September 16, 2024

Chitradurga hoysala

Kannada news portal

ಪ್ರತಿ ದಿನ ಇ-ಜನತಾ ನ್ಯಾಯಾಲಯ

1 min read

ಚಿತ್ರದುರ್ಗ,ಆಗಸ್ಟ್.: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಅವರ ನಿರ್ದೇಶನದಂತೆ ಚಿತ್ರದುರ್ಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ತಾಲ್ಲೂಕು ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ರಾಜಿ ಮಾತುಕತೆ ಮೂಲಕ ತೀರ್ಮಾನಿಸಲು ಪ್ರತಿ ದಿನ ಇ-ಜನತಾ ನ್ಯಾಯಲಯ ನಡೆಸಲಾಗುತ್ತಿದೆ.ಮೋಟಾರು ವಾಹನ ಅಪಘಾತ ಪರಿಹಾರ ಅರ್ಜಿ, ರಾಜಿಯಾಗತಕ್ಕಂತಹ ಕ್ರಿಮಿನಲ್ ಪ್ರಕರಣ ಸಿವಿಲ್ ದಾವೆ, ನೆಗೋಷಿಯಬಲ್ ಇನ್ರ್ಟುಮೆಂಟ್ ಕಾಯ್ದೆ ಅಡಿ ದಾಖಲಾದ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗುತ್ತದೆ. ಜಿಲ್ಲಾ ನ್ಯಾಯಾಲಯ ಹಾಗೂ ಎಲ್ಲಾ ತಾಲ್ಲೂಕುಗಳ ನ್ಯಾಯಾಲಯಗಳಲ್ಲೂ ಇ-ಜನತಾ ನ್ಯಾಯಾಲಯ ನಡೆಸಲಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ದೂರವಾಣಿ ಸಂಖ್ಯೆ: 08194-222322 ಅನ್ನು ಸಂಪರ್ಕಿಸಬಹುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಬಿ.ಕೆ.ಗಿರೀಶ ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *