ಕೋವಿಡ್ ರಿಲೀಫ್ ನಂತರ ರಾಜಧಾನಿ ಕಡೆಗೆ ಕೂಲಿ ಕಾರ್ಮಿಕರು.
1 min readವಿಶೇಷ ವರದಿ:ರಾಜ್ಯದಲ್ಲಿ ಕೋವಿಡ್ ಲಾಕ್ ಡೌನ್ ತೆರವಾದ ಹಿನ್ನಲೆಯಲ್ಲಿ ಉತ್ತರ ಕರ್ನಾಟಕದ ಕೂಲಿ ಕಾರ್ಮಿಕ ಮಂದಿ ಜೀವನ ಕಟ್ಟಿಕೊಳ್ಳಲು ರಾಜಧಾನಿಗೆ ಪ್ರಯಾಣ ಬೆಳೆಸಿದ ದೃಶ್ಯಗಳು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕಂಡು ಬಂದವು.
ಕಳೆದ ಆರು ತಿಂಗಳಿನಿಂದ ತಮ್ಮ ತಮ್ಮ ಊರುಗಳಲ್ಲಿ ಕೆಲಸ ವಿಲ್ಲದೆ ದಿನನಿತ್ಯದ ವಸ್ತುಗಳಿಗೆ ಪರದಾಡಿದ ಕೂಲಿ ಕಾರ್ಮಿಕರು ಮತ್ತೆ ಬೆಂಗಳೂರಿನತ್ತ ಪಯಣ ಆರಂಭಿಸಿದ್ದಾರೆ .
ಇಂದು ಸುಮಾರು ನೂರಾರು ಟೆಂಪೋ ಟ್ಯಾಕ್ಸಿ ಗಳಲ್ಲಿ ಹೊಟ್ಟೆ ಪಾಡಿಗಾಗಿ ತಮ್ಮ ಕುಟುಂಬ ಸಮೇತರಾಗಿ ಜೀವನ ಕಟ್ಟಿಕೊಳ್ಳಲು ಬೆಂಗಳೂರಿ ಕಡೆಗೆ ವಲಸೆ ಕೂಲಿಕಾರ್ಮಿಕರು ಪ್ರಯಾಣ ಬೆಳಸಿದರು. ಒಂದೊಂದು ಟ್ರ್ಯಾಕ್ಸ್ ನಲ್ಲಿ ಸುಮಾರು 30ರಿಂದ 35ಜನರು ಪ್ರಯಾಣ ದೃಶ್ಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಂಡುಬಂತು.