Recent Posts

October 16, 2021

Chitradurga hoysala

Kannada news portal

ನಿತ್ಯಾನಂದನ ಕೈಲಾಸ ದೇಶಕ್ಕೆ ಭೇಟಿ ನೀಡಬೇಕೆಂಬ ಆಸೆ ಪಟ್ಟ ಚಿತ್ರ ನಟಿ ಯಾರು ಗೊತ್ತ?

1 min read

ಚೆನ್ನೈ:- ಅತ್ಯಾಚಾರ ಸೇರಿದಂತೆ ಹಲವು ಆರೋಪ ಎದುರಿಸುತ್ತಿರುವ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಹೇಳಿಕೊಳ್ಳುತ್ತಿರುವ ‘ಕೈಲಾಸ’ ದೇಶಕ್ಕೆ ಭೇಟಿ ನೀಡಬೇಕೆಂಬ ಮಹದಾಸೆಯನ್ನು ತಮಿಳು ಚಿತ್ರ ನಟಿ ಮೀರಾ ಮಿಥುನ್ ಹಂಚಿಕೊಂಡಿದ್ದಾರೆ.

ತಮಿಳು ಚಿತ್ರರಂಗದ ದಿಗ್ಗಜರುಗಳಾದ ರಜನಿಕಾಂತ್, ಕಮಲ್ ಹಾಸನ್ ಹಾಗೂ ತ್ರಿಷಾ, ವಿಜಯ್, ಅಜಿತ್ ಅವರನ್ನು ಟೀಕಿಸುವ ಮೂಲಕ ಸುದ್ದಿಯಲ್ಲಿರುವ ಮೀರಾ ಮಿಥುನ್ ಈಗ ನಿತ್ಯಾನಂದನ ಹೊಗಳುವ ಮೂಲಕ ಮತ್ತೊಮ್ಮೆ ಸಂಚಲನ ಸೃಷ್ಟಿಸಿದ್ದಾರೆ.

ಅತ್ಯಾಚಾರ ಸೇರಿದಂತೆ ಹಲವು ಪ್ರಕರಣಗಳಲ್ಲಿ ಗಂಭೀರ ಆರೋಪ ಎದುರಿಸುತ್ತಿರುವ ನಿತ್ಯಾನಂದ ದೇಶದಿಂದ ಪರಾರಿಯಾಗಿದ್ದು… ‘ಕೈಲಾಸ’ ಹೆಸರಿನಲ್ಲಿ ‘ದೇಶ’ ಸ್ಥಾಪಿಸಿರುವುದಾಗಿ ಹೇಳಿ.. ತನ್ನದೇ ಆದ ಕರೆನ್ಸಿ ಸೃಷ್ಟಿಸಿಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಈಗ ನಿತ್ಯಾನಂದನ ‘ಕೈಲಾಸ’ ದೇಶವನ್ನು ಮೀರಾ ಮಿಥುನ್ ಕೊಂಡಾಡಿದ್ದಾರೆ. ನಿತ್ಯಾನಂದನನ್ನು ಎಲ್ಲರೂ ಟೀಕಿಸುತ್ತಿದ್ದಾರೆ. ಆದರೆ ‘ಕೈಲಾಸ’ ದೇಶದ ಮುಖ್ಯಸ್ಥರಾಗಿ ಅವರು ದಿನ ದಿನಕ್ಕೂ ಬಲಿಷ್ಟಗೊಳ್ಳುತ್ತಿದ್ದಾರೆ. ನಾನೂ ಕೂಡಾ ಆದಷ್ಟು ಬೇಗ ‘ಕೈಲಾಸ’ ಕ್ಕೆ ತೆರಳಲು ಕಾತುರಳಾಗಿದ್ದೇನೆ ಎಂದು ಮೀರಾ ಮಿಥುನ್ ಹೇಳಿಕೊಂಡಿದ್ದಾರೆ.

Leave a Reply

Your email address will not be published. Required fields are marked *

You may have missed