಖರಪ್ಪ ನಮ್ಮ ಜಿಲ್ಲೆಯವರು ಎಂಬುದು ಹೆಮ್ಮೆ ಎಂದು ಸಂದೇಶ ಸಾರಿದ್ದಾರೆ.
ಎಲ್ಲಾರೂ ಸಹ ರಾಜ್ಯ ಸರ್ಕಾರದ ಆದೇಶಗಳನ್ನು ಪಾಲಿಸಿ ಕೋವಿಡ್ ನಿಂದ ಅಂತರ ಕಾಪಡಿಕೊಳ್ಳಿ ಎಂದು ತಿಳಿಸಿದರು.