ಶ್ರೀರಾಮುಲುಗೆ ಸಮಾಜ ಕಲ್ಯಾಣ ಅಥವಾ ಡಿಸಿಎಂ ಮಾಡಿ ವಾಲ್ಮೀಕಿ ಜನಾಂಗಕ್ಕೆ ನ್ಯಾಯ ಕೊಡತ್ತಾರ ಸಿಎಂ?
1 min readಶ್ರೀರಾಮುಲು ಒಬ್ಬ ವ್ಯಕ್ತಿಯಲ್ಲ ಒಂದು ಶಕ್ತಿ.
ಸೋತವರಿಗೆ ಡಿಸಿಎಂ ನೀಡಿದ್ದಕ್ಕೆ ಅಕ್ರೋಶ.
ಚಿತ್ರದುರ್ಗ: ರಾಜ್ಯ ರಾಜಕಾರಣದಲ್ಲಿ ಶ್ರೀರಾಮುಲು ಎಂಬ ಹೆಸರು ಕೇಳಿದರೆ ಜನರಲ್ಲಿ ರೋಮಾಂಚನ, ಸರಳ ಸಜ್ಜನಿಕೆಯ ವ್ಯಕ್ತಿತ್ವ , ಉನ್ನತವಾದ ಹುದ್ದೆಗಳು ಒತ್ತರು ಎಂದು ಬೀಗದೆ, ನ್ಯಾಯದ ಪರ ಹೋರಟದ ಮೂಲಕ ರಾಜ್ಯದ ಗಮನ ಸೆಳೆದು ಸದಾ ಜನರ ಏಳ್ಗೆ ಬಯಸುವ ಜನನಾಯಕ, ಬಿಜೆಪಿ ಪಕ್ಷದ ಕಟ್ಟಾಳು ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರನ್ನು ಡಿಸಿಎಂ ಮಾಡಬೇಕು ಎಂಬ ಕೂಗು ಜೋರಾಗಿ ಕೇಳಿ ಬರುತ್ತಿದೆ.
ಹೌದು ಕೇಂದ್ರದ ಚುನಾವಣಾ ಚಾಣಕ್ಯ ಅಮಿತ್ ಷಾ ಅವರ ಲೆಕ್ಕಚಾರದ ಮೇಲೆ ಬಳ್ಳಾರಿ ಗ್ರಾಮಂತರ ಕ್ಷೇತ್ರದಿಂದ ಮೊಳಕಾಲ್ಮುರು ಕ್ಷೇತ್ರಕ್ಕೆ ಶ್ರೀರಾಮುಲು ಪಾದಾರ್ಪಣೆ ಮಾಡಿ ಚಿತ್ರದುರ್ಗ ಜಿಲ್ಲೆಯಲ್ಲಿ ಸಂಚಲನ ಮೂಡಿಸಿ ಮೊಳಕಾಲ್ಮುರು ವಿಧಾನ ಸಭಾ ಕ್ಷೇತ್ರದ ಕಣ ರಂಗೇರಿಸಿ ಜೊತೆಗೆ ರಾಜ್ಯದ ಗಮನ ಸೆಳೆದು ಗೆದ್ದು ಅಧಿಕಾರವಿಲ್ಲದೆ ರಾಜ್ಯ ಸರ್ಕಾರದ ತಪ್ಪುಗಳ ವಿರುದ್ಧ ಸಮರ ಸಾರಿ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರ ತದನಂತರ ಬಂದ ಬಿಜೆಪಿ ಸರ್ಕಾರದಲ್ಲಿ ಆರೋಗ್ಯ ಖಾತೆ ಪಡೆದು ಸಚಿವರಾದ ರಾಮುಲು ಮೊಳಕಾಲ್ಮುರು ಕ್ಷೇತ್ರದ ಅಭಿವೃದ್ಧಿ ಮರೆಯಲಿಲ್ಲ. ಆದರೆ ಜನರು ಮಾತ್ರ ಅಭಿವೃದ್ಧಿ ಜೊತೆಗೆ ರಾಮುಲು ಡಿಸಿಎಂ ಆಗಬೇಕು. ಸರ್ಕಾರ ಒಂದು ವರ್ಷ ಪೂರೈಸುತ್ತಿದ್ದು ಸ್ವಲ್ಪ ಬದಲಾವಣೆಯಾಗಿ ಡಿಸಿಎಂ ನೀಡಬಹುದು ಎಂದು ಎದುರು ನೋಡುತ್ತಿದ್ದಾರೆ.
ಪ್ರಬಲ ಸಮಾಜ ಕಲ್ಯಾಣ ಇಲಾಖೆಗೆ ರಾಮುಲುಗೆ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಮುಲು ಡಿಸಿಎಂ ಆಗುವ ಕನಸಿತ್ತು ಆದರೆ ಆರೋಗ್ಯ ಖಾತೆ ನೀಡಿದರು ರಾಮುಲು ಅಭಿಮಾನಿಗಳು ಮತ್ತು ನಾಯಕ ಜನಾಂಗದವರು ನಾಯಕ ಜನಾಂಗಕ್ಕೆ ಸಮಾಜ ಕಲ್ಯಾಣ ಇಲಾಖೆ ಖಾತೆ ನೀಡಬೇಕ. ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಗೋವಿಂದ ಕಾರಜೋಳ ಬಳಿ ಪ್ರಬಲವಾದ ಖಾತೆಗಳಾ ಸಮಾಜ ಕಲ್ಯಾಣ ಮತ್ತು ಲೋಕೋಪಯೋಗಿ ಖಾತೆ ಇದೆ.ಹಾಗೂ ಒಮ್ಮೆಯಾದರು ಸಹ ರಾಮುಲು ಅವರಿಗೆ ಪ್ರಬಲ ಖಾತೆ ನೀಡಿಲ್ಲ ಎಂಬ ಕೊರಗು ಜನಾಂಗಕ್ಕೆ ಇದೆ. ಒಂದು ಖಾತೆ ಅವರ ಬಳಿ ಬಿಟ್ಟು ಗೋವಿಂದ ಕಾರಜೋಳಗೆ ಬೇಕಾದರೆ ಆರೋಗ್ಯ ನೀಡಿ ಸಮಾಜ ಕಲ್ಯಾಣ ಇಲಾಖೆ ರಾಮುಲುಗೆ ನೀಡಲಿ ಎಂಬ ಕೂಗು ಜೋರಾಗುತ್ತಿದೆ. ಒಂದು ವಾರದಲ್ಲಿ ಸಂಪುರ ಸೇರ್ಪಡೆ ಜೊತೆಗೆ ಖಾತೆ ಬದಲಾವಣೆ ಆಗಬಹುದು ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.
ರಾಜ್ಯದ ನಾಯಕ ಜನಾಂಗದ ಪ್ರಭಾವಿ: ಶ್ರೀರಾಮುಲು ಇದ್ದರೆ ಸಾಕು ಜನ ಜಾತ್ರೆ. ನಾಯಕ ಜನಾಂಗದ ರತ್ನವಾಗಿ ರಾಜ್ಯದ ರಾಜಕಾರಣದಲ್ಲಿ
ಪ್ರಜ್ವಲಿಸುತ್ತಿರುವ ರಾಮುಲು ರಾಜ್ಯದ ನಾಯಕ ಜನಾಂಗಕ್ಕೆ ಅಚ್ಚುಮೆಚ್ಚು. ಜನಾಂಗದ ಓಟ್ ಬ್ಯಾಂಕ್ ಹಿಡಿಯಾಗಿ ಬಿಜೆಪಿ ಕಡೆ ತಂದು ನಿರ್ಣಾಯಕ ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ವಾಲ್ಮೀಕಿ ಜನಾಂಗಕ್ಕೆ ಒಂದು ಆಸ್ತಿಯಾಗಿದ್ದಾರೆ. ಜನಾಂಗದ ಪರವಾಗಿ ನಿಲ್ಲುವ ಗುಣ ಇವರ ಬಗ್ಗೆ ಪ್ರೀತಿಯನ್ನು ದುಪ್ಪಟ್ಟು ಮಾಡುವಂತೆ ಮಾಡಿತು. 7.5 ಮೀಸಲಾತಿ ವಿಚಾರದಲ್ಲಿ ನಿರಂತರ ಹೋರಟ ಮೂಲಕ ಚುರುಕು ಮುಟ್ಟಿಸಿ ನಾಗಮೋಹನ್ ದಾಸ್ ವರದಿ ಮುಖ್ಯಮಂತ್ರಿ ಯಡಿಯೂರಪ್ಪ ಕೈ ಸೇರಿಸುವಲ್ಲಿ ಸಫಲರಾಗಿದ್ದಾರೆ.
ರಾಜ್ಯ ನಾಯಕ ಜನಾಂಗಕ್ಕೆ ಒಲಿಯುವುದೆ ಡಿಸಿಎಂ: ಹೌದು ಅಂದು ಚುನಾವಣಾ ಸಂದರ್ಭದಲ್ಲಿ ನಾಯಕ ಜನಾಂಗದ ವ್ಯಕ್ತಿ ಡಿಸಿಎಂ ಆಗುತ್ತಾರೆ ಎಂಬ ಕಾರಣಕ್ಕೆ ರಾಜ್ಯದ ನಾಯಕ ಜನಾಂಗವು ಒಗ್ಗಟ್ಟಿನಿಂದ ಪಕ್ಷ ಬೇಧ ಮರೆತು ಬಿಜೆಪಿ ಬೆಂಬಲಿಸಿ ಅತಿ ಹೆಚ್ಚು ಸೀಟುಗಳು ಬರಲು ನಾಯಕ ಜನಾಂಗ ಕೂಡ ಮುಖ್ಯ ಕಾರಣ ಎಂದರೆ ತಪ್ಪಗಲಾರದು. ಆದರೆ ಸರ್ಕಾರ ಪೂರ್ಣ ಬಹುಮತ ಬರಲಿಲ್ಲ. ಒಂದುವರೆ ವರ್ಷದ ನಂತರ ಸರ್ಕಾರ ರಚನೆಯಾದ ಕೂಡಲೇ ರಾಮುಲು ಡಿಸಿಎಂ ಆಗುತ್ತಾರೆ ಎಂಬ ನಿರೀಕ್ಷೆಯಲ್ಲಿ ಇದ್ದ ನಾಯಕ ಜನಾಂಗಕ್ಕೆ ಬಿಜೆಪಿ ನಿರಾಸೆ ಮಾಡಿದ್ದು ಸತ್ಯ. ಆದರೆ ಮುಂದಿನ ದಿನಗಳಲ್ಲಿ ಸರಿದೂಗಿಸಿಕೊಂಡು ನಾಯಕ ಜನಾಂಗಕ್ಕೆ ನ್ಯಾಯ ಒದಗಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಅಂದು ಯಡಿಯೂರಪ್ಪ ಜೊತೆಯಲ್ಲಿ ಟೊಂಕ ಕಟ್ಟಿ ನಿಂತಿದ್ದು ರಾಮುಲು ಮಾತ್ರ: ರಾಜ್ಯ ಬಿಜೆಪಿಯಲ್ಲಿ ಅನೇಕ ನಾಯಕರಿದ್ದರು ಯಡಿಯೂರಪ್ಪ ಜೊತೆಯಲ್ಲಿ ಹಗಲಿರುಳು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದು ಇದೆ ರಾಮುಲು ಒರೆತು ಇಂದು ಡಿಸಿಎಂ ಆದವರು ಎಲ್ಲೂ ರಾಜ್ಯ ಸುತ್ತದೆ ತಾನೇ ಗೆಲುವು ಸಾಧಿಸಲು ಮತ್ತು ಕೇವಲ ತನ್ನ ಕ್ಷೇತ್ರಕ್ಕೆ ಸಿಮೀತಾದವರು ಡಿಸಿಎಂ ಆಗಿದ್ದು ರಾಮುಲು ಅಭಿಮಾನಿಗಳ ಹೊಟ್ಟೆಯಲ್ಲಿ ಕೆಂಡ ಹಾಕಿದಂತೆ ಆಗಿದ್ದು ರಾಮುಲು ಸಮಾಧಾನ ಮಾಡಿಕೊಂಡು ನನಗೆ ಪಕ್ಷ ಮುಖ್ಯ ಒರತು ಹುದ್ದೆಯಲ್ಲ ಎಂದು ತಿಳಿಸುತ್ತ ಸಾಗುತ್ತಿದ್ದು ಒಟ್ಟಲ್ಲಿ ರಾಮುಲುಗೆ ಉಳಿದ ಅವಧಿಗೆ ಆದರು ಡಿಸಿಎಂ ಆಗಬಹುದು ಅಥವಾ ಪ್ರಬಲ ಸಮಾಜ ಕಲ್ಯಾಣ ಇಲಾಖೆ ನೀಡಬಹುದು ಎಂಬ ಆಶಾ ಭಾವನೆಯಲ್ಲಿ ಅಭಿಮಾನಿಗಳು ಇದ್ದಾರೆ. ಬಿಜೆಪಿ ಯಾವ ಚಾಣಕ್ಷ ನಡೆ ಇಡುತ್ತದೆ ಎಂದು ಕಾಲ ಉತ್ತರಿಸಲಿದೆ.