ಪೂರ್ಣಿಮಾ ಶ್ರೀನಿವಾಸ್ ಗುಣಮುಖ ಅಭಿಮಾನಿಗಳಿಂದ ಪೂಜೆ ಸಲ್ಲಿಸಿ, ಸಿಹಿ ವಿತರಣೆ
1 min readಹಿರಿಯೂರು: ಹಿರಿಯೂರಿನ ಶಾಸಕಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ ಕಾರಣ,ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್ ಹಾಗೂ ಡಿ.ಟಿ.ಶ್ರೀನಿವಾಸ್ ಅಭಿಮಾನಿಗಳ ಬಳಗದಿಂದ ಸೋಮವಾರ ನಗರದ ಶ್ರೀ ತೇರುಮಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಡಾ:ರಾಜ್ ಕುಮಾರ್ ವೃತ್ತದಲ್ಲಿ ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಡಿ.ಗಂಗಾಧರ್, ದೇವರ ಕೃಪೆ ಹಾಗೂ ತಾಲೂಕಿನ ಜನತೆಯ ಹಾರೈಕೆಯ ಫಲವಾಗಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ರವರು ಗುಣಮುಖ ರಾಗಿದ್ದು ಸಂತಸ ತಂದಿದ್ದು ಆ ಮೂಲಕ ಯಾರೇ ಕೊರೊನಾ ಸೋಂಕಿತರು ಆತ್ಮ ವಿಶ್ವಾಸ ದೊಂದಿಗೆ ಚಿಕಿತ್ಸೆಗೆ ಸಹಕರಿಸಿದರೇ ಕೊರೊನಾ ಬಗ್ಗೆ ಭಯ ಪಡುವ ಅಗತ್ಯವಿಲ್ಲ ಎಂಬ ಸಂದೇಶಕ್ಕೆ ಕಾರಣರಾಗಿದ್ದಾರೆ ” ಎಂದರು.
ಶಾಸಕರು ಸ್ವತಃ ಕೋವಿಡ್ ಆಸ್ಪತ್ರೆಗೆ ತೆರಳಿ ಕೊರೊನಾ ಪೀಡಿತರಿಗೆ ಧೈರ್ಯ ತುಂಬಿ ಬಂದಿದ್ದರು, ತಾಲ್ಲೂಕಿನ ಜನತೆ ಅವರ ಆರೋಗ್ಯ ವೃದ್ದಿಗಾಗಿ ವಿವಿಧ ರೀತಿಯಲ್ಲಿ ಪೂಜೆ, ಹರಕೆ ಹೊತ್ತಿದ್ದರು ” ಎಂದಿದ್ದಾರೆ.
ಪೂರ್ಣಿಮಾ ಶ್ರೀನಿವಾಸ್ ರವರು ತಾಲ್ಲೂಕು ಅಭಿವೃದ್ಧಿಗೆ ಹಗಲಿರುಳು ಶ್ರಮಪಡುತ್ತಿದ್ದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ತಾಲ್ಲೂಕು ಅಭಿವೃದ್ಧಿ ಹೊಂದಿ ತಾಲ್ಲೂಕು ಒಂದು ಮಾದರಿ ತಾಲ್ಲೂಕು ಆಗಿ ಹೊರ ಹೊಮ್ಮಲಿದೆ ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್ ರವರು ರಾಜ್ಯ ಬಿಜೆಪಿ ನಾಯಕರುಗಳ ಹಾಗೂ ರಾಜ್ಯ ಮುಖಂಡರಾದ ಡಿ.ಟಿ.ಶ್ರೀನಿವಾಸ್ ರವರ ರಾಜಕೀಯ ಅನುಭವದ ಮಾರ್ಗದರ್ಶನದಲ್ಲಿ ಹಿರಿಯೂರು ತಾಲ್ಲೂಕು ಅಭಿವೃದ್ಧಿ ತಾಲ್ಲೂಕು ಆಗಿ ರಾಜ್ಯಕ್ಕೆ ಮಾದರಿ ಆಗಲಿದೆ ‘ ಎಂದಿದ್ದಾರೆ.
ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷರಾದ ಉಗ್ರಮೂರ್ತಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ದ್ಯಾಮೆಗೌಡ, ಎಂ ಎಸ್ ರಾಘವೇಂದ್ರ, ಕೇಶವಮೂರ್ತಿ, ಕಬಡ್ಡಿ ಶ್ರೀನಿವಾಸ, ಹರೀಶ್, ಶೋಭಾ, ಪುರಸಭಾ ಮಾಜಿ ಸದಸ್ಯ ಬಿ ಕೆ ಕರಿಯಪ್ಪ, ನಗರಸಭೆ ಸದಸ್ಯ ಪಲ್ಲವ, ಬಾಲಕೃಷ್ಣ, ನಗರಸಭೆ ಮಾಜಿ ಅಧ್ಯಕ್ಷೆ ಟಿ ಮಂಜುಳ ಮುಖಂಡರಾದ ವೆಂಕಟೇಶ್, ನಟರಾಜ್, ಗೊಲ್ಲ ಸಂಘದ ನಿರ್ದೇಶಕ ಕರಿಯಣ್ಣ, ತಮ್ಮಣ್ಣ, ಲಲಿತಮ್ಮ, ಪ್ರಜ್ವಲ್, ಎ.ರಾಘವೇಂದ್ರ, ಪಿ.ಕೃಷ್ಣಮೂರ್ತಿ, ನವೀನ್ ಮುಂತಾದವರು ಉಪಸ್ಥಿತರಿದ್ದರು.