ತುಪ್ಪದ ಹುಡುಗಿ ರಾಗಿಣಿಯ ರುಬ್ಬುತ್ತಿರುವ ಖಡಕ್ ಮಹಿಳಾ ಅಧಿಕಾರಿ ಯಾರು ಗೊತ್ತಾ ?
1 min read
ವಿಶೇಷ: ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ಪ್ರಸ್ತುತು ಸ್ಯಾಂಡಲ್ ವುಡ್ ಮಾತ್ರವೇ ಅಲ್ಲದೇ ಇಡೀ ರಾಜ್ಯದ ಜನತೆಯನ್ನು ಬೆಚ್ಚಿ ಬೀಳಿಸಿರುವ ಸುದ್ದಿ. ಈ ಸುದ್ದಿಯ ಪ್ರಭಾವ ಹೇಗಿದೆಯೆಂದರೆ ಕೋವಿಡ್ ಬಗ್ಗೆ ಕಂಗೆಟ್ಟಿದ ಜನರು ಹಾಗೂ ಮಾಧ್ಯಮಗಳು ಅದನ್ನೇ ಮರೆತು ಈಗ ಈ ವಿಚಾರದ ಕಡೆಗೆ ಗಮನ ನೀಡುವಂತೆ ಆಗಿದೆ. ಈ ಪ್ರಕರಣದಲ್ಲಿ ಸ್ಯಾಂಡಲ್ ವುಡ್ ನಲ್ಲಿ ತುಪ್ಪದ ಬೆಡಗಿ ಎಂದೇ ಖ್ಯಾತಿ ಪಡೆದು ಜನರ ಮೆಚ್ಚುಗೆ ಗಳಿಸಿದ್ದ ನಟಿ ರಾಗಿಣಿ ದ್ವಿವೇದಿಯನ್ನು ಈಗಾಗಲೇ ವಶಕ್ಕೆ ಪಡೆದು ಆಕೆಯನ್ನು ವಿಚಾರಣೆ ನಡೆಸಿ, ಆಕೆ ಡ್ರ ಗ್ಸ್ ಸೇವನೆ ಮಾಡಿರುವುದಾಗಿ ಒಪ್ಪಿಕೊಂಡ ವಿಚಾರ ಕೂಡಾ ಈಗಾಗಲೇ ದೊಡ್ಡ ಸುದ್ದಿಯಾಗಿದೆ. ನಟಿ ರಾಗಿಣಿ ಅವರ ವಿಚಾರಣೆ ನಡೆಸುತ್ತಿರುವ ತಂಡದ ನೇತೃತ್ವ ವಹಿಸಿರುವುದು ಉತ್ತರ ಕನ್ನಡ ಜಿಲ್ಲೆಯ ಮಹಿಳಾ ಅಧಿಕಾರಿಯಾಗಿದ್ದಾರೆ.
ರಾಗಿಣಿ ಅವರ ವಿಚಾರದಲ್ಲಿ ತನಿಖೆಯನ್ನು ನಡೆಸುತ್ತಿರುವ ತನಿಖಾ ತಂಡ ನೇತೃತ್ವವನ್ನು ವಹಿಸಿರುವ ಈ ಮಹಿಳಾ ಅಧಿಕಾರಿಯ ಹೆಸರು ಅಂಜುಮಾಲಾ ನಾಯಕ. ಇವರು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನವರಾಗಿದ್ದು, ಇಲ್ಲಿನ ಶಿರಗುಂಜಿಯ ನಿವೃತ್ತ ಶಿಕ್ಷಕರಾದ ತಿಮ್ಮಣ್ಣ ನಾಯಕ ಹಾಗೂ ಶಾಂತಿ ನಾಯಕ ದಂಪತಿಯ ಮಗಳಾಗಿದ್ದಾರೆ ಅಂಜುಮಾಲಾ ನಾಯಕ ಅವರು. ಇವರು 2000 ರಲ್ಲಿ ಜಿಲ್ಲೆಯ ಮೊದಲ ಐಪಿಎಸ್ ಆಗಿ ಪೋಲಿಸ್ ಇಲಾಖೆ ಪ್ರವೇಶ ಮಾಡಿದ್ದಾರೆ ಎಂಬುದು ಕೂಡಾ ಒಂದು ವಿಶೇಷ ಹಾಗೂ ಹೆಗ್ಗಳಿಕೆಯಾಗಿದೆ.
ಖಡಕ್ ಅಧಿಕಾರಿಯಾಗಿ, ಶಿಸ್ತಿನಿಂದ ಕರ್ತವ್ಯ ನಿರ್ವಹಣೆ ಮಾಡುವ ಇವರು ಜನಸ್ನೇಹಿ ಅಧಿಕಾರಿಯಾಗಿ ಹೆಸರನ್ನು ಪಡೆದಿದ್ದಾರೆ. ಸ್ಯಾಂಡಲ್ ವುಡ್ ನ ಡ್ರ ಗ್ ಮಾ ಫಿ ಯಾ ವಿಚಾರವನ್ನು ಸಿಸಿಬಿ ತನ್ನ ಕೈಗೆತ್ತಿಕೊಂಡಾಗ ತನಿಖೆಗೆ ಮೊದಲು ಸೂಚಿಸದ ಹೆಸರೇ ಅಂಜುಮಾಲಾ ನಾಯಕ ಅವರದ್ದು ಎನ್ನಲಾಗಿದೆ. ಅವರ ವೃತ್ತಿಪರತೆಯಿಂದಾಗಿ ಅವರಿಗೆ ಈಗಾಗಲೇ ಮುಖ್ಯಮಂತ್ರಿ ಬಂಗಾರದ ಪದಕ ದೊರೆತಿದೆ ಅಲ್ಲದೇ ಈಗಾಗಲೇ ನಾಡಿನ ಹೆಮ್ಮೆಯ ಕೆಂಪೇಗೌಡ ಪ್ರಶಸ್ತಿ ಕೂಡಾ ಇವರಿಗೆ ಒಲಿದು ಬಂದಿದೆ. ಇವರ ಸಹೋದರ ಡಾ.ಸಂಜು ನಾಯಕ ವೈದ್ಯರಾಗಿದ್ದಾರೆ. ಅಂಜುಮಾಲಾ ನಾಯಕ ಅಂತಹ ದಕ್ಷ ಅಧಿಕಾರಿಗಳು ನಾಡಿನ ಮಹಿಳೆಯರಿಗೆ ಮತ್ತು ಎಲ್ಲರಿಗೂ ಕೂಡಾ ಸ್ಪೂರ್ತಿಯಾಗಲಿ ಎಂದು ಹಾರೈಸೋಣ.