ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಓ.ಪರಮೇಶ್ವರಪ್ಪ ಗೆ ಕೋವಿಡ್ ವಾರಿಯರ್ ಸನ್ಮಾನ
1 min readಚಿತ್ರದುರ್ಗ: ನಗರದ ಜಿಲ್ಲಾ ಪೋಲಿಸ್ ಕವಾಯತು ಮೈದಾನದಲ್ಲಿ 74 ನೇ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ನೆರವೇರಿಸಿದರು. ನಂತರ ಸತತ 3 ತಿಂಗಳುಗಳಿಂದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಓ.ಪರಮೇಶ್ವರಪ್ಪ ಅವರಿಗೆ ಅವರ ಕಾರ್ಯ ನಿಷ್ಠೆ ಗುರುತಿಸಿ ಜಿಲ್ಲಾಡಳಿದಿಂದ ಕೋವಿಡ್ ವಾರಿಯರ್ ಎಂದು ಸನ್ಮಾನಿಸಿದರು. ಇವರು ಆಹಾರ ಸರಬರಾಜು ಕಾರ್ಯಕ್ಕೆ ನೇಮಿಸಿದಾಗ ನೂರಾರು ನಿರಾಶ್ರಿತರಿಗೆ ಅಚ್ಚುಕಟ್ಟಾಗಿ ತಂಡ ಕಟ್ಟಿಕೊಂಡು ಆಹಾರ ವಿತರಿಸಿದರು. ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಗಳಲ್ಲಿ ಕ್ವಾರಂಟೈನ್ ಮಾಡಿದವರಿಗೆ ವ್ಯವಸ್ಥೆ ಮಾಡುವಲ್ಲಿ ಸತತ ಶ್ರಮ ಹಾಕಿದ್ದಾರೆ ಎಂದರೆ ತಪ್ಪಗಲಾರದು. ಕಳೆದ ಒಂದೂವರೆ ತಿಂಗಳ ಹಿಂದೆ ದೇಶಾದ್ಯಂತ ಸದ್ದು ಮಾಡಿದ್ದ ತಬ್ಲಿಘಿಗಳನ್ನು ಹಿಡಿದ ಸಂದರ್ಭದಲ್ಲಿ ಅವರನ್ನು ಹಾಸ್ಟೆಲ್ ನಲ್ಲಿ ಕ್ವಾರಂಟೈನ್ ಮಾಡುವಲ್ಲಿ ಯಶಸ್ವಿಯಾದವರಲ್ಲಿ ಪರಮೇಶ್ವರಪ್ಪ ಸಹ ಒಬ್ಬರು ಎಂಬುದು ಸಮಾಜಕಲ್ಯಾಣ ಇಲಾಖೆಗೆ ಹೆಮ್ಮೆಯಾಗಿದೆ. ಇದರ ಸಲುವಾಗಿ 14 ದಿನಗಳ ಕಾಲ ತಾವು ಸಹ ಹೊಂ ಕ್ವಾರಂಟೈನ್ ಆಗಿದ್ದರು. ತದನಂತರ ಮತ್ತೆ ಕೋವಿಡ್ ತಡೆಗಟ್ಟುವ ಹೋರಟದಲ್ಲಿ ನಿರಂತರವಾಗಿ ತಮ್ಮ ಕಾರ್ಯ ಮಾಡುತ್ತಿರುವುದು ಸಂತೋಷದ ವಿಚಾರವಾಗಿದೆ.