ಬೆಂಬಲಿಗರ, ಕಾರ್ಯಕರ್ತರ ಉದ್ಯೋಗ ಖಾತ್ರಿ ಬಿಲ್ ಗೆ ಪಟ್ಟು ಹಿಡಿದ ಜಿಲ್ಲಾ ಪಂಚಾಯತ ಸದಸ್ಯರು.
1 min readಸಭೆ ಆರಂಭದಿಂದ ಮಧ್ಯಾಹ್ನ 1-15 ರ ವರೆಗೂ ಕೇವಲ ಉದ್ಯೋಗ ಖಾತ್ರಿ ಬಿಲ್ ಮಾಡುವುದೆ ಸದ್ದು ಇತರೆ ಇಲಾಖೆ ಸುದ್ದಿ ಇಲ್ಲದೆ ಅರ್ಧ ದಿನ ಮುಕ್ತಾಯ. ಹಂತಕ್ಕೆ
ಚಿತ್ರದುರ್ಗ: ಉದ್ಯೋಗ ಖಾತ್ರಿ ಸಂಪೂರ್ಣ ಟೀಮ್ ನಿಮ್ಮ ಕೈಯಲ್ಲಿದೆ ಎಲ್ಲಾವನ್ನು ಸರಿಪಡಿಸುವ ಕೆಲಸ ನಿಮ್ಮ ಕಡೆಯಿಂದ ಆಗಬೇಕು. ಉದ್ಯೋಗ ಖಾತ್ರಿ ಕೆಲಸಕ್ಕೆ ಖಾಸಗಿ ಇಂಜಿನಿಯರ್ ಗಳು ಏಕೆ, ಸರ್ಕಾರದ ಇತರೆ ಇಲಾಖೆಯ ಇಂಜಿನಿಯರ್ ಬಳಸಿಕೊಳ್ಳಿ ಎಂದು ಸಿಇಒ ಗೆ ಜಿಲ್ಲಾ ಪಂಚಾಯತ ಸದಸ್ಯರ ಒಕ್ಕೊರಲ್ಲ ಆಗ್ರಹ
ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು ಅವರ ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಕೆಡಿಪಿ ಸಭೆಯು ನಡೆಯಿತು.
ಜಿಲ್ಲಾ ಪಂಚಾಯತ ಸದಸ್ಯ ನಾಗೇಂದ್ರ ನಾಯ್ಕ ಮಾತನಾಡಿ ಅನೇಕ ಕಡೆಗಳಲ್ಲಿ ಉದ್ಯೋಗ ಖಾತ್ರಿ ಕೆಲಸ ಆಗಿದೆ. 2 ವರ್ಷಗಳಿಂದ ಕಾಮಗಾರಿ ಮುಗಿದರು ಬಿಲ್ ಬಾಕಿ ಇದೆ. ನಮಗೆ ಬರುವ 20-25 ಲಕ್ಷ ಅನುದಾನದಲ್ಲಿ ಬೆಂಬಲಿಗರಿಗೆ ಸಮಾಧಾನ ಮಾಡಲು ಆಗಲ್ಲ. ಕಾರ್ಯಕರ್ತರು, ಬೆಂಬಲಿಗರನ್ನು ಉದ್ಯೋಗ ಖಾತ್ರಿ ಕಾಮಗಾರಿ ಹೆಚ್ಚು ಅನುದಾನ ಬರುವುದರಿಂದ ಅದರಿಂದ ಎಲ್ಲಾರನ್ನು ಸಮಾಧಾನ ಸಾಧ್ಯ ಎಂದು ಸಭೆಯಲ್ಲಿ ತಮ್ಮ ಬೆಂಬಲಿಗ ಉದ್ಯೋಗ ಖಾತ್ರಿ ಕೆಲಸಗಾರರ ಕುರಿತು ಬ್ಯಾಟಿಂಗ್ ಮಾಡಿದರು. ಮೊದಲು ಕಳೆದ2-3 ವರ್ಷಗಳ ಉದ್ಯೋಗ ಖಾತ್ರಿ ಬಿಲ್ ಮಾಡಿ ಎಂದು ಆಗ್ರಹಹಿದರು.
ಇದಕ್ಕೆ ಧ್ವನಿಗೂಡಿಸಿದ ಜಿಲ್ಲಾ ಪಂಚಾಯತ ಸದಸ್ಯ ಯೋಗೇಶ್ ಬಾಬು ಮಾತನಾಡಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಉದ್ಯೋಗ ಖಾತ್ರಿ ಕೆಲಸ ಮಾಡಲು ಯಾರು ಮುಂದೆ ಬರುತ್ತಿಲ್ಲಮ ಎಲ್ಲಾ ಸದಸ್ಯರು, ಮುಖಂಡರು ಕಣ್ಣಿರು ಹಾಕುತ್ತಿದ್ದಾರೆ ಎಂದು ಉದ್ಯೋಗ ಖಾತ್ರಿ ಆಳಲನ್ನು ತೊಡಿಕೊಂಡರು.
ಜಿಲ್ಲಾ ಪಂಚಾಯತ ಸದಸ್ಯ ಕೃಷ್ಣಮೂರ್ತಿ ಉದ್ಯೋಗ ಖಾತ್ರಿ ಕುರಿತು ಮಾತನಾಡಿ ಜಿಲ್ಲಾ ಪಂಚಾಯತ ಸಭೆಯಲ್ಲಿ ಉದ್ಯೋಗ ಖಾತ್ರಿ ಕೆಲಸದಲ್ಲಿ ಸಾಕಷ್ಟು ಅವ್ಯವಹಾರ ನಡೆಯುತ್ತಿದೆ. ಸರ್ಕಾರದ ಇಂಜಿನಿಯರ್ ಬಗ್ಗೆ ನಂಬಿಕೆ ಇಲ್ಲ. ಉದ್ಯೋಗ ಖಾತ್ರಿ ಇಂಜಿನಿಯರ್ ಜಲಾಮೃತ ಯೋಜನೆ ಟೆಂಟರ್ ಮಾಡುತ್ತಾರೆ ಎಂದರೆ ನಾಚಿಕೆ ಆಗಬೇಕು. ಇಂಜಿನಿಯರ್ ವಿರುದ್ದ ಯಾವ ಕ್ರಮ ತೆಗೆದುಕೊಂಡಿದ್ದಿರಿ ತಿಳಿಸಿ ಎಂದು ಸದಸ್ಯರುಗಳು ಅಗ್ರಹಿಸಿದರು. ಉದ್ಯೋಗ ಖಾತ್ರಿ ಕೆಲಸಕ್ಕೆ ಕೇವಲ ಒಂದೇ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ ಆದರೆ ಆ ಸಂಸ್ಥೆಯಿಂದ ಯಾವ ಅಧಿಕಾರಿಗೆ ಲಾಭ ಎಂದು ತಿಳಿಯುತ್ತಿಲ್ಲ. ಹೌಟ್ ಸೋರ್ಸ ಇಂಜಿನಿಯರ್ ಬಗ್ಗೆ ಏನು ಕ್ರಮ ತೆಗೆದುಕೊಳ್ಳತ್ತಿರಾ? ಉದ್ಯೋಗ ಖಾತ್ರಿ ಯೋಜನೆ ಕಾರ್ಯನಿರ್ವಹಿಸುವ ಸಂಸ್ಥೆಯ ಪ್ರತಿ ವರ್ಷ ಏಕೆ ಟೆಂಡರ್ ಆಗುತ್ತಿಲ್ಲ. ಆ ಸಂಸ್ಥೆ ಮೇಲೆ ಏಕೆ ಅಷ್ಟೊಂದು ಪ್ರೀತಿ ಎಂದು ಕೆಂಡಮಂಡಲರಾದದರು. ಜಿಲ್ಲಾ ಪಂಚಾಯತ ಸಭೆಯನ್ನು ಕೆಸಲಕ್ಕೆ ಬಾರದ ಟ ಜಿಲ್ಲಾ ಪಂಚಾಯತ ಆಗಿದೆ. ಯಾವುದೇ ನಿರ್ಣಯ ಸರ್ಕಾರಕ್ಕೆ ಕಳುಹಿಸಿದರು ಅಲ್ಲಿ ಪ್ರಯೋಜನ ಆಗುತ್ತಿಲ್ಲ ಅಧಿಕಾರ ಲೋಪವೋ ನನಗೆ ತಿಳಿಯುತ್ತಿಲ್ಲ. ವಾಲ್ಮೀಕಿ ಸ್ವಾಮೀಜಿ ಅವರನ್ನು ರಾಮಜನ್ಮ ಭೂಮಿ ಟ್ರಸ್ಟ್ ಗೆ ಸದಸ್ಯರನ್ನಾಗಿ ಮಾಡಲು ಶಿಫಾರಸ್ಸು ಮಾಡಲು ಸರ್ಕಾರಕ್ಕೆ ಕಳಿಸಲಾಗಿದೆ. ಏಕೆ ಆಗುತ್ತಿಲ್ಲ. ಕನ್ನಡ ನಾಡು ಕರೆಯಬೇಕ ಅಥವಾ ಮರಾಠಿ ನಾಡು ಎಂದು ಕರೆಯಬೇಕು ಎಂಬುವ ಗೊಂದಲ ಮೂಡುತ್ತಿದೆ ಎಂದರು.
ಜಿಲ್ಲಾ ಪಂಚಾಯತ ಸದಸ್ಯ ಶಿವಮೂರ್ತಿ ಮಾತನಾಡಿ ಯಾವುದೇ ಒಂದು ಯೋಜನೆಯನ್ನು ಸಂಬಂಧಪಟ್ಟ ಇಲಾಖೆಗೆ ಕಳಿಸಿ ಹಿಂದುಳಿದ ವರ್ಗದ ಆಯೋಗಕ್ಕೆ ಕಳಿಸಿದ್ದಿರ ಅಥವಾ ಹಿಂದುಳಿದ ಕಮಿಷನ್ ಗೆ ಕಳಿಸಿದ್ದಿರ ಎಂಬುದು ಸ್ಪಷ್ಟವಾಗಿ ಕಳಿಸಿ ಎಂದರು.
ಜಿಲ್ಲಾ ಪಂಚಾಯತ ಸಾಮಜಿಕ ನ್ಯಾಯ ಸ್ಥಾಯಿ ಸಮಿತಿ ಸದಸ್ಯ ನಹಸಿಂಹರಾಜು ಮಾತನಾಡಿ 536 ರಸ್ತೆ ಚರಂಡಿಯಲ್ಲಿ 212 ಕಾಮಗಾರಿ ಪೂರ್ಣಗೊಂಡಿದೆ ಎನ್ನುತ್ತಿರಾ ಎಂದರೆ ಮಾಹಿತಿ ಕೊಡಿ ಎಂದು ಮುಖ್ಯ ಯೋಜನಾಧಿಕಾರಿ ವಿರುದ್ದ ಕಿಡಿಕಾರಿದರು. ಅಧಿಕಾರಿಗಳ ಬೇಜವಬ್ದಾರಿತನಕ್ಕೆ ಶಿಸ್ತು ಕ್ರಮ ಜರುಗಿಸಬೇಕು ಎಂದು ಸಿಇಒಗೆ ಆಗ್ರಹಿಸಿದರು. ರೈತರಿಗೆ ಸಾಕಷ್ಟು ನಷ್ಟವಾಗಿದೆ. ಕಳೆದ ರೈತರ ಜಮೀನಿನಲ್ಲಿ ಸಾಕಷ್ಟು ಬೆಳೆಗಳು ಕೊಚ್ಚಿ ಹೋಗಿವೆ. ಉದ್ಯೋಗ ಖಾತ್ರಿ ಪಿಡಿಒ ಮತ್ತು ಇಒ ಗಳು ಕೆಲಸದ ಅನುಮೋದನೆ ಮಾಡುತ್ತಿದ್ದರು. ಕಳೆದ ಬಾರಿ ಇದ್ದ ಸಿಇಒ ಎಲ್ಲಾ ಉದ್ಯೋಗ ಖಾತ್ರಿ ಜಿಲ್ಲಾ ಪಂಚಾಯತ ಅನುಮೋದನೆ ಆಗಬೇಕು ಎಂದು ತಿಳಿಸಿ ಸಭೆಯಲ್ಲಿ ಪಾಸ್ ಮಾಡಿದ್ದಾರೆ ಎಂದರು.ಜಿಲ್ಲಾ ಪಂಚಾಯತ ಸಿಇಒ ಯೋಗೇಶ್ ಮಾತನಾಡಿ ಸತತ ಕಳೆದ 3 ವರ್ಷಗಳ ಕಾಲ 60-40 ಬಿಲ್ ಆಗಿರುವುದರಿಂದ ಕೇಂದ್ರ ಸರ್ಕಾರ ಉಳಿಸಿಕೊಂಡಿದೆ. ಕಾನೂನು ಉಲ್ಲಂಘನೆ ಆಗಿರುವುದರಿಂದ ಸರ್ಕಾರ ಹಂತದಲ್ಲಿ ಸ್ಪಷ್ಟವಾಗಿ ಉತ್ತರ ಬರುವವರೆಗೂ ಸಹ ಹಳೆಯ ಬಿಲ್ ಬಗೆಹರಿಸುವುದು ಜಟಿಲ ಎಂದರು. ಜಿಲ್ಲಾ ಪಂಚಾಯತ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು, ಸ್ಥಾಯಿ ಸಮಿತಿಯ ಅಧ್ಯಕ್ಷರು, ಸದಸ್ಯರು, ಜಿಲ್ಲಾ ಪಂಚಾಯತ ಸದಸ್ಯರು, ಜಿಲ್ಲಾ ಮಟ್ಟದ ಅಧಿಕಾರಿಗಳು ,ತಾಲೂಕು ಪಂಚಾಯತ ಇಒ, ಜಿಲ್ಲಾ ಪಂಚಾಯತ ಸಿಬ್ಬಂದಿಗಳು ಹಾಜರಿದ್ದರು.