April 17, 2024

Chitradurga hoysala

Kannada news portal

ಹೊಸದುರ್ಗ ತಾಲೂಕಿನ ಮತಗಟ್ಟೆಗಳನ್ನ ಪರಿಶೀಲಿಸಿದ: ತಹಶೀಲ್ದಾರ್ ತಿರುಪತಿ ಪಾಟಿಲ್

1 min read

 

ಹೊಸದುರ್ಗ ತಾಲೂಕಿನ ಮತಗಟ್ಟೆಗಳನ್ನ ಪರಿಶೀಲಿಸಿದ: ತಹಶೀಲ್ದಾರ್ ತಿರುಪತಿ ಪಾಟಿಲ್

ವರದಿ:ಕಾವೇರಿ ಮಂಜಮ್ಮನವರ್,

ಚಿತ್ರದುರ್ಗ ಹೊಯ್ಸಳ ನ್ಯೂಸ್:

ಹೊಸದುರ್ಗ :

ತಾಲೂಕಿನ ಕಸಬಾ ಹೋಬಳಿಯ ಮಾವಿನಕಟ್ಟೆ,ಮಧುರೆ, ಬಿ.ವಿ.ನಗರ, ದೇವಿಗೆರೆ,ಕಬ್ಬಳ, ಬೀಸನಹಳ್ಳಿ,ಜೋಡಿತುಂಬಿನಕೆರೆ,ನಾಗರಕಟ್ಟೆ, ಹೆಬ್ಬಳ್ಳಿ, ಹೇರೂರು, ಮಂಟೇನಹಳ್ಳಿ, ಬಾಗೂರು ಮತ್ತು ಯಾಲಕ್ಕಪ್ಪನಹಟ್ಟಿ ಗ್ರಾಮಗಳಿಗೆ ಇಂದು ಗುರುವಾರ ಮಧ್ಯಾಹ್ನ 3 ಗಂಟೆ ಸುಮಾರಿನಲ್ಲಿ ತಹಸೀಲ್ದಾರ್ ತಿರುಪತಿ ಪಾಟೀಲ್ ಭೇಟಿ ನೀಡಿ ಮತಗಟ್ಟೆಗಳಲ್ಲಿನ ಸಮಸ್ಯೆಗಳನ್ನು ಅಲ್ಲಿನ ಶಿಕ್ಷಕರ ಹತ್ತಿರ ಕೇಳಿ ಮಾಹಿತಿಯನ್ನ ಪಡೆದುಕೊಂಡಿದ್ದಾರೆ .

ನಂತರ ಮಾತನಾಡಿದ ಅವರು, ಮತದಾನದ ದಿನಾಂಕದೊಳಗೆ ಸಮಸ್ಯೆಗಳನ್ನು ಸರಿಪಡಿಸಿ, ಬೇಕಿರುವ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು.ಜನರು ಭಯಭೀತರಾಗದೆ, ಧೈರ್ಯವಾಗಿ ಬಂದು ಮತದಾನ ಮಾಡುವಂತೆ ಈಗಾಗಲೇ, ಗ್ರಾಮೀಣ ಭಾಗಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯುತ್ತಿದ್ದು,ಹಂತ ಹಂತವಾಗಿ ಮತದಾನಕ್ಕೆ ಸಕಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.

ಪಾರದರ್ಶಕವಾದ ಮತದಾನಕ್ಕಾಗಿ ಉತ್ತಮವಾದ ಸಿದ್ಧತೆಗಳನ್ನ ತಾಲೂಕು ಚುನಾವಣಾ ಅಧಿಕಾರಿಗಳ ನೇತೃತ್ವದಲ್ಲಿ ನೋಡಿಕೊಳ್ಳುತ್ತಿದ್ದು, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳುಲಾಗಿದೆ.

ಈ ವೇಳೆ ಶಾಲಾ ಶಿಕ್ಷಕರು, ಕಂದಾಯ ಇಲಾಖೆ ಸಿಬ್ಬಂದಿಗಳು ಹಾಗೂ ಸ್ಥಳೀಯ ಮುಖಂಡರಿದ್ದರು.

About The Author

Leave a Reply

Your email address will not be published. Required fields are marked *