ಜನರಿಗೆ ಮಾತು ಕೊಟ್ಟಂತೆ ರಸ್ತೆ ನಿರ್ಮಾಣ ಮಾಡಿದ್ದೇನೆ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ
1 min readಚಿತ್ರದುರ್ಗ: ಉತ್ತಮ ಮತ್ತು ಗುಣಮಟ್ಟದ ವಿಶಾಲವಾದ ರಸ್ತೆ ನಿರ್ಮಾಣಕ್ಕೆ ಒತ್ತು ನೀಡಿ ನಗರಕ್ಕಿಂತ ಗ್ರಾಮೀಣ ಭಾಗ ಯಾವುದೇ ಕೊರತೆಯಾಗದಂತೆ ನೋಡಿಕೊಂಡಿದ್ದೇನೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.
ತಾಲೂಕಿನ ಇಂಗಳದಾಳ್ ಗ್ರಾಮದಲ್ಲಿ ಸಿ.ಸಿ.ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ ಇಂಗಳದಾಳ್ ರಸ್ತೆಯನ್ನು ನಾನು ಮೊದಲ ಬಾರಿ ಮಾಡಿಸಿದ್ದೆ ಈಗ ಜೋಡಿಚಿಕ್ಕೆನಹಳ್ಳಿ ಯಿಂದ ಯರೆಹಳ್ಳಿವರೆಗೂ 7ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದೆ. ಒಂದು ವೇಳೆ ಹಣ ಕಡಿಮೆ ಬಂದರೆ ನೀಡಲಾಗುವುದು.ಗುಣಮಟ್ಟದ ರಸ್ತೆ ಮಾಡಲು ತಿಳಿಸಿದರು. ಈ ಭಾಗದ ಹೆಚ್ಚು ಹಳ್ಳಿಯ ಜನರು ಪ್ರಯಾಣ ಮಾಡುವ ಕಾರಣ ಹಾಳಗಿದೆ ಮತ್ತು ಹೆಚ್ಚು ಮಳೆ ಬಂದಾಗ ಹಳ್ಳ ಬಂದು ನೀರಿನ ಒಡೆತಕ್ಕೆ ಸಹ ರಸ್ತೆ ಹಾಳಗಿದ್ದು ಇಂಗಳದಾಳ್ ಗೆ ಸಿ ಸಿ ರಸ್ತೆ ಗ್ರಾಮಸ್ಥರು ತುಂಬಾ ದಿನದ ಬೇಡಿಕೆಯಾದ್ದರಿಂದ ಸಿಸಿ ರಸ್ತೆಗೆ ಹಣ ನೀಡಿ ಮೊದಲಿಗಿಂತ ಅಗಲವಾದ ರಸ್ತೆ ಮಾಡಿಸಿದ್ದೇನೆ ಎಂದು ತಿಳಿಸಿದರು. .ಊರಿಗೆ ಬೀದಿ ದೀಪ ಸಮಸ್ಯೆ ತಿಳಿಸಿದ. ಗ್ರಾಮಸ್ಥರಿಗೆ ಕೂಡಲೇ ಇಂದು ಸಂಜೆಯೊಳಗೆ ಹಾಕಿಸಲು ಪಿಡಿಒ ಗೆ ತಾಕೀತು ಮಾಡಿದರು.
ಗ್ರಾಮಸ್ಥರು ಮಾತನಾಡಿ ಸಹ ಕಳೆದ 30 ವರ್ಷಗಳಿಂದ ಇಷ್ಟು ವಿಶಾಲವಾದ ರಸ್ತೆ ನೋಡಿರಲಿಲ್ಲ ಶಾಸಕರು ಹೆಚ್ಚು ಕಾಳಜಿ ನಮ್ಮ ಹಳ್ಳಿಯ ಮೇಲೆ ಇರುವುದು ಸಂತೋಷದ ವಿಚಾರವಾಗಿದೆ.ರಸ್ತೆಯ ತುಂಬಾ ಅಚ್ಚುಕಟ್ಟಾಗಿ ಉತ್ತಮವಾಗಿದೆ. ರಸ್ತೆಯ ಜೊತೆಗೆ ಸಮುದಾಯ ಭವನಕ್ಕೆ ಹೆಚ್ಚಿನ ಹಣ ನೀಡಿ ನೆನೆಗುದಿಗೆ ಬಿದ್ದಿರುವ ಸಮುದಾಯ ಭವನ ಪೂರ್ಣಗೊಳ್ಳಲು ಶಾಸಕ ಸಹಕಾರದಿಂದ ನೆರವೇರಿದೆ ಎಂದು ಸಂತೋಷ ವ್ಯಕ್ತಪಡಿಸಿದರು.
ಮುಖಂಡರಾದ ಜಿ.ತಿಪ್ಪೇಸ್ವಾಮಿ, ಪಿ.ಕೆ.ರಾಮಣ್ಣ, ಕೆ.ಟಿ.ಗಾದ್ರಪ್ಪ, ಪಿ.ಓ.ತಿಮ್ಮಯ್ಯ, ಜಿ.ಟಿ.ಓಬಣ್ಣ, ಸಣ್ಣಪ್ಪ, ಬಿ.ಅಶೋಕ್, ಜಿ.ಟಿ.ನಾಗರಾಜ್, ಮಾಜಿ ಗ್ರಾಪಂ ಸದಸ್ಯ ಹೆಚ್.ನಾಗರಾಜ್, ಸಿದ್ದಪ್ಪ, ಫಿಲ್ಟರ್ ರಾಮಣ್ಣ,ಬಸವರಾಜ್, ಅವಿನಾಶ್, ಅಜಯ್, ಓಬಳೇಶ್ ಇಂಜಿನಿಯರ್ ಗೋಪಲ್, ಪಿಡಿಒ ಹಾಜರಿದ್ದರು.