ಹೊಸದುರ್ಗ ಪಟ್ಟಣದ ಡಾ. ಜಯರಾಮ್ ನಾಯಕ್ ಅಸ್ತಂಗತ
1 min read
ಹೊಸದುರ್ಗ ಪಟ್ಟಣದ ಡಾ. ಜಯರಾಮ್ ನಾಯಕ್ ಅಸ್ತಂಗತ
ಚಿತ್ರದುರ್ಗ ಹೊಯ್ಸಳ :
ಹೊಸದುರ್ಗ:
ತಾಲೂಕಿನ ಬೇಸನಹಳ್ಳಿ ಲಂಬಾಣಿಹಟ್ಟಿಯ ಗ್ರಾಮದ ಹನುಮಂತ ನಾಯಕ್ ಮತ್ತು ಶಾಂತಿಬಾಯಿ ದಂಪತಿಗಳ ಹಿರಿಯ ಮಗನಾಗಿ ಜನಿಸಿದ ಡಾಕ್ಟರ್ ಜಯರಾಮ್ ನಾಯಕ್ ರವರು ಬಡತನದಲ್ಲಿ ಹುಟ್ಟಿ ಬಡತನದಲ್ಲಿಯೇ ಬೆಳೆದು ಬಡವರಿಗಾಗಿ ಹಗಲಿರಳು ಸೇವೆ ಸಲ್ಲಿಸುತ್ತಿದ್ದಂತಹ ಡಾಕ್ಟರ್ ಜಯರಾಮ್ ಅವರು ಶುಕ್ರವಾರ ಮಧ್ಯಾಹ್ನದ ಸಮಯದಲ್ಲಿ ಚಿರ ನಿದ್ರೆಗೆ ಜಾರಿದ್ದಾರೆ.
ಹೌದು ತಾಲೂಕಿನ ಗುರುವಿನಕಲ್ಲು ಬಳಿಯ ತಮ್ಮ ತೋಟದ ಜಮೀನಿನಲ್ಲಿ ಕಾಯಕದಲ್ಲಿ ತೊಡಗಿದ್ದಾಗ ಕೃಷಿ ಹೊಂಡದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸಾವಿರಾರು ರೋಗಿಗಳನ್ನ ತೊರೆದು ವೈದ್ಯ ಲೋಕದ ಕಾಯಕಕ್ಕೆ ವಿದಾಯ ಹೇಳಿದ್ದಾರೆ.
ವೈದ್ಯ ಲೋಕದ ಮಿನುಗುತಾರೆ ಆಕಾಶದತ್ತ
ಕಳೆದ 25 ವರ್ಷಗಳ ಹಿಂದೆ ಹೊಸದುರ್ಗ ಪಟ್ಟಣದ ಇಂದಿನ ಕೆನರಾ ಬ್ಯಾಂಕ್ ಸಮೀಪದಲ್ಲಿ ಡಾ. ಜಯಂ ಕ್ಲಿನಿಕ್ ಎಂಬ ಬೋರ್ಡ್ ಇಡೀ ತಾಲೂಕಿನ ಸಂಜೀವಿನಿ ಆಸ್ಪತ್ರೆಯಾಗಿ ಬಡವರು,ಕೃಷಿಕರು,ಕಾರ್ಮಿಕರು, ಅನಾಥರು,ಹೀಗೆ ಎಲ್ಲಾ ವರ್ಗದ ಜನರ ಅಚ್ಚುಮೆಚ್ಚಿನ ಡಾಕ್ಟರ್ ಇವರಾಗಿದ್ದರು.ಲಕ್ಷಾಂತರ ರೋಗಿಗಳನ್ನ ಗುಣಪಡಿಸಿದ ವೈದ್ಯ ಲೋಕದ ತಾರೆ ಇಂದು ಆಕಾಶದೆತ್ತರದಲ್ಲಿ ಮಿನುಗಲು ಅಪಾರ ಬಳಗವನ್ನ ಅಗಲಿದೆ.
ವೈದ್ಯನು ಹೌದು ಕೃಷಿಕನು ಹೌದು
ತಾಲೂಕಿನ ಹೆಸರಾಂತ ವಕೀಲರಾದ ಜಗದೀಶ್, ಓಂಕಾರ್ ಹಾಗೂ ಸುರೇಂದ್ರ, ಜಗದೀಶ್ ವಕೀಲರಾದರೆ ಇಬ್ಬರು ಸಹೋದರರು ಅಣ್ಣನ ಹಣತೆಯಂತೆ ಕೃಷಿ ಕಾಯಕ ನಡೆಸುತ್ತಿದ್ದರು. ಮಾರಿಕಣಿವೆ ಬಳಿ ಹಾಗೂ ಕುರುಬರಹಳ್ಳಿಯ ಬಳಿ ಇಬ್ಬರು ಸಹೋದರರಿಗೂ ಜಮೀನು ಕೊಡಿಸಿ ಅಲ್ಲಿ ಅವರು ಬದುಕಲು ಆಸರೆಯಾಗಿದ್ದರು ಜೊತೆಗೆ ಡಾ.ಕೂಡ ಗೊರವಿನಕಲ್ಲು ಸಮೀಪಲ್ಲಿ ತೋಟವನ್ನು ಮಾಡಿ ನಿತ್ಯವೋ ಕೃಷಿ ಕಾಯಕದಲ್ಲಿ ತೊಡಗಿಕೊಳ್ಳುತ್ತಿದ್ದರು.
ಮಕ್ಕಳಿಂದ ವೃದ್ಧರವರೆಗೂ ಅಚ್ಚುಮೆಚ್ಚಿನ ವೈದ್ಯರಿವರು
ಚಿಕ್ಕ ಮಕ್ಕಳಿಂದ ಹಿಡಿದು ವಯೋ ವೃದ್ಧರವರೆಗೂ ಎಲ್ಲರಿಗೂ ಅಚ್ಚುಮೆಚ್ಚುನ ವೈದ್ಯರಾಗಿದ್ದರು. ರೋಗಿಗಳೊಟ್ಟಿಗಿನ ಆತ್ಮೀಯವಾದ ಒಡನಾಟ, ತರ್ಲೆ ತಮಾಷೆ ಗ್ರಾಮೀಣ ಹಾಡು ಭಾಷೆ ಎಲ್ಲರಿಗೂ ಇಷ್ಟಪಡುವಂತಹ ಸಂಗತಿಯಾಗಿತ್ತು,ಇದರಿಂದ ಹೆಚ್ಚು ಪ್ರಖ್ಯಾತಿಗೆ ಈ ಕಾರಣವೂ ಕೂಡ ಒಂದು ಆಗಿತ್ತು.
ಸ್ನೇಹಿತರ ಪಾಲಿನ ಸರಳ ಜೀವಿ
ಡಾಕ್ಟರ್ ತಮ್ಮ ಕಾಯಕದೊಟ್ಟಿಗೆ ಸಾಮಾಜಿಕ ಕಳಕಳಿಯನಿಟ್ಟುಕೊಂಡು ಹಲವು ಕಾರ್ಯಗಳನ್ನು ಕೂಡ ಮಾಡಿದ್ದಾರೆ.ಇದರ ಜೊತೆಗೆ ಸಾಗಿದ ಅದೆಷ್ಟೋ ಸ್ನೇಹಿತರಿಗೆ ಇವರ ಸರಳತೆ ಆದರ್ಶವಾಗಿತ್ತು ಇಂತಹ ಆದರ್ಶ ವ್ಯಕ್ತಿಯನ್ನು ಕಳೆದುಕೊಂಡು ಕಾರ್ಮೋಡ ಕವಿದ ವಾತಾವರಣ ಇವರನ್ನ ಆವರಿಸಿದೆ.
ತಾಲೂಕಿನಾದ್ಯಂತ ಕೆಲವೇ ಗಂಟೆಗಳಲ್ಲಿ ಹಬ್ಬಿದ ಸಾವಿನ ಸುದ್ದಿ
ಡಾಕ್ಟರ್ ಸಾವಿನ ಸುದ್ದಿ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಬ್ಬಿದ ಸುದ್ದಿ ಗಾಳಿಯ ವೇಗದಂತೆ ಹಳ್ಳಿ ಭಾಗದ ಜನರನ್ನ ತಲುಪಿತ್ತು.ತಾಲೂಕಿನ ಬಹುತೇಕ ಹಳ್ಳಿಗಳ ಜನರು ತಮ್ಗಳ ಆರೋಗ್ಯದ ಸಮಸ್ಯೆಗೆ ಔಷಧಕ್ಕಾಗಿ ಮುಖ ಮಾಡ್ತಾ ಇದ್ದಿದ್ದೆ ಡಾಕ್ಟರ್ ಜೈರಾಮ್ ಕ್ಲಿನಿಕಿನತ್ತ.ಇಂತಹ ಕ್ಲಿನಿಕ್ ದೇವರ ಸಾವು ಎಲ್ಲರನ್ನ ಕೆಲ ಕ್ಷಣಗಳವರೆಗೆ ದಿಗ್ಭ್ರಮೆಗೊಳಿಸಿತು.ಏ ನೆನ್ನೆ ಇಲ್ಲ ನಾನು ಮೊನ್ನೆ. ಕಳೆದೊಂದು ವಾರದ ಹಿಂದೆ ಅಷ್ಟೇ ಡಾಕ್ಟರ್ ಅವರನ್ನ ಭೇಟಿಯಾಗಿದ್ದೆ ಡಾಕ್ಟರ ಸಾವು ಸುಳ್ಳು ಸುದ್ದಿ ಬಿಡಿ ಎಂದು ಎಷ್ಟು ಮನಸುಗಳು ಒಪ್ಪಿಕೊಳ್ಳಲಾಗದೆ ಭಾರವಾದ ಮನಸ್ಸಿನಿಂದ ಅಂತಿಮವಾಗಿ ಸಾವಿನ ಸುದ್ದಿಯನ್ನು ಒಪ್ಪಿಕೊಂಡು ಅಂತಿಮ ನಮನವನ್ನು ಸಲ್ಲಿಸಿ ವಿದಾಯ ಹೇಳಿದ ತಾಲೂಕಿನ ಜನತೆ.
ನಮ್ಮಂತ ಅದೆಷ್ಟು ಯುವ ವೈದ್ಯರಿಗ ಸ್ಪೂರ್ತಿಯದವರು, ವೈದ್ಯ ಲೋಕದ ಕಾಯಕದ ಜೊತೆ ಜೊತೆಗೆ ಕೃಷಿ ಒಟ್ಟಿಗೆ ಹೆಜ್ಜೆ ಹಾಕಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಿದ್ದವರು ಸರಳ ವ್ಯಕ್ತಿತ್ವದಿಂದಾ ಎಲ್ಲರನ್ನ ಆತ್ಮೀಯವಾಗಿ ಮಾತನಾಡಿಸಿ ತಾಳ್ಮೆ, ಸಹನೆ,ಶಿಸ್ತುಬದ್ಧ,ಜೀವನ ಯಶಸ್ವಿಗೆ ಕಾರಣ ಎಂಬುದನ್ನು ಬದುಕಿಸಿ ತೋರಿಸಿಕೊಟ್ಟ ದಂಥ ಉದಾಹರಣೆ ಡಾಕ್ಟರ್ ಜೈರಾಮ್ ಸರ್ ಎಂದು. ತಾಲೂಕು ವೈದ್ಯಾಧಿಕಾರಿಗಳಾದ ಡಾಕ್ಟರ್ ರಾಘವೇಂದ್ರ ಪ್ರಸಾದ್ ಅವರು ತಿಳಿಸಿದರು.