ಮಾಜಿ ಶಾಸಕ ಬಿ.ಜಿ. ಗೋವಿಂದಪ್ಪ ಸಹೋದರ ಬಿ.ಜಿ. ವೆಂಕಟೇಶ್ ನಿಧನ.
1 min readಹೊಸದುರ್ಗ : ಹೊಸದುರ್ಗ ತಾಲ್ಲೂಕಿನ ಮಾಜಿ ಶಾಸಕರಾದ ಬಿ.ಜಿ.ಗೋವಿಂದಪ್ಪ ರವರ ಅಣ್ಣನವರಾದ ಬಿ.ಜಿ.ವೆಂಕಟೇಶ್ (70) ಅವರು ತೀರ್ವ ಉಸಿರಾಟದ ತೊಂದರೆಯಿಂದ ಸೋಮವಾರ ಮೃತರಾಗಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ತೀರ್ವ ಉಸಿರಾಟದಿಂದ ಬಳಲುತ್ತಿದ್ದರು. ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ತೋರಿಸಿದ್ದು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆದಲ್ಲಿ ಮೃತರಾಗಿದ್ದು ಇವರ ಅಂತ್ಯಕ್ರಿಯೆಯು ಇಂದು ಬೆಲಗೂರಿನಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಮೃತ ಬಿ.ಜಿ.ವೆಂಕಟೇಶ್ ಅವರು ಸಮಾಜದಲ್ಲಿ ಉನ್ನತ ಗೌರವದಿಂದ ಬದುಕುತ್ತಿದ್ದರು. ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನಿವೃತ್ತ ಸುಪಾರ್ಡೆಂಟ್ ಆಗಿ ಹಾಗೂ ಹೊಸದುರ್ಗ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಲ್ಲಿ ಗೌರವ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಇವರ ಸ್ವಭಾವ ಸರಳ ಸಜ್ಜನಿಕೆ, ಪ್ರತಿಯೊಬ್ಬರನ್ನೂ ನಗಿಸದೆ ಇರಲಾರದ ಅಪರೂಪದ ವ್ಯಕ್ತಿ, ಸಂಘ ಜೀವಿ, ಸಮಾಜ ಮುಖಿ ಚಿಂತನೆಯುಳ್ಳ ಬಿ.ಜಿ.ವೆಂಕಟೇಶ್ ಅವರು ದೈವಾದೀನರಾಗಿದ್ದು ಅತ್ಯಂತ ದುಃಖಕರ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಮಾಜಿ ಶಾಸಕರಾದ ಬಿ.ಜಿ.ಗೋವಿಂದಪ್ಪ ಸೇರಿದಂತೆ ಅವರ ಕುಟುಂಬ ಮತ್ತು ಅಭಿಮಾನಿ ಬಳಗ ಹಾಗೂ ಮೃತ ಬಿ.ಜಿ.ವೆಂಕಟೇಶ್ ಸ್ನೇಹ ಬಳಗ ಕಂಬನಿ ಮಿಡಿದಿದ್ದಾರೆ.