ಲಾರಿ ಚಾಲಕನಿಗೆ ಹಿಗ್ಗಾಮುಗ್ಗ ಥಳಿಸಿದರು ಏಕೆ ಗೊತ್ತ?
1 min readಗದಗ: ಚಾಲಕನ ಅಜಾಗರೂಕತೆಯಿಂದ ಟ್ಯಾಂಕರ್ ವಾಹನ ಡಿಕ್ಕಿ ಹೊಡೆದು ೨೦ ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ.
೧೦ಕ್ಕೂ ಹೆಚ್ಚು ಕುರಿಗಳಿಗೆ ಗಾಯವಾಗಿರುವ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಹೊಸಡಂಬಳ ಹಾಗೂ ಕದಂಪುರ ಮಧ್ಯೆ ನಡೆದಿದೆ.
ಬೆಳಗಾವಿ ಜಿಲ್ಲೆ ಚಿಕ್ಕೊಡಿ ತಾಲೂಕಿನ ಹನುಮಂತ ಪೂಜಾರ ಎಂಬ ಮಾಲಿಕನಿಗೆ ಸೇರಿದ ಕುರಿಗಳು ಸಾವನ್ನಪ್ಪಿವೆ.
ರಾತ್ರಿವೇಳೆ ಕುರಿಗಳು ರಸ್ತೆ ದಾಟುವ ವೇಳೆ ಗದಗ ನಿಂದ ಮುಂಡರಗಿ ಕಡೆಗೆ ವೇಗವಾಗಿ ಹೊರಟಿದ್ದ ಟ್ಯಾಂಕರ್ ವಾಹನದಿಂದ ಕುರಿಗಳ ಮಾರಣಹೋಮ ದುರ್ಘಟನೆ ನಡೆದಿದೆ.
ವಾಹನ ಚಕ್ರದಡಿ ಸಿಲುಕಿದ್ದ ಅನೇಕ ಕುರಿಗಳು ರಕ್ತಸಿಕ್ತವಾಗಿವೆ. ಘಟನೆ ಬಳಿಕ ಚಾಲಕ ಪರಾರಿ ಆಗುತ್ತಿದ್ದ.
ಆಗ ಸ್ಥಳದಲ್ಲಿ ಸೇರಿದ್ದ ರೈತರು, ಸಾರ್ವಜನಿಕರು, ಸ್ಥಳಿಯರು ಚಾಲಕನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ಕುರಿತು ಗದಗ ಜಿಲ್ಲೆಯ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.