ಶೋಷಣಾ ಮುಕ್ತ ಸಮಾಜದ ನಿರ್ಮಾಣ ಸಾಕ್ಷರತೆಯಿಂದ ಮಾತ್ರ ಸಾಧ್ಯ-ಭುವನಾ ಕರುಣ್.
1 min read ಚಿತ್ರದುರ್ಗ:ಪ್ರತಿಯೊಬ್ಬರೂ ಸಾಕ್ಷರರಾದಾಗ ಮಾತ್ರ ಮುಕ್ತ ಶೋಷಣಾ ಮುಕ್ತ ಸಮಾಜವಾಗುತ್ತದೆ. ಶೇಕಡಾ 100ರಷ್ಟು ಸಾಕ್ಷರತೆ ಸಾಧಿಸಿರುವ ಉತ್ತರ ಕೊರಿಯಾ ಮೊದಲ ಸ್ಥಾನದಲ್ಲಿದೆ. ಭಾರತವು ಸಾಕ್ಷರತೆಯಲ್ಲಿ ಮೊಚೂಣಿಗೆ ತರಲು ಹಾಗೂ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸು ನನಸಾಗಲು ಗ್ರಾಮೀಣ ಭಾಗದ ಜನರು ಅಕ್ಷರಸ್ಥರಾಗಬೇಕು ಎಂದು ರೋಟರಿ ವಿಂಡ್ ಮಿಲ್ ಸಿಟಿ ಕ್ಲಬ್ ಅದ್ಯಕ್ಷರಾದ ಶ್ರೀಮತಿ ಭುವನಾ ಕರುಣ್ ಹೇಳಿದರು.
ರೋಟರಿ ವಿಂಡ್ ಮಿಲ್ ಸಿಟಿ ಕ್ಲಬ್ ಹಾಗೂ ಕಡ್ಲೇಗುದ್ದು ಶ್ರೀ ಆಂಜನೇಯಸ್ವಾಮಿ ಪ್ರೌಢಶಾಲೆ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ವಿಶ್ವ ಸಾಕ್ಷರತಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ,ಭೂಮಿಗೆ ಬಿದ್ದ ಬೀಜ,ಎದೆಗೆ ಬಿದ್ದ ಅಕ್ಷರ ಎಂದೂ ವ್ಯರ್ಥವಾಗುವುದಿಲ್ಲ ನಾವೆಲ್ಲರೂ ಜೊತೆಗೂಡಿ ಸಾಕ್ಷರತೆ ಪ್ರಮಾಣ ಹೆಚಿಸೋಣ ಎಂದು ಹೇಳಿದರು.
ರೋಟರಿ ವಿಂಡ್ ಮಿಲ್ ಸಿಟಿ ಕ್ಲಬ್ ಕೌನ್ಸಿಲರ್ ವೀರೇಶ್ ರವರು ಮಾತನಾಡಿ ಕೇರಳದ ಮಾದರಿಯಂತೆ ಪ್ರತಿಯೊಬ್ಬರೂ ಅಕ್ಷರಸ್ಥರಾಗಬೇಕು ವಿದ್ಯಾವಂತ ಸಮುದಾಯ ಈ ಕಾರ್ಯದಲ್ಲಿ ತೊಡಗಬೇಕು ಎಂದು ಹೇಳಿದರು.
ಅದ್ಯಕ್ಷತೆ ವಹಿಸಿದ್ದ ಕಡ್ಲೇಗುದ್ದು ಶ್ರೀ ಆಂಜನೇಯಸ್ವಾಮಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಮಹೇಶ್ ರವರು ಸೆಪ್ಟೆಂಬರ್ 8 ಅನ್ನು ವಿಶ್ವದಾದ್ಯಂತ ಸಾಕ್ಷರತಾ ದಿನವಾಗಿ ಆಚರಿಸಲಾಗುತ್ತಿದೆ ಶಿಕ್ಷಣದ ಮಹತ್ವ ಸಾರುವ ಈ ದಿನ ಕಲಿಕೆಯಲ್ಲಿ ನಾವು ಯಾವ ಹಂತದಲ್ಲಿದ್ದೇವೆ ಎನ್ನುವುದನ್ನು ತಿಳಿಸುತ್ತದೆ. ಭಾರತದಲ್ಲಿ ಸಾಕ್ಷರತೆಯ ಪ್ರಮಾಣ ಶೇ.75 ರಷ್ಟಿದ್ದು ಎಲ್ಲರಿಗೂ ಶಿಕ್ಷಣ ನೀಡುವುದರ ಮೂಲಕ ಭಾರತವನ್ನು ಸಾಕ್ಷರ ದೇಶವಾಗಿಸುವುತ್ತ ದಾಪುಗಾಲಿಡಲು ನಾವೆಲ್ಲರೂ ಪಣತೊಡಬೇಕಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗಾಗಿ ಭಾಷಣಾ ಸ್ಪರ್ದೆ ಹಾಗೂ ರಸಪ್ರಶ್ನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ರೋಟರಿ ವಿಂಡ್ ಮಿಲ್ ಸಿಟಿ ಕ್ಲಬ್ ವತಿಯಿಂದ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಪೆನ್ ವಿತರಿಸಲಾಯಿತು. ಕಾರ್ಯಕ್ರಮದ ನಂತರ ಗ್ರಾಮದಲ್ಲಿ ಜಾಥಾ ತೆರಳಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು’
ಕಾರ್ಯಕ್ರಮದಲ್ಲಿ ಕ್ಲಬ್‍ನ ಕೌನ್ಸಿಲರ್ ವೀರಭದ್ರಸ್ವಾಮಿ ಶಿಕ್ಷಕರಾದ ಉಷಾ ಮೇಡಂ,ಚನ್ನಕೇಶವ, ಸುಜಾತ ಸುಮಾ ನಾಗೇಂದ್ರಪ್ಪ, ಮಂಜುನಾಥ,ಚಿತ್ರಲಿಂಗಪ್ಪ,ನಾಗರಾಜ,ನಟರಾಜ,ಕರಿಬಸಪ್ಪ,ಮಂಜಪ್ಪ ಮುಂತಾಧವರು ಭಾಗವಹಿಸಿದ್ದರು.
