May 23, 2024

Chitradurga hoysala

Kannada news portal

ಧಾರವಾಡ- ಕಲಘಟಗಿ ರಸ್ತೆ ಸಂಚಾರ ಬಂದ್..

1 min read

ಹುಬ್ಬಳ್ಳಿ: ಧಾರವಾಡ- ಕಲಘಟಗಿ ರಸ್ತೆ ಸಂಚಾರ ಬಂದ್ ಆಗಿದೆ.

ಸತತ ಮೂರು ದಿನಗಳ ಮಳೆಯಿಂದಾಗಿ ಧಾರವಾಡದಿಂದ ಕಲಘಟಗಿಯ ಜಿಲ್ಲಾ ಮುಖ್ಯ ರಸ್ತೆಯ ಸಂಚಾರ ಬಂದ್ ಆಗಿದೆ. ಕಲಘಟಗಿ ತಾಲೂಕಿನ ಗಂಭ್ಯಾಪೂರ ಹತ್ತಿರದ ನೀರಸಾಗರ ಜಲಾಶಯ ಭರ್ತಿಯಾಗಿ ಹಾಗೂ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಜಲಾಶಯ ತುಂಬಿ ಹರಿಯುತ್ತಿದೆ.‌ ಇದರಿಂದ
ಧಾರವಾಡ- ಕಲಘಟಗಿ ರಸ್ತೆ ಸಂಚಾರ ಬಂದ್ ಆಗಿದೆ.‌

ಕಲಘಟಗಿ ತಾಲೂಕಿನ ಗಂಬ್ಯಾಪೂರ, ಮುತ್ತಗಿ,ಹುಲ್ಲಂಬಿ, ತುಮರಿಕೊಪ್ಪ ಮಾರ್ಗವಾಗಿ ಹೋಗುವ ವಾಹನಗಳ ಸಂಚಾರ ಸಂಪೂರ್ಣ ಬಂದ್ ಆಗಿದೆ.‌ ಇದಲ್ಲದೆ ಕಲಘಟಗಿ,ಕುಂದಗೋಳ ತಾಲೂಕಿನಲ್ಲಿ ಮಳೆ ಸಾಕಷ್ಟು ಅವಾಂಥರ ಸೃಷ್ಟಿಸಿದೆ.

About The Author

Leave a Reply

Your email address will not be published. Required fields are marked *