January 26, 2025

Chitradurga hoysala

Kannada news portal

ಪತ್ರಿಕೆಗಳ ಸಂಪಾದಕರಿಗೆ ನಿವೇಶನ‌ ನೀಡುವಂತೆ ಕೋರಿ ಸಚಿವರುಗಳಿಗೆ ಮನವಿ ಪತ್ರ ಸಲ್ಲಿಕೆ

1 min read

ಪತ್ರಿಕೆಗಳ ಸಂಪಾದಕರಿಗೆ ನಿವೇಶನ‌ ನೀಡುವಂತೆ ಕೋರಿ ಸಚಿವರುಗಳಿಗೆ ಮನವಿ ಪತ್ರ ಸಲ್ಲಿಕೆ

CHITRADURGAHOYSALA NEWS/  ಸಂಪಾದಕರು: ಸಿ.ಎನ್.ಕುಮಾರ್,

ಬೀದರ್ :
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಮಧ್ಯಾಹ್ನ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಅರಣ್ಯ ಮತ್ತು ಪರಿಸರ ಸಚಿವರಾಗಿರುವ ಈಶ್ವರ್ ಖಂಡ್ರೆ ಅವರಿಗೆ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಬೀದರ್ ಜಿಲ್ಲಾ ಘಟಕದ ಅಧ್ಯಕ್ಷರ ನೇತೃತ್ವದ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿತು.

ಬೀದರ್ ನಗರದಲ್ಲಿ ಪತ್ರಿಕೆಗಳ ಸಂಪಾದಕರಿಗೆ ನಿವೇಶನಕ್ಕಾಗಿ ಜಮೀನು ನೀಡಬೇಕಾಗಿ ಕೋರಲಾಯಿತು. ಜಮೀನು ಪತ್ತೆಹಚ್ಚಲು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಮನವಿ ಮಾಡಲಾಯಿತು.

ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ಜಿಲ್ಲಾ ಅಧ್ಯಕ್ಷ ವಿಜಯ್ ಕುಮಾರ್ ಪಾಟೀಲ್ ಅವರು ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು.‌ಮನವಿ ಪತ್ರ ಸ್ವೀಕರಿಸಿದ ಸಚಿವರು ಮನವಿಗೆ ಸ್ಪಂದಿಸಿ ಬೀದರ್ ನ ಸೂಕ್ತ ಸ್ಥಳದಲ್ಲಿ ನಿವೇಶನ ಪತ್ತೆ ಹಚ್ಚಿ ತಮ್ಮೆಲ್ಲರಿಗೆ ನಿವೇಶನಗಳನ್ನು ದೊರಕಿಸಿಕೊಡಲು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡುತ್ತೇನೆಂದು ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಪೌರಾಡಳಿತ ಸಚಿವರಾದ ಮತ್ತು ಬೀದರ್ ನ ಶಾಸಕರಾದ ರಹೀಂ ಖಾನ್ ಅವರು ಸಹ ಮನವಿ ಪತ್ರ ಸ್ವೀಕರಿಸಿ ಬೀದರಿನ ನೌಬಾದ್ ಅಥವಾ ಇನ್ನಿತರ ಕಡೆ ಸ್ಥಳ ನಿಗದಿ ಮಾಡಿ ನಿವೇಶನ ಕೊಡುವುದಾಗಿ ಭರವಸೆ ನೀಡಿದರು.

ಜಿಲ್ಲಾ ಅಧ್ಯಕ್ಷರ ನಿಯೋಗದಲ್ಲಿ ವಚನ ಕ್ರಾಂತಿ ಸಂಪಾದಕರಾದ ಬಾಬು ವಾಲಿ ಮತ್ತು ಆಶೋಕ ಕೋಟೆ ಪ್ರಾದೇಶಿಕ ಕನ್ನಡ ದಿನ‌ಪತ್ರಿಕೆ ಸಂಪಾದಕರಾದ ಅಶೋಕ್ ಕುಮಾರ್ ಕಾರಂಜಿ, ಜಿಲ್ಲಾ ಘಟಕದ ಪದಾಧಿಕಾರಿಗಳಾದ ಆನಂದ್ ದೇವಪ್ಪ, ಸ್ವಾಮೀದಾಸ್, ಶ್ರೀನಿವಾಸ್ ಚೌಧರಿ,ಜಾರ್ಜ್ ಫರ್ನಾಂಡೀಸ್,ಪೃಥ್ವಿರಾಜ್ ಎಸ್ ,
ಪ್ರದೀಪ್ ಬಿರಾದರ್ , ಅಮರೇಶ್ ಚಿದ್ರಿ, ಸುನಿಲ್ ಕುಮಾರ್ ಹೊನ್ನಾಳಿ, ಸುನಿಲ್ ಕುಮಾರ್ ಕುಲಕರ್ಣಿ ಮತ್ತು ಅಬ್ದುಲ್ ಖಧೀರ್ , ಬಸವರಾಜ ಪವರ್, ಮುಂತಾದವರು ಹಾಜರಿದ್ದರು.

About The Author

More Stories

Leave a Reply

Your email address will not be published. Required fields are marked *