SSLC ಪರೀಕ್ಷೆಯಲ್ಲಿ ವೈಷ್ಣವಿ 625 ಕ್ಕೆ 612 ಅಂಕ
1 min readಚಿತ್ರದುರ್ಗ ಆ. ೧೫: ಇತ್ತೀಚೇಗೆ ನಡೆದ ಎಸ್,.ಎಸ್,ಎಲ್.ಸಿ. ಪರೀಕ್ಷೆಯಲ್ಲಿ ವೈಷ್ಣವಿ ಪಿ.ಆರ್. 625ಕ್ಕೆ612 (ಶೇ.97.92 ) ಅಂಕಗಳನ್ನು ಗಳಿಸುವುದರ ಮೂಲಕ ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾರೆ.
ನಗರದ ರವಿರಾಜ್ ಪಿ.ಜೆ. ಕಾಂಚನ ಪಿ.ಆರ್. ಇವರ ಮಗಳಾದ ವೈಷ್ಣವಿ ಸಂತ ಜೋಸೆಫ್ ಕಾನ್ವೆಂಟ್ ಬಾಲಕೀಯರ ಪ್ರೌಢಶಾಲೆಯಲ್ಲಿ ಅಭ್ಯಾಸ ಮಾಡಿದ್ದು ಈ ಸಾಲಿನ ಪರೀಕ್ಷೆಯಲ್ಲಿ ಗಣಿತ ಮತ್ತು ಹಿಂದಿಯಲ್ಲಿ 100 ಕ್ಕೆ 100 ಅಂಕಗಳನ್ನು ಪಡೆದಿದ್ದಾಳೆ.
ಕನ್ನಡ 125ಕ್ಕೆ 123, ಆಂಗ್ಲ ಭಾಷೆ 100ಕ್ಕೆ 97, ವಿಜ್ಞಾನ 100ಕ್ಕೆ 94 ಹಾಗೂ ಸಾಮಾನ್ಯ ವಿಜ್ಞಾನ 100ಕ್ಕೆ 98 ಅಂಕಗಳನ್ನು ಗಳಿಸಿದ್ದಾರೆ.