ಪೋಲಿಸ್ ಭರ್ಜರಿ ಬೇಟೆಗೆ ಅಂಜಲಿ ಕೊಲೆಯ ಅರೋಪಿ ಅಂದರ್ .
1 min readಪೊಲೀಸರ ಮಿಂಚಿನ ಕಾರ್ಯಾಚರಣೆಯಿಂದಾಗಿ ಅಂಜಲಿ (27) ಎನ್ನುವ ತೃತೀಯ ಲಿಂಗಿ ಕೊಲೆ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆ ಆರೋಪಿ ಆಟೋ ಚಾಲಕ ಚಿತ್ರದುರ್ಗ ತಾಲೂಕಿನ ಮುತ್ತಯ್ಯನಹಟ್ಟಿ ಗ್ರಾಮದ ಮಧುಸೂದನ (24) ಎಂದು ಗುರುತಿಸಲಾಗಿದ್ದು ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಕಳೆದ ಆಗಸ್ಟ್-28 ರಂದು ಮಧ್ಯಾಹ್ನದ ನಂತರ ಅಂಜಲಿಯೊಂದಿಗೆ ಆರೋಪಿ ಮಧುಸೂದನ್ ಲೈಂಗಿಕ ಕ್ರಿಯೆ ನಡೆಸಿದ್ದು ಈ ದೃಶ್ಯವನ್ನು ಅಂಜಲಿ ತನ್ನ ಮೊಬೈಲ್ ನಲ್ಲಿ ಸೆರೆ ಹಿಡಿದು ಹೆಚ್ಚಿನ ಹಣಕ್ಕಾಗಿ ಪೀಡಿಸಿದ್ದರಿಂದಾಗಿ ಆಕೆಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ ಕೃತ್ಯವನ್ನು ಆರೋಪಿ ಪೊಲೀಸರಲ್ಲಿ ಒಪ್ಪಿಕೊಂಡಿದ್ದಾನೆ.
ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಜಿ.ರಾಧಿಕ ಗ್ರಾಮಾಂತರ ಪೊಲೀಸ್ ಸಿಬ್ಬಂದಿಗಳಿಗೆ ಶ್ಲಾಘಿಸಿ ಬಹುಮಾನ ಘೋಷಣೆ ಮಾಡಿದ್ದಾರೆ.