ಆದರ್ಶ ಶಿಕ್ಷಕರಾಗಿದ್ದವರು ಡಾ.ಸರ್ವಪಲ್ಲಿ ರಾಧಾಕೃಷ್ಣನ್
1 min readಹಿರಿಯೂರು :ಸಾರ್ವಜನಿಕ ಇಲಾಖೆ ಹಿರಿಯೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮತ್ತು ತಾಲ್ಲೂಕು ಶಿಕ್ಷಕರ ದಿನಾಚರಣಾ ಸಮಿತಿ ಇವರುಗಳ ಸಂಯುಕ್ತಾಶ್ರಯದಲ್ಲಿ, ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನಾಚರಣೆ ಹಾಗೂ ಶಿಕ್ಷಕರ ದಿನಾಚರಣೆ ಸಮಾರಂಭ ವನ್ನು ನಗರದ ಹೃದಯ ಬಾಗದಲ್ಲಿ ಇರುವ ರೋಟರಿಭವನದಲ್ಲಿ ಸರಳವಾಗಿ ಆಚರಣೆ ಮಾಡಲಾಯಿತು. ಸಮಾರಂಭವನ್ನು ಉದ್ದೇಶಿಸಿ ಪ್ರಾಸ್ತಾವಿಕ ವಾಗಿ ಹೋಸಯಳನಾಡು ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲರಾದ ಚಂದ್ರಯ್ಯ ಮಾತನಾಡಿ, ನಾವು ಎಲ್ಲಾ ಶಿಕ್ಷಕರನ್ನು ಸ್ಮರಣೆ ಮಾಡಿಕೊಳ್ಳಬೇಕು ಹಿಂದೆ ಗುರು ಶಿಷ್ಯರ ಸಂಬಂಧ ಉತ್ತಮವಾಗಿತ್ತು, ಶಿಕ್ಷಕರಿಗೆ ಶಿಸ್ತು, ಕರ್ತವ್ಯ, ಬದ್ಧತೆ ಇರಬೇಕು ಎಂದು ತಿಳಿಸಿದರು. ಜಿಲ್ಲಾಪಂಚಾಯಿತಿ ಸದಸ್ಯರಾದ ಆರ್. ನಾಗೇಂದ್ರನಾಯ್ಕ ಮಾತನಾಡಿ ಶಿಕ್ಷಕರಿಗೆ ಮೂಲಭೂತ ಸೌಲಭ್ಯಗಳನ್ನು ನಿಡಿದರೆ ಅವರು ಇನ್ನೂ ಉತ್ತಮವಾಗಿ ಕೆಲಸ ಮಾಡುತ್ತಾರೆ ಇದೆ ವಿಚಾರಕ್ಕೆಸರ್ಕಾರಕ್ಕೆ ಪತ್ರ ಬರೆದರೆ ಯಾವುದೇ ಉತ್ತರ ಬರುವುದಿಲ್ಲ. ಮೂಲಭೂತ ಸೌಲಭ್ಯಗಳನ್ನು ನೀಡುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಸರ್ಕಾರದ ವಿರುದ್ಧ ಕಿಡಿ ಕಾರಿದರು. ಸಭೆಯಲ್ಲಿ ಕೆ. ಪೂರ್ಣಿಮ ಶ್ರೀನಿವಾಸ್ ಅವರರು ಶಿಕ್ಷರ ದಿನಾಚರಣೆಯ ಪ್ರಯುಕ್ತ ಅವರ ಆರೋಗ್ಯ ಸರಿಯಿಲ್ಲದ ಕಾರಣ ಅವರು ಧ್ವನಿ ಸಂದೇಶವನ್ನು ಅವರ ಆಪ್ತ ಸಹಾಯಕ ನಿಂರಜನ್ ತಿಳಿಸಿದರು. ಧ್ವನಿ ಸಂದೇಶವನ್ನು ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಸದಸ್ಯರಾದ ವೈ. ಎ. ನಾರಾಯಣಸ್ವಾಮಿ ರವರ ಧ್ವನಿ ಸಂದೇಶ, ಜಿಲ್ಲಾಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಶಶಿಕಲಾ ಸುರೇಶ್ ಬಾಬು ,ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶ್ರೀಮತಿ .ತ್ರಿವೇಣಿ ಶಿವಪ್ರಸಾದ್ ಗೌಡ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಧ್ವನಿ ಸಂದೇಶವನ್ನು ಕಳುಹಿಸಿದ್ದಾರೆ ಎಂದು ಸಭೆಯಲ್ಲಿ ಇ. ಸಿ. ಒ ಶಶಿಧರ್ ತಿಳಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಲಕ್ಷ್ಮೀದೇವಿ ವಹಿಸಿದ್ದರು. ತಾಲ್ಲೂಕು ಪಂಚಾಯತ್ ಉಪಾಧ್ಯಕ್ಷರಾದ ಪುಷ್ಪಾ ರಂಗನಾಥ್, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಮುಕುಂದ, ತಹಶೀಲ್ದಾರ್ ರಾದ ಜಿ. ಹೆಚ್. ಸತ್ಯನಾರಾಯಣ. ಇ ಒ ಹನುಮಂತಪ್ಪ ಸಮಾಜಕಲ್ಯಾಣ ಇಲಾಖೆಯ ಸಹಾಯ ನಿರ್ದೇಶಕರಾದ ಕೃಷ್ಣಮೂರ್ತಿ. ಸ್ವಾಗತವನ್ನು ಪಿ. ರಾಮಯ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೋರಿದರು ನಿರೂಪಣೆ ಶಶಿಧರ್ ಮಾಡಿದರು, ವಂದನಾರ್ಪಣೆಯನ್ನು ಇ. ಸಿ. ಓ. ಗಿರೀಶ್ ನೆರವೇರಿಸಿದರು ಶಿಕ್ಷಕರ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಬಾಗವಹಿಸಿದ್ದರು.