ಶ್ರೀರಾಂಪುರ ಗ್ರಾಮ ಪಂಚಾಯತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ
1 min readಹೊಸದುರ್ಗ : ತಾಲ್ಲೂಕಿನ ಶ್ರೀರಾಂಪುರ ಗ್ರಾಮ ಪಂಚಾಯಿತಿ ಅವರಣದಲ್ಲಿ ಆಯೋಜಿಸಿದ್ದ 74 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ರಾಷ್ಟ್ರಧ್ವಜರೋಹಣವನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಟಿ.ಪಾಲಾಕ್ಷಪ್ಪ ನೇರವೇರಿಸಿದರು.
ನಂತರ ನಾಡಕಛೇರಿ ಅವರಣದಲ್ಲಿ ಕೋರೋನ ವಾರಿಯರ್ಸ್ ಆಗಿ ಸೇವೆ ಸಲ್ಲಿಸಿದ್ದ ಆರೋಗ್ಯ, ಗ್ರಾಮ ಪರಿಚಾಯಿತಿ (ಪೋಲೀಸ್ ) ಇಲಾಖೆಯ ಸಿಬ್ಬಂದಿಗಳಿಗೆ ಹಾಗೂ ದ್ವಿತೀಯ ಪಿಯುಸಿ ಮತ್ತು ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದವರಿಗೆ ಅಭಿನಂದಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಉಪತಹಸಿಲ್ದಾರ್ ಅಣ್ಣಪ್ಪ, ಕಂದಾಯ ಅಧಿಕಾರಿ ಪಾಲಾಕ್ಷಪ್ಪ, ಸೇವಾದಳದ ರಂಗಪ್ಪ ಮಾಜಿ ಗ್ರಾ.ಪಂ. ಅಧ್ಯಕ್ಷರಾದ ರಮೇಶ್, ಸುರಪ್ಪ ಪತ್ರಕರ್ತರಾದ ವಿಶ್ವನಾಥ್, ರವಿ ಇತರರು ಹಾಜರಿದ್ದರು.