ಶಿಕ್ಷಕರ ಕಾಯಕ ನಿಷ್ಠೆ ಮೂಲಕ ದೇಶದ ಅಭಿವೃದ್ಧಿ ಸಾಧ್ಯ:ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ
1 min read16 ಕೋಟಿ ಹಣವನ್ನು ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಕೊಠಡಿಗೆ ಹಣ ನೀಡಿದ್ದೇನೆ.
ಚಿತ್ರದುರ್ಗ:ದೇಶ ಅಭಿವೃದ್ಧಿ ಹೊಂದಲು ಎಲ್ಲಾ ಶಿಕ್ಷಕರು ತಮ್ಮ ವೃತ್ತಿಗೆ ನ್ಯಾಯ ಒದಗಿಸುವ ಕೆಲಸ ಮಾಡಿದರೆ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.
ನಗರದ ತರಾಸು ರಂಗಮಂದಿರಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಮತ್ತು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನೋತ್ಸವ ಹಾಗೂ ಜಿಲ್ಲಾ ಮಟ್ಟದ ಅತ್ಯತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿದರು.
ರಾಧಕೃಷ್ಣನ್ ಅವರು ತಮಿಳುನಾಡಿನ ಕುಗ್ರಾಮದಲ್ಲಿ ಜನಿಸಿದರು. ಉನ್ನತ ಮಟ್ಟಕ್ಕೆ ತೆರಳಿದ ಮಹಾನ್ ವ್ಯಕ್ತಿ. ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾಗಿದ್ದವರು ಸರ್ವಪಲ್ಲಿ ಎಂದರು. ಒಂದು ದೇಶ ಸುಸಜ್ಜಿತ ದೇಶವಾಗಲು ಶಿಕ್ಷಕರ ಕೊಡುಗೆ ಬಹು ಮುಖ್ಯ ಎಂದರು. ವೃತ್ತಿ ಕಾಪಡಿಕೊಂಡು ಶಿಕ್ಷಣ ನೀಡಬೇಕು. ದೇಶದ ಅಭಿವೃದ್ಧಿ ಶಿಕ್ಷಕರ ಪಾತ್ರ ಮುಖ್ಯ ಒರತು ಯಾವುದೇ ಸರ್ಕಾರದ ಪ್ರಣಾಳಿಕೆಯಿಂದ ಅಭಿವೃದ್ಧಿ ಆಗಲ್ಲ. ಶಿಕ್ಷಕರಿಗೆ ಸಾಕಷ್ಟು ಸಮಸ್ಯೆಗಳನ್ನು ಸಹ ಎದುರಿಸುತ್ತಿದ್ದಾರೆ. ರಾಜ್ಯದಲ್ಲಿ ವರ್ಗಾವಣೆ ವಿಚಾರದಲ್ಲಿ ಪರ-ವಿರೋಧ ಸಹ ನಡೆಯುತ್ತದೆ. ಕೋವಿಡ್ ನಿಂದ ಮಕ್ಕಳನ್ನು ಶಾಲೆಗೆ ಕಳಿಸಬೇಕ ಅಥವಾ ಬೇಡ ಎಂಬ ಗೊಂದಲದಲ್ಲಿ ಇದ್ದಾರೆ. ಎಲ್ಲಾ ದೇಶದಲ್ಲಿ ಸಹ ಮಕ್ಕಳ ಶಿಕ್ಷಣದ ಮೇಲೆ ಕೋವಿಡ್ ಆವರಿಸಿದೆ. ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಅವರು ಉತ್ತಮ ಕೆಲಸಗಾರರು, ಸರಳತೆ ಮೂಲಕ ಶಿಕ್ಷಣ ಇಲಾಖೆ ಅಭಿವೃದ್ಧಿ ಕಡೆ ಗಮನ ಹರಿಸುತ್ತಿದ್ದಾರೆ. ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಲು ಅವರು ಪ್ರಯತ್ನಸುತ್ತಿದ್ದಾರೆ. ಶಿಕ್ಷಕರು ಮತ್ತು ಶಿಕ್ಷಣ ಸಚಿವರ ಜೊತೆಯಲ್ಲಿ ಸೇತುವೆ ನಿರ್ಮಿಸಿಕೊಂಡು ಇಲಾಖೆಯ ಏಳ್ಗೆ ಅವರ ಧ್ಯೇಯವಾಗಿದೆ ಎಂದು ಅಭಿನಂದನೆ ಸಲ್ಲಿಸಿದರು. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ಕೊಡುವೆ ಕೆಲಸಕ್ಕೆ ಸಚಿವರ ಜೊತೆಗೆ ಮಾತನಾಡಿದ್ದೇನೆ.16 ಕೋಟಿ ರೂ ಶಾಲಾ ಕೊಠಡಿಗೆ ನೀಡಿದ್ದೇನೆ.
ಜಿಲ್ಲಾ ಪಂಚಾಯತ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು ಮಾತನಾಡಿ ಶಿಕ್ಷಕ ವೃತ್ತಿ ಎಂಬುದು ತುಂಬಾ ಶ್ರೇಷ್ಠ ವೃತ್ತಿ ಎಂದರು. ದೇಶ ಮುನ್ನಡೆಸಲು ಉತ್ತಮ ನಾಯಕ ಮತ್ತು ಬುದ್ಧಿಜೀವಿಗಳನ್ನು ತಯಾರು ಮಾಡುವ ಕಾರ್ಖಾನೆ ಇದ್ದಂತೆ. ಶಿಕ್ಷಕರು ಎಲ್ಲಾ ಸಂದರ್ಭದಲ್ಲಿ ಮಕ್ಕಳಿಗೆ ಧೈರ್ಯ ತುಂಬುವ ಶಕ್ತಿ ಶಿಕ್ಷಕರಿಗೆ ಇದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ರವಿಶಂಕರರೆಡ್ಡಿ ಮಾತನಾಡಿ ಒಂದು ಕಲ್ಲಿಗೆ ಏಟು ಕೊಟ್ಟಗಲೆ ಅದು ಮೂರ್ತಿಯಾಗಲು ಸಾಧ್ಯ, ಶಿಕ್ಷಕರಿಂದ ಶಿಕ್ಷೆಗಳನ್ನು ಅನುಭವಿಸಿದರೆ ಮಾತ್ರ ದೊಡ್ಡ ಮಟ್ಟಕ್ಕೆ ಏರಲು ಸಾಧ್ಯ. ದೇಶದಲ್ಲಿ ಎಲ್ಲಾವನ್ನು ಪ್ರಾರಂಭಿಸಲು ಶಿಕ್ಷಕರು ಬೇಕು.ಶಿಕ್ಷಕರು ಸೃಷ್ಠಿಕರ್ತರು ಎಂದರು.
ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ತ್ರಿವೇಣಿ ಶಿವಪ್ರಸಾದ್ ಗೌಡ, ಬಿಇಡಿ ಸಹ ನಿರ್ದೇಶಕ ಮಂಜುನಾಥ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಂಜುನಾಥ್. ತಾಲೂಕು ಪಂಚಾಯತ ಉಪಾಧ್ಯಕ್ಷೆ ಶಾಂತಮ್ಮ ರೇವಣಸಿದ್ದಪ್ಪ ಡಯಟ್ ಪ್ರಾಂಶುಪಾಲರಾದ ಪ್ರಸಾದ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಮಹಂತೇಶ್, ಸಹ ಶಿಕ್ಷಕರ ಸಂಘದ ವೆಂಕಟೇಶ್ ರೆಡ್ಡಿ, ಹನುಮಂತಪ್ಪ ಜಿಲ್ಲೆಯ ಶಿಕ್ಷಕರ ಸಂಘದ ಅಧ್ಯಕ್ಷರು , ಕಾರ್ಯದರ್ಶಿ, ಪದಾಧಿಕಾರಿಗಳು ಇದ್ದರು.