ಕೋಟೆನಾಡಿನಲ್ಲಿ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ಮಾದಾರ ಚನ್ನಯ್ಯ ಸ್ವಾಮೀಜಿಗಳಿಂದ ಪೂಜೆ ಸಮರ್ಪಣೆ.
1 min readಚಿತ್ರದುರ್ಗ:ಇಂದು ಕೋಟೆನಾಡಿನಲ್ಲಿ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ಮಾಡಲಾಗಿದೆ.
ನಗರದ ಸ್ಟೇಡಿಯಂ ರಸ್ತೆಯ ಎಂಎಂ ಪ್ರೌಢಶಾಲಾ ಆವರಣದ ವೇದಿಕೆಯಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಲಾಗಿದ್ದು ಭಜರಂಗದಳ ಹಾಗೂ ವಿಶ್ವ ಹಿಂದು ಪರಿಷತ್ ವತಿಯಿಂದ ಗಣೇಶೋತ್ಸವ ಆಯೋಜನೆ ಮಾಡಲಾಗಿದೆ.
ಮಾದಾರ ಚನ್ನಯ್ಯ ಶ್ರೀಗಳಿಂದ ಗಣೇಶ ಮೂರ್ತಿಗೆ ಪೂಜೆ ಸಮರ್ಪಣೆ ಮಾಡಲಾಯಿತು.
ದೇಶದಾದ್ಯಂತ ಕೋವಿಡ್ ಮಹಮಾರಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಪ್ರತಿ ಬಾರಿ ಅದ್ದೂರಿಯಾಗಿ ನಡಯುತ್ತಿದ್ದ ಹಿಂದೂ ಮಹಾಗಣಪತಿ ಉತ್ಸವ ಈ ಬಾರಿ ಸರಳವಾಗಿ ಗಣೇಶೋತ್ಸವ ಆಚರಣೆಗೆ ಆಯೋಜಕರ ತೀರ್ಮಾನಿಸಲಾಗಿದೆ.
19 ದಿನಗಳ ಕಾಲ ಸರಳ ಪೂಜಾ ಕಾರ್ಯಕ್ರಮ ನಂತರ ಸರಳ ಮೆರವಣಿಗೆಯೊಂದಿಗೆ ಗಣೇಶ ವಿಸರ್ಜನೆ ಮಾಡಲಾಗುತ್ತದೆ.