ಜನವಿರೋಧಿ ಕಾಯ್ದೆ ವಿರೋಧಿಸಿ ಜಿಲ್ಲಾ ಜೆಡಿಎಸ್ ಪ್ರತಿಭಟನೆ.
1 min readಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾದ ಡಿ. ಯಶೋಧರ ರವರ ನೇತೃತ್ವದಲ್ಲಿ ಜನವಿರೋಧಿ ಬಿಜೆಪಿ ರಾಜ್ಯ ಸರ್ಕಾರದ ವಿರುದ್ದ ಭೂ ಸುಧಾರಣಾ ಕಾಯ್ದೆ. ಕೃಷಿ ಮಾರುಕಟ್ಟೆ ತಿದ್ದುಪಡಿ ಕಾಯ್ದೆ, ಕಾರ್ಮಿಕ ಕಾಯ್ದೆಗೆ ತಂದಿರುವ ಸುಗ್ರೀವಾಜ್ಞೆಯನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಯಿತು. ಈ ಸಂದರ್ಭದಲ್ಲಿ ತಾಲೂಕು ಜೆಡಿಎಸ್ ಘಟಕಗಳ ಅಧ್ಯಕ್ಷರುಗಳಾದಪಟೇಲ್ ತಿಪ್ಪೇಸ್ವಾಮಿ, ಜೆ.ಬಿ,ಶೇಖರ್, ಸಣ್ಣ ತಿಮ್ಮಪ್ಪ, ಶಿವಪ್ರಸಾದ್ ಗೌಡ, ಗಣೇಶ್ಕುಮಾರ್, ಶ್ರೀನಿವಾಸ ಗದಿಗೆ, ಪ್ರತಾಪ್ ಜೋಗಿ, ಗೋಪಾಲಸ್ವಾಮಿ ನಾಯಕ್, ವೀರಣ್ಣ, ಶಂಕರಮೂರ್ತಿ, ಜಲದಪ್ಪ, ಮಂಜುನಾಥ್, ಕಿರಣ್, ಹನುಮಂತರಾಯ, ರಂಗನಾಥ್, ಜಯಕುಮಾರ್, ಗುರುಸಿದ್ಧಪ್ಪ,ಕರಿಯಪ್ಪ, ಗೀತಮ್ಮ, ನಾಗಪ್ಪ ಮುಂತಾದ ಮುಖಂಡರು ಭಾಗವಹಿಸಿದ್ದರು.