May 29, 2024

Chitradurga hoysala

Kannada news portal

30 ವರ್ಷಗಳಿಂದ ಗಣಪತಿ ಸುಳಿವೇ ಇಲ್ಲ ಯಾವ ಊರು ಗೊತ್ತೆ?

1 min read

ಚಳ್ಳಕೆರೆ: ದೊಡ್ಡ ದೊಡ್ಡ ನಗರಗಳಿಂದ ಚಿಕ್ಕ ಹಳ್ಳಿಗಳ ವರೆಗೂ ಗಣೇಶ ಸಂಭ್ರಮ ಮುಗಿಲು ಮುಟ್ಟುತ್ತದೆ. ಆದರೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾ. ಗೌರ ಸಮುದ್ರ ಗ್ರಾಮದಲ್ಲಿ ಮಾತ್ರ ಗಣೇಶ ಆಚರಣೆ 30 ವರ್ಷಗಳಿಂದ ಸುಳಿವೇ ಇಲ್ಲ. ಆಂದ್ರದ ಗಡಿಯಂಚಿನಲ್ಲಿರುವ ಈ ಗ್ರಾಮದಲ್ಲಿ ಮಾರಮ್ಮ ದೇವಿಯ ಮಹಿಮೆ ಚಿರಪರಿಚಿತ. ಪ್ರತಿ ಭಾದ್ರಪದ ಮಾಸದ ಮೊದಲ ದಿನ ದೇವಿಯ ಅದ್ದೂರಿ ಉತ್ಸವ ನಡೆಯಲಿದೆ. ಆದ್ರೆ ವಿಗ್ನ ನಿವಾರಕನಿಗೆ ಮಾತ್ರ ಅವಕಾಶವಿಲ್ಲ. ಕಾರಣ ದೇವಿಯ ಉತ್ಸವದ ವೇಳೆ ಬೇರೆ ಯಾವುದೇ ಆಚರಣೆ ಮಾಡುವಂತಿಲ್ಲ ಅನ್ನುವುದು ನಂಬಿಕೆ, ಅಲ್ಲದೆ ಯಾರಾದರೂ ಬೇರೆ ಆಚರಣೆ ಮಾಡಲು ಮುಂದಾದರೆ ಕೆಡಕು ಉಂಟಾಗುತ್ತೆ ಅನ್ನುವ ಪ್ರತೀತಿ ಇದೆ. ಅಲ್ಲದೆ 30 ವರ್ಷಗಳ ಹಿಂದೆ ಗ್ರಾಮದಲ್ಲಿ ಗಣೇಶ ಉತ್ಸವ ಆಚರಣೆ ಮಾಡಿದ್ದರು. ಇದರಿಂದ ಗ್ರಾಮಸ್ಥರು ಹಲವು ಸಂಕಟಗಳನ್ನ ಎದುರಿಸಬೇಕಾಗಿತ್ತು. ಇದರಿಂದ ಈ ಗ್ರಾಮದಲ್ಲಿ ಗಣೇಶ ಹಬ್ಬ ಆಚರಣೆ ಕಳೆದ 30 ವರ್ಷಗಳಿಂದ ಬಂದ್ ಆಗಿದ್ದು, ಮಾರಮ್ಮ ಜಾತ್ರೆ ಮಾತ್ರ ಇಲ್ಲಿನ ಜನರು ನೆರವೇರಿಸುತ್ತಾ ಬಂದಿದ್ದಾರೆ.

About The Author

Leave a Reply

Your email address will not be published. Required fields are marked *