ಸರ್ಕಾರಿ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆ: ಐಟಿಐ ಪ್ರವೇಶಕ್ಕೆ ಅರ್ಜಿ ಆಹ್ವಾನ
1 min readಚಿತ್ರದುರ್ಗ, ಆ.18ಚಿತ್ರದುರ್ಗ ಜಿಲ್ಲೆಯ ಸರ್ಕಾರಿ, ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ 2020-21ನೇ ಶೈಕ್ಷಣಿಕ ಸಾಲಿನ ಪ್ರವೇಶಾತಿಗೆ ಆನ್‍ಲೈನ್‍ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನವಾಗಿದೆ. ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಮಹಿಳಾ) ಚಿತ್ರದುರ್ಗ ಈ ಸಂಸ್ಥೆಯು ಮಹಿಳಾ ಸಂಸ್ಥೆಯಾಗಿರುವುದರಿಂದ ಈ ಸಂಸ್ಥೆಯಲ್ಲಿ ಎರಡನೇ ಸುತ್ತಿನ ಪ್ರವೇಶಾತಿಯ ಅಂತ್ಯದವರೆಗೂ ಸಂಪೂರ್ಣವಾಗಿ ಮಹಿಳೆಯರಿಗೆ ಆದ್ಯತೆ ನೀಡಲಾಗುವುದು. ಮೂರನೇ ಸುತ್ತಿನ ಪ್ರವೇಶಾತಿಯಲ್ಲಿ ಉಳಿದ ಸ್ಥಾನಗಳನ್ನು ಪುರುಷ ಅಭ್ಯರ್ಥಿಗಳಿಗೆ ನೀಡಲಾಗುವುದು.ಅಭ್ಯರ್ಥಿಗಳು ಇಲಾಖೆಯ ವೆಬ್‍ಸೈಟ್ www.emptrg.kar.nic.in ನಲ್ಲಿ ಹತ್ತಿರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಅಥವಾ ಇಂಟರ್‍ನೆಟ್ ಕೆಫೆ ಮೂಲಕ ಆಗಸ್ಟ್ 17 ರಿಂದ ಆಗಸ್ಟ್ 31 ರವರೆಗೆ ಐಟಿಐ ಪ್ರವೇಶಕ್ಕಾಗಿ ಲಭ್ಯವಿರುವ ಆನ್‍ಲೈನ್ ಅರ್ಜಿಯಲ್ಲಿ ವಿವರಗಳನ್ನು ದಾಖಲಿಸಿ, ಆನ್‍ಲೈನ್ ಸ್ವೀಕೃತಿ ಪಡೆಯುವುದು. ಆನ್‍ಲೈನ್ ಅರ್ಜಿ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನಾಂಕವಾಗಿರುತ್ತದೆ. ಸಲ್ಲಿಸಬೇಕಾದ ದಾಖಲೆಗಳ ವಿವರ: ಎಸ್‍ಎಸ್‍ಎಲ್‍ಸಿ ಅಂಕಪಟ್ಟಿ, ಇತರೆ ಅಂಕಪಟ್ಟಿ, ಜಾತಿ, ಪ್ರವರ್ಗ, ಆದಾಯ ದೃಢೀಕರಣ ಪತ್ರ, ಹತ್ತು ವರ್ಷಗಳ ಕನ್ನಡ ವ್ಯಾಸಂಗ ಮಾಡಿದ ಬಗ್ಗೆ ದೃಢೀಕರಣ ಪತ್ರ, ಹತ್ತು ವರ್ಷಗಳ ಗ್ರಾಮೀಣ ವ್ಯಾಸಂಗ ಮಾಡಿದ ಬಗ್ಗೆ ದೃಢೀಕರಣ ಪತ್ರ (1 ರಿಂದ 10ನೇ ತರಗತಿಯವರೆಗೆ ಗ್ರಾಮೀಣದಲ್ಲಿ ವಿದ್ಯಾಭ್ಯಾಸ ಮಾಡಿದ್ದರೆ ಮಾತ್ರ), ಕನಿಷ್ಟ 5 ವರ್ಷಗಳು ಕರ್ನಾಟಕದಲ್ಲಿ ವ್ಯಾಸಂಗ ಮಾಡಿದ ಬಗ್ಗೆ ವ್ಯಾಸಂಗ ದೃಢೀಕರಣ ಪತ್ರ, ವಿಕಲಚೇತನ ಅಭ್ಯರ್ಥಿಯಾಗಿದ್ದಲ್ಲಿ ದೃಢೀಕರಣ ಪತ್ರ, ಮಾಜಿ ಯೋಧರು ಅಥವಾ ಮಾಜಿ ಯೋಧರ ಅವಲಂಭಿತರಾದಲ್ಲಿ ಸೈನಿಕ ಕಲ್ಯಾಣ ಮಂಡಳಿ ಅಥವಾ ಡಿಸ್‍ಚಾರ್ಚ್ ಪ್ರಮಾಣ ಪತ್ರ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08194-234515 ಹಾಗೂ ಪ್ರಾಚಾರ್ಯರು ಸರ್ಕಾರಿ (ಮ) ಕೈಗಾರಿಕಾ ತರಬೇತಿ ಸಂಸ್ಥೆ ಚಿತ್ರದುರ್ಗ ಅವರನ್ನು ಸಂಪರ್ಕಿಸಲು ಕೋರಲಾಗಿದೆ.