ಹುಚ್ಚು ನಾಯಿಗೆ ತೊಡಿದ ಖೆಡ್ಡಾಕ್ಕೆ ತಾನೇ ಬಲಿಯಾದ ವ್ಯಕ್ತಿ
1 min readಹುಚ್ಚು ನಾಯಿ ಕೊಲ್ಲಲು ತಾನೇ ಹಾಯಿಸಿದ ವಿದ್ಯುತ್ ಗೆ ವ್ಯಕ್ತಿ ಬಲಿ.
ಶಿವಮೊಗ್ಗ: ಹುಚ್ಚು ನಾಯಿಗೆ ಖೆಡ್ಡಾ ತೋಡಲು ಹೋಗಿ ವ್ಯಕ್ತಿಯೊಬ್ಬ ಬಲಿಯಾದ ಘಟನೆ ಸೊರಬ ಪಟ್ಟಣದ ಕಾನಕೇರಿ ಬಡಾವಣೆಯಲ್ಲಿ ತಡರಾತ್ರಿ ವರದಿಯಾಗಿದೆ.
ಸೊರಬ ಪಟ್ಟಣದ ಕಾನಕೇರಿ ಬಡಾವಣೆಯಲ್ಲಿ ಮನೆಯ ಅಂಗಳಕ್ಕೆ ಹಾಗೂ ಮನೆಯ ಒಳಗಡೆ ಹುಚ್ಚುನಾಯಿ ಬರುತ್ತದೆ ಎಂದು ಮನೆಯ ಮಾಲಿಕ ನಿಂಗಪ್ಪ ಪುಟ್ಟಪ್ಪ (58) ಗೇಟ್ ಮುಂಭಾಗ ತಂತಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾನೆ. ರಾತ್ರಿ ಮೂತ್ರ ಮಾಡಲು ತೆರಳಿದಾಗ ಆತ ಅದೇ ತಂತಿ ತುಳಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಹುಚ್ಚುನಾಯಿಗೆ ಖೆಡ್ಡಾ ತೋಡಲು ಹೋಗಿ ಆತನೇ ಮೃತಪಟ್ಟಿರುವುದು ದುರ್ದೈವ. ಮೃತ ನಿಂಗಪ್ಪನ ಪುತ್ರ ರಾಕೇಶ್ ಕುಮಾರ್ ನೀಡಿದ ಹೇಳಿಕೆ ಅನ್ವಯ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.