ಆಂಜನೇಯ ಸ್ವಾಮಿ ಪ್ರೌಢಶಾಲೆಗೆ 100% ಫಲಿತಾಂಶ: ಮುಖ್ಯೋಪಾಧ್ಯಾಯ ಮಹೇಶ್ ಹರ್ಷ
1 min readಚಿತ್ರದುರ್ಗ: ತಾಲೂಕಿನ ಕಡ್ಲೆಗುದ್ದು ಗ್ರಾಮದ ಆಂಜನೇಯ ಸ್ವಾಮಿ ಪ್ರೌಢಶಾಲೆ ಕಡ್ಲೆಗುದ್ದು ಶಾಲೆಯು 10ನೇ ತರಗತಿ ಫಲಿತಾಂಶದಲ್ಲಿ ಶೇಕಡಾ ನೂರಕ್ಕೆ ನೂರರಷ್ಟು ಫಲಿತಾಂಶವನ್ನು ಪಡೆದುಕೊಂಡಿದೆ.
ಪರೀಕ್ಷೆಗೆ ಹಾಜರಾಗಿದ್ದ 37 ವಿದ್ಯಾರ್ಥಿಗಳಲ್ಲಿ 37 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಮೂರು ಅತ್ಯುನ್ನತ ಶ್ರೇಣಿ 29 ಪ್ರಥಮ ದರ್ಜೆಯಲ್ಲಿ 5 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ಅರ್ಚನ ಆರ್ ಮತ್ತು ಅರ್ಚನಾ ಎಚ್ ಇಬ್ಬರೂ ಸಹ 538 ಅಂಕಗಳಿಸಿ ಶಾಲೆಗೆ ಪ್ರಥಮ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಭೂಮಿಕಾ 535 ಅಂಕಗಳನ್ನು ಗಳಿಸಿ ದ್ವಿತೀಯ ಸ್ಥಾನವನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ ಈ ಬಾರಿಯ ಶಾಲೆಯ ಪಲಿತಾಂಶ ದಲ್ಲಿ ಶಾಲೆಯ 10 ವಿದ್ಯಾರ್ಥಿಗಳು 500 ಅಂಕಗಳ ಮೇಲೆ ಗಳಿಸಿರುವುದು ವಿಶೇಷವಾಗಿದೆ. ಹೆಚ್ಚು ಅಂಕಗಳಿಸಿ ಶಾಲೆಗೆ ಕೀರ್ತಿ ತಂದ ಮಕ್ಕಳಿಗೆ ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿಯವರಾದ ರಾಜಪ್ಪನವರು ಮುಖ್ಯ ಶಿಕ್ಷಕರಾದ ಮಹೇಶ್ ರವರು ಶಾಲೆಯ ಶಿಕ್ಷಕರು, ವೇದಾಂತ ಲಿಮಿಟೆಡ್ ನ ಆಡಳಿತ ಮಂಡಳಿಯವರು ಹಾಗೂ ಸಿಬ್ಬಂದಿ ವರ್ಗದವರು ಹಾಗೂ ಗ್ರಾಮಸ್ಥರು ಶುಭಹಾರೈಸಿದ್ದಾರೆ.