ಧೋನಿ ವಿದಾಯದ ಬಗ್ಗೆ ಪತ್ನಿ ಸಾಕ್ಷಿ ಏನ್ ಹೇಳಿದರು?
1 min readರಾಂಚಿ: ಆಗಸ್ಟ್ ೧೬- ನಿನ್ನೆ ರಾತ್ರಿ ಭಾರತ ಕ್ರಿಕೆಟ್ ಅಭಿಮಾನಿಗಳಿಗೆ ಎಂ.ಎಸ್.ಧೋನಿ ವಿದಾಯದ ಸುದ್ದಿ ಅಚ್ಚರಿ ತಂದಿದೆ. ಇದರ ಮಧ್ಯೆಯೇ ಪತಿಯ ವಿದಾಯಕ್ಕೆ ಪತ್ನಿ ಸಾಕ್ಷಿ ಕೂಡ ಭಾವುಕ ಸಂದೇಶ ರವಾನಿಸುವ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಮನದ ಸಂದೇಶ ಅಪ್ಡೇಟ್ ಮಾಡಿರುವ ಸಾಕ್ಷಿ . ನೀವೇನು ಸಾಧನೆ ಮಾಡಿದ್ದೀರೋ ಅದರ ಬಗ್ಗೆ ನೀವು ಹೆಮ್ಮೆ ಪಡಬೇಕು. ಆಟದಲ್ಲಿ ಉತ್ತಮವಾದುದ್ದನ್ನು ನೀಡಿದ್ದಕ್ಕೆ ನಿಮಗೆ ಧನ್ಯವಾದಗಳು. ನಿಮ್ಮ ಸಾಧನೆ ಹಾಗೂ ನಿಮ್ಮ ಬಗ್ಗೆ ನನಗೆ ಹೆಮ್ಮೆ ಇದೆ. ನಿಮ್ಮ ನೆಚ್ಚಿನ ಆಟಕ್ಕೆ ಬಹಳ ನೋವಿನಿಂದ ವಿದಾಯ ಹೇಳಿದ್ದೀರಿ ಎಂಬುದು ನನಗೆ ತಿಳಿದಿದೆ. ಏನೇ ಆಗಿರಲಿ ಮುಂದಿನ ನಿಮ್ಮ ಜೀವನ ಆರೋಗ್ಯ, ಸಂತೋಷ ಮತ್ತು ಅದ್ಭುತಗಳಿಂದ ಕೂಡಿರಲೆಂದು ಸಾಕ್ಷಿ ಶುಭ ಹಾರೈಸಿದ್ದಾರೆ. ಇದರೊಂದಿಗೆ ಧೋನಿ ಅವರು ಸೂರ್ಯಾಸ್ತದ ಕಡೆ ನೋಡುತ್ತಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.
ಅಂದಹಾಗೆ ಧೋನಿ 2014ರಲ್ಲೇ ಟೆಸ್ಟ್ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ್ದರು. ನಿನ್ನೆ ಎಲ್ಲರೂ 74 ನೇ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿರುವಾಗಲೇ ಧೋನಿ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ ನಿವೃತ್ತಿ ಘೋಷಿಸಿದರು.