January 25, 2025

Chitradurga hoysala

Kannada news portal

ರಾಜ್ಯದಲ್ಲಿ ಒಂದೇ ದಿನ 5851 ಹೊಸ ಕೇಸ್ ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ?

1 min read

ಬೆಂಗಳೂರು, ಆ.24: ರಾಜ್ಯದಲ್ಲಿ ಸೋಮವಾರ 5,851 ಹೊಸ ಕೊರೋನ ಪ್ರಕರಣಗಳು ದೃಢವಾಗಿವೆ. 130 ಜನರು ಸೋಂಕಿಗೆ ಬಲಿಯಾಗಿದ್ದು, 8,061 ಜನರು ಗುಣಮುಖರಾಗಿದ್ದಾರೆ.

ಈಗಾಗಲೇ ಒಟ್ಟು ಸೋಂಕಿತರ ಸಂಖ್ಯೆ 2,83,665ಕ್ಕೆ ತಲುಪಿದೆ. 768 ಸೋಂಕಿತರು ಐಸಿಯುನಲ್ಲಿದ್ದಾರೆ.

ಇಲ್ಲಿಯವರೆಗೆ ಒಟ್ಟು ಸಾವಿನ ಸಂಖ್ಯೆ 4,683ಕ್ಕೆ ತಲುಪಿದ್ದು, ಅನ್ಯ ಕಾರಣದಿಂದ 16 ಜನರು ಸಾವನ್ನಪ್ಪಿದ್ದಾರೆ. ಒಟ್ಟು ಸಕ್ರಿಯ ಕೊರೋನ ಪ್ರಕರಣಗಳ ಸಂಖ್ಯೆ 83,551ಕ್ಕೆ ಏರಿಕೆಯಾಗಿದ್ದು, ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ.

68 ಸೋಂಕಿತರು ಬಲಿ: ಬಾಗಲಕೋಟೆ, ಉತ್ತರ ಕನ್ನಡ, ಯಾದಗಿರಿ ತಲಾ 1, ಬಳ್ಳಾರಿ-7, ಬೆಳಗಾವಿ, ಉಡುಪಿ ತಲಾ- 2, ಬೆಂಗಳೂರು ನಗರ-5, ಚಾಮರಾಜನಗರ-1, ಚಿಕ್ಕಬಳ್ಳಾಪುರ-2, ಚಿತ್ರದುರ್ಗ-3, ದಕ್ಷಿಣ ಕನ್ನಡ, ತುಮಕೂರು ತಲಾ-5, ದಾವಣಗೆರೆ-2, ಧಾರವಾಡ, ಹಾಸನ ತಲಾ-3, ಹಾವೇರಿ, ಶಿವಮೊಗ್ಗ, ವಿಜಯಪುರ ತಲಾ-4, ಕಲಬುರ್ಗಿ, ಕೋಲಾರ ತಲಾ 2, ಕೊಪ್ಪಳ 5, ಮಂಡ್ಯ, ರಾಯಚೂರು ಜಿಲ್ಲೆಯಲ್ಲಿ ತಲಾ ಇಬ್ಬರು ಮೃತಪಟ್ಟಿದ್ದಾರೆ.

ಎಲ್ಲೆಲ್ಲಿ ಎಷ್ಟು: ರಾಜ್ಯದಲ್ಲಿ ಹೊಸದಾಗಿ 5,938 ಪ್ರಕರಣಗಳು ದೃಢಪಟ್ಟಿದ್ದು, ಅದರಲ್ಲಿ ಬಾಗಲಕೋಟೆ-139, ಬಳ್ಳಾರಿ -406, ಬೆಳಗಾವಿ-136, ಬೆಂಗಳೂರು ಗ್ರಾಮಾಂತರ-35, ಬೆಂಗಳೂರು ನಗರ-2,126, ಬೀದರ್-38, ಚಾಮರಾಜನಗರ-23, ಚಿಕ್ಕಬಳ್ಳಾಪುರ-81, ಚಿಕ್ಕಮಗಳೂರು-126, ಚಿತ್ರದುರ್ಗ-71, ದಕ್ಷಿಣ ಕನ್ನಡ-193, ದಾವಣಗೆರೆ-265, ಧಾರವಾಡ-194, ದಗದ-182, ಹಾಸನ-196, ಹಾವೇರಿ-150, ಕಲಬುರ್ಗಿ-203, ಕೊಡಗು-15, ಕೋಲಾರ-47, ಕೊಪ್ಪಳ-256, ಮಂಡ್ಯ -51, ಮೈಸೂರು-92, ರಾಯಚೂರು-81, ರಾಮನಗರ-42, ಶಿವಮೊಗ್ಗ-246, ತುಮಕೂರು-112, ಉಡುಪಿ-117, ಉತ್ತರ ಕನ್ನಡ-108, ವಿಜಯಪುರ-134, ಯಾದಗಿರಿ ಜಿಲ್ಲೆಯಲ್ಲಿ 73 ಪ್ರಕರಣಗಳು ಪತ್ತೆಯಾಗಿವೆ.

About The Author

Leave a Reply

Your email address will not be published. Required fields are marked *