ಹಿಂದುಳಿದ ವರ್ಗಗಳಿಗೆ ಗ್ರಾಮಪಂಚಾಯಿತಿಯಲ್ಲಿ ತೀವ್ರ ಅನ್ಯಾಯ: ಹಾಲುಮತ ಮಹಾಸಭಾ ಖಂಡನೆ
1 min readಚಳ್ಳಕೆರೆ: ಕರ್ನಾಟಕ ರಾಜ್ಯ ಸರ್ಕಾರ ಇತ್ತೀಚೆಗೆ ಬಿಡುಗಡೆ ಮಾಡಿರುವ ಗ್ರಾಮ ಪಂಚಾಯಿತಿ ಚುನಾವಣೆಯ ರಾಜ್ಯಪತ್ರದಲ್ಲಿ ಹಿಂದುಳಿದ ವರ್ಗಗಳಿಗೆ ತೀವ್ರವಾದ ಅನ್ಯಾಯವಾಗಿದೆ ಎಂದು ಹಾಲುಮತ ಮಹಾಸಭಾ ಆಕ್ರೋಶ ವ್ಯಕ್ತಪಡಿಸಿದೆ.
ಈ ಕುರಿತು ಚಳ್ಳಕೆರೆ ನಗರದ ಹಾಲುಮತ ಮಹಾಸಭಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಾಲುಮತ ಮಹಾಸಭಾ ಮುಖಂಡರು ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರಮುಖವಾಗಿ ಚಳ್ಳಕೆರೆ ಮೊಳಕಾಲ್ಮೂರು ಮತ್ತು ಚಿತ್ರದುರ್ಗ ಭಾಗದಲ್ಲಿ ಸಂಪೂರ್ಣ ಹಿಂದುಳಿದ ವರ್ಗಗಳ ಸಮುದಾಯಗಳಾಗಿರುವ ಕುರುಬ, ಗೊಲ್ಲ, ಉಪ್ಪಾರ, ಈಡಿಗ ಮಡಿವಾಳ, ಗಂಗಾಮತ, ನೇಕಾರ, ಕು೦ಬಾರ ಹೀಗೆ ಅನೇಕ ಸಮುದಾಯಗಳನ್ನು ಈ ಬಾರಿ ಕೈಬಿಟ್ಟಿರುವ ಸಮುದಾಯವನ್ನು ತೀವ್ರವಾಗಿ ಅನ್ಯಾಯವಾಗುವಂತಹ ದ್ದು ಎಂದು ಹಾಲುಮತ ಮಹಾಸಭಾ ರಾಜ್ಯ ಸಂಚಾಲಕರಾದ ಮಾಲತೇಶ್ ಅರಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಅನ್ಯಾಯವನ್ನು ಖಂಡಿಸಿ ರಾಜ್ಯಾದ್ಯಂತ ಹಾಲುಮತ ಸಭಾ ಮತ್ತು ಹಿಂದುಳಿದ ವರ್ಗಗಳ ಒಕ್ಕೂಟ ಸಭೆ ಸೇರಿ ಈ ಬಗ್ಗೆ ಚರ್ಚೆ ಮಾಡಲಾಗುವುದು ಎಂದರು.
ಹಾಲುಮತ ಮಹಾಸಭಾದ ಚಳ್ಳಕೆರೆ ತಾಲ್ಲೂಕು ಅಧ್ಯಕ್ಷ ಹಾಗೂ ನಗರಸಭಾ ಸದಸ್ಯ ಎಂ.ಜೆ. ರಾಘವೇಂದ್ರ ಮಾತನಾಡಿ ಚಳ್ಳಕೆರೆ ತಾಲೂಕಿನಲ್ಲಿ ಕಳೆದ ಅನೇಕ ಬಾರಿಯೂ ಕೂಡ ಹಿಂದುಳಿದ ಸಮುದಾಯಗಳಿಗೆ ಅನ್ಯಾಯವಾಗಿದ್ದು ಈ ಬಾರಿ ಅದು ಮುಂದುವರಿಯಲಿದ್ದು ನೋವಿನ ಸಂಗತಿ ಎಂದರು.
ಅನೇಕ ಗ್ರಾಮ ಪಂಚಾಯಿತಿಗಳಲ್ಲಿ ಹಿಂದುಳಿದ ವರ್ಗದ ಸಮುದಾಯಗಳ ಅನೇಕ ಮತದಾರರಿದ್ದರೂ ಕೂಡ ಅಲ್ಲಿ ಮೀಸಲಾತಿ ವಂಚಿತರಾಗಿದ್ದು ನೋವಿನ ಸಂಗತಿ . ಈ ಬಗ್ಗೆ ಸರ್ಕಾರ ಕೂಡಲೇ ಪರಿಷ್ಕೃತ ಪಟ್ಟಿಯನ್ನು ಬದಲಾಯಿಸುವ ಮೂಲಕ ಹಿಂದುಳಿದ ಸಮುದಾಯಗಳಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹ ಮಾಡಿದರು .
ಗ್ರಾಮಪಂಚಾಯತ್ ಚುನಾವಣೆಯಲ್ಲಿ ಹಿಂದುಳಿದ ಸಮುದಾಯಗಳು ತಳ ಮಟ್ಟವಾಗಿ ಕುಳಿತಿವೆ. ಅಂತಹ ತಳಮಟ್ಟದ ಸಮುದಾಯಗಳನ್ನು ಮೇಲೆತ್ತುವ ಕ್ರಿಯೆ ಗ್ರಾಪಂ ಮೂಲಕ ಆಗಬೇಕಾದ್ದು ನಮ್ಮ ಹಕ್ಕು ಹಾಗಾಗಿ ಹಿಂದುಳಿದ ವರ್ಗಗಳಿಗೆ ಹೆಚ್ಚು ಮೀಸಲಾತಿಯನ್ನು ಕೊಡಬೇಕು ಎಂದು ಹಾಲುಮತ ಮಹಾಸಭಾ ಆಗ್ರಹವನ್ನು ಮಾಡಿದೆ .
ಹಾಲುಮತ ಮಹಾಸಭಾದ ಉಪಾಧ್ಯಕ್ಷ ಹನುಮಂತಪ್ಪ ಚಿಕ್ಕ ಮದುರೆ ಮಾತನಾಡಿ ಸೋಮಗುದ್ದು ಗ್ರಾಮ ಪಂಚಾಯಿತಿಯಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಆಗಿರುವಂಥ ಅನ್ಯಾಯ ಮತ್ತೆ ಮರುಕಳಿಸಿದ್ದು ಹಿಂದುಳಿದ ಸಮುದಾಯಗಳಿಗೆ ತೀವ್ರವಾದಂತೆ ಅನ್ಯಾಯವಾಗಿದೆ. ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕುರುಬ ಸಮುದಾಯ ಇದ್ದರೂ ಕೂಡ ಬುಡಕಟ್ಟು ಕುರುಬ ಸಮುದಾಯ ಸಾಮಾನ್ಯ ಕ್ಷೇತ್ರದಲ್ಲಿ ಗೆಲ್ಲುವಂತ ಪಡಿಸದಿರುವುದು ಆ ದುರಂತದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ಮೊಳಕಾಲ್ಮೂರು ತಾಲೂಕು ಹಾಲುಮತ ಮಹಾಸಭಾದ ಅಧ್ಯಕ್ಷರಾದ ಜಗದೀಶ್ ಮಾತನಾಡಿ ಜಿಲ್ಲೆಯ ಮೊಳಕಾಲ್ಮುರು ತಾಲ್ಲೂಕಿನಲ್ಲಿ ಹಿಂದುಳಿದ ವರ್ಗದ ಗ್ರಾಮ ಪಂಚಾಯಿತಿ ಸದಸ್ಯ ಹುದ್ದೆ ಮತ್ತು ಅಧ್ಯಕ್ಷ ಹುದ್ದೆ ನಿರಂತರವಾಗಿ ಇಪ್ಪತ್ತು ವರ್ಷಗಳಿಂದಲೂ ಕೂಡ ನಮಗೆ ಲಭಿಸದೆ ಉಳ್ಳವರ ಪಾಲಾಗುತ್ತಿರುವುದು ಹಿಂದುಳಿದವರ ಅಭಿವೃದ್ಧಿ ಕುಂಠಿತವಾಗಿದೆ.
ಬುಡಕಟ್ಟು, ಸಂಸ್ಕೃತಿ ಪರಂಪರೆಯನ್ನು ಉಳಿಸಿ ಉಳಿಸಬೇಕಾದ ಸಮುದಾಯಗಳು ಇಂದು ರಾಜಕೀಯವಾಗಿ ಹಿಂದುಳಿದಿರುವುದು ಖಂಡನೀಯ ಎಂದರು .
ಚಳ್ಳಕೆರೆ ತಾಲ್ಲೂಕು ಪ್ರಧಾನ ಕಾರ್ಯದರ್ಶಿಯಾದ ಮಹಾಂತಪ್ಪ, ಮಧುಕುಮಾರ್, ಬಸವರಾಜ್, ಎಂ ಜೆ ಕುಮಾರ್, ತಿಪ್ಪೇಸ್ವಾಮಿ ಮತ್ತಿತರರು ಇದ್ದರು.