ಆಟೋಮೆಟೆಡ್ ಮೆಷಿನ್ ಎಂಬ್ರಾಯಿಡರಿ ಕೌಶಲ್ಯ ತರಬೇತಿ ಕಾರ್ಯಾಗಾರ: ವಿದ್ಯಾವಂತ ನಿರುದ್ಯೋಗಿ ಮಹಿಳೆಯರು ಬಾಗಿ
1 min readಆಟೋಮೆಟೆಡ್ ಮೆಷಿನ್ ಎಂಬ್ರಾಯಿಡರಿ ಕೌಶಲ್ಯ ತರಬೇತಿ ಕಾರ್ಯಾಗಾರ: ವಿದ್ಯಾವಂತ ನಿರುದ್ಯೋಗಿ ಮಹಿಳೆಯರು ಬಾಗಿ
ಚಿತ್ರದುರ್ಗ ಹೊಯ್ಸಳ:
ದಾವಣಗೆರೆ :
ನಗರದ ಎಸ್.ಎಸ್.ಲೇಔಟ್ ಬಿ.ಬ್ಲಾಕ್ ನಲ್ಲಿ ಚಿತ್ರದುರ್ಗದ ನೇತ್ರಾನಂದ ಇವರ ಮಾಲೀಕತ್ವದಲ್ಲಿ ನಡೆಸುತ್ತಿರುವ ಶ್ರೀ ವಿದ್ಯಾ ಎಂಬ್ರಾಯಿಡರಿ ಸಲ್ಯೂಷನ್ ವತಿಯಿಂದ ಮತ್ತು ಮೂವ್‌ಮೆಂಟ್ ಫಾರ್ ಎಂಪವರ್‌ಮೆಂಟ್ ಎಜುಕೇಷನ್ ಅಂಡ್ ಟ್ರೈನಿಂಗ್ ಆಗ್ರನೈಜೇಷನ್ ಇವರ ವತಿಯಿಂದ ವಿದ್ಯಾವಂತ ನಿರುದ್ಯೋಗಿ ಯವತಿಯರಿಗೆ ಶುಕ್ರವಾರ (6.12.2024 ) ಒಂದು ದಿನದ ಉಚಿತ ಆಟೋಮೆಟೆಡ್ ಮೆಷಿನ್ ಎಂಬ್ರಾಯಿಡರಿ ಕೌಶಲ್ಯ ತರಬೇತಿ ಕಾರ್ಯಾಗಾರವನ್ನು ನಡೆಸಿದ್ದರು.
ತರಬೇತಿ ಕಾರ್ಯಗಾರದ ಉದ್ಘಾಟನೆಯನ್ನು ಕುಂಬಾರ್, ಉಪ ನಿರ್ದೇಶಕರು, ಜವಳಿ ಮತ್ತು ಕೈಮಗ್ಗ ಇಲಾಖೆ, ದಾವಣಗೆರೆ, ನಾಗರಾಜ ಬದನಾಳ್, ಅಧ್ಯಕ್ಷರು, ಪ್ರೆಸ್ ಕ್ಲಬ್, ದಾವಣಗೆರೆ, ಬಸವರಾಜ್, ಜಿಲ್ಲಾ ವ್ಯವಸ್ಥಾಪಕರು, ಡಾ|| ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ಇಲಾಖೆ, ದಾವಣಗೆರೆ, ಇವರುಗಳು ನಡೆಸಿ ಕೊಟ್ಟರು.
ಈ ಕೌಶಲ್ಯ ತರಬೇತಿಗೆ ಸುಮಾರು 30 ನಿರುದ್ಯೋಗಿ ಆಸಕ್ತ ಮಹಿಳೆಯರು ಭಾಗವಹಿಸಿ, ತರಬೇತಿಯ ಉಪಯೋಗ ಪಡೆದುಕೊಂಡರು.
ಕಾರ್ಯಗಾರ ಸಮಾರಂಭದಲ್ಲಿ
ಶ್ರೀಮತಿ ನಿರ್ಮಲ ಸುಭಾಷ್, ಅಧ್ಯಕ್ಷರು, ಮಹಿಳಾ ಪತ್ತಿನ ಸಹಕಾರ ಬ್ಯಾಂಕ್, ದಾವಣಗೆರೆ, ನೇತ್ರಾನಂದ್.ಕೆ.ಎಸ್, ಮಾಲೀಕರು, ಶ್ರೀವಿದ್ಯಾ ಎಂಬ್ರಾಯಿಡರಿ ಸಲ್ಯೂಷನ್, ದಾವಣಗೆರೆ ಮತ್ತು ಗುರುದೇವ್ ಹೆಗ್ಡೇರ್, ಅಧ್ಯಕ್ಷರು, ಮೂವ್‌ಮೆಂಟ್ ಫಾರ್ ಎಂಪವರ್‌ಮೆಂಟ್ ಎಜುಕೇಷನ್ ಅಂಡ್ ಟ್ರೈನಿಂಗ್ ಆಗ್ರನೈಜೇಷನ್ ಇವರುಗಳು ಭಾಗವಹಿಸಿದ್ದರು.