Recent Posts

October 17, 2021

Chitradurga hoysala

Kannada news portal

ಭದ್ರಾ ದಿಂದ ವಿವಿ ಸಾಗರಕ್ಕೆ ನೀರು, ರೈತರಿಂದ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ರವರಿಗೆ ಅಭಿನಂದನೆ.

1 min read

ಹಿರಿಯೂರು ತಾಲೂಕಿನ ಆರನಕಟ್ಟೆ ಹಾಗೂ ಲಕ್ಷ್ಮಿಪುರ ಗ್ರಾಮದಲ್ಲಿ ಭದ್ರಾ ಮೇಲ್ದಂಡೆ ಮೂಲಕ ವಿವಿ ಸಾಗರ ಜಲಾಶಯಕ್ಕೆ ನೀರು ಹರಿಸಿರುವುದಕ್ಕೆ ರೈತ ಮುಖಂಡರನ್ನು ಸನ್ಮಾನಿಸಿ ರೈತರು ಸಿಹಿ ಹಂಚಿ ಹರ್ಷ ವ್ಯಕ್ತಪಡಿಸಿದ್ದಾರೆ.

ರೈತ ಮುಖಂಡರನ್ನು ಸನ್ಮಾನಿಸಿ ಮಾತನಾಡಿದ ವಿವಿ ಸಾಗರ ಹೋರಾಟ ಸಮಿತಿ ಅಧ್ಯಕ್ಷರಾದ ಕಸವನಹಳ್ಳಿ ರಮೇಶ್ ರವರು
ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯನ್ನು ಶೀಘ್ರ ಮುಗಿಸುವಂತೆ ರೈತ ಹೋರಾಟಗಾರರೊಂದಿಗೆ ಶಾಸಕರಾದ ಮೊದಲ ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆದು ಕಾಮಗಾರಿ ಶೀಘ್ರ ಮುಗಿಸುವಂತೆ ಒತ್ತಡ ಹೇರಿದರು. ಹಾಗೂ ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ ಎಸ್ ಯಡಿಯೂರಪ್ಪ ರವರನ್ನು ಹಿರಿಯೂರು ತಾಲೂಕು ರೈತರ ನಿಯೋಗದೊಂದಿಗೆ ಭೇಟಿ ಮಾಡಿಸಿ ಕಾಮಗಾರಿಯ ಪ್ರಗತಿಯ ಬಗ್ಗೆ ಮನವರಿಕೆ ಮಾಡಿಕೊಟ್ಟು ಅಧಿಕಾರಿಗಳಿಗೆ ಬೇಗ ಮುಗಿಸುವಂತೆ ಸೂಚನೆ ನೀಡಿದರು. ಹಾಗೂ ಮೂರು ತಿಂಗಳ ವರೆಗೆ ಹೆಚ್ಚುವರಿ ನೀರು ಹರಿಸುವಂತೆ ಮುಖ್ಯಮಂತ್ರಿಗಳಿಂದ ಆದೇಶ ಮಾಡಿಸಿದರು. ಹತ್ತಾರುಬಾರಿ ವಿಶ್ವೇಶ್ವರಯ್ಯ ಜಲ ನಿಗಮದ ಎಂ ಡಿ ರವರನ್ನು ಶಾಸಕರು ಭೇಟಿ ಮಾಡಿಸಿ ಕಾಮಗಾರಿಯ ಸ್ಥಳಕ್ಕೂ ಭೇಟಿ ಮಾಡಿಸಿ ಕಾಮಗಾರಿಯ ಪ್ರಗತಿಯ ಬಗ್ಗೆ ಚುರುಕು ಮುಟ್ಟಿಸಿ ಇಂದು ವಿ ವಿ ಸಾಗರಕ್ಕೆ ನೀರು ಬರುವಂತಾಗಿದೆ. ವಾಣಿವಿಲಾಸ ಸಾಗರದಲ್ಲಿ ನೀರು ಬಂದರೆ ಶಾಶ್ವತವಾಗಿ ನಮ್ಮ ತಾಲೂಕು ಸಮೃದ್ಧಿಯಾಗುತ್ತದೆ. ಅವರು ಮುಂದಿನ ದಿನಗಳಲ್ಲಿ ಧರ್ಮಪುರ ಭಾಗಕ್ಕೆ ನೀರು ಹರಿಸಲು ಪ್ರಯತ್ನದಲ್ಲಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ರೈತರ ಹೋರಾಟಗಳಲ್ಲಿ ಭಾಗಿಯಾಗಿದ್ದ ಹಿರಿಯ ಹೋರಾಟಗಾರರಾದ ಶ್ರೀ ಮಹಾಲಿಂಗಪ್ಪ, ಕಸವನಹಳ್ಳಿ ರಮೇಶ್ ಬಸವರಾಜು ವೆಂಕಟೇಶ್ ತಿಮ್ಮಣ್ಣ ರವೀಂದ್ರನಾಥ್ ಪಿಟ್ಲಾಲಿ ಶ್ರೀನಿವಾಸ್ ಕೃಷ್ಣಮೂರ್ತಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ತಿಪ್ಪೇಸ್ವಾಮಿ ಮುತ್ತಣ್ಣ ದ್ಯಾಮಣ್ಣ ಸ್ವಾಮಿನಾಥನ್ ಜಗದೀಶ್ ವಿಶ್ವನಾಥ ರಘು ರಂಗಸ್ವಾಮಿ ಸತೀಶ್ ಮೋಹನ್ ಗೌಡ ಮಂಜುನಾಥ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You may have missed