ಸಂಜೀವಿನಿ ಜೀವರಕ್ಷಕ ಟ್ರಸ್ಟ್ ಗೆ 5 ಸಾವಿರ ದೇಣಿಗೆ ನೀಡಿದ ಪುಟ್ಟ ಬಾಲಕ ದಿಗಂತ್
1 min readಚಿತ್ರದುರ್ಗ: ಪುಟ್ಟ ಬಾಲಕ ಚಿತ್ರದುರ್ಗ ನಗರದ ಕೆಳಗೋಟೆಯ ದಿಗಂತ್ ತನ್ನ ಹುಟ್ಟುಹಬ್ಬವನ್ನು ಪ್ರತಿವರ್ಷ ಅದ್ದೂರಿಯಿಂದ ಆಚರಿಸುತ್ತಿದ್ದನು. ಆದರೆ ಹತ್ತನೆ ಹುಟ್ಟುಹಬ್ಬವನ್ನು ಈ ಬಾರಿ ಸರಳವಾಗಿ ಆಚರಿಸಿಕೊಂಡನು.ಆದರೆ ತನ್ನ ಹುಟ್ಟು ಹಬ್ಬಕ್ಕೆ ಪ್ರತಿ ವರ್ಷ ಸಾವಿರಾರು ರೂ ಮೊತ್ತವನ್ನು ವೆಚ್ಚಗೊಳಿಸುತ್ತಿದ್ದನು. ಆದರೆ ಈ ಬಾರಿ ಆ ವೆಚ್ಚ ಮಾಡುವ ಹಣವನ್ನು ಸಂಜೀವಿನಿ ಜೀವರಕ್ಷಕ ಟ್ರಸ್ಟಿಗೆ 5000ರೂ ದೇಣಿಗೆ ನೀಡಿದ್ದಾನೆ. ತಂದೆ ಮಂಜುನಾಥ ಸ್ವಾಮಿ ತಾಯಿ ಸ್ವಾಮ್ಯ ಕೆಎಚ್ಬಿ ಕಾಲೋನಿ ಕೆಳಗೋಟೆ ಇವರ ನಿವಾಸ ಇಂತಹ ಸಾಮಾಜಿಕ ಆಲೋಚನೆಗಳು ಇಂತಹ ಮಕ್ಕಳಲ್ಲಿ ಬರುವುದು ಅತಿವಿರಳ ಇಂತಹ ಮನೋಭಾವದಿಂದ ಇಂತಹ ಮಕ್ಕಳು ಮುಂದಿನ ದಿನಗಳಲ್ಲಿ ಉತ್ತಮ ಸಮಾಜ ಕಟ್ಟುವ ವ್ಯಕ್ತಿಗಳಾಗುತ್ತಾರೆ ಎಂದು ಟ್ರಸ್ಟ್ ನ ಮುಖ್ಯಸ್ಥ ಇಂಗಳದಾಳ್ ರಂಗಸ್ವಾಮಿ ಮಗುವಿನ ಬಗ್ಗೆ ಮೆಚ್ಚುಗೆಯ ಮಾತುಗಳಾಡಿದ್ದಾರೆ.