ಜೀವರಕ್ಷಕ (ಲೈಫ್‍ಗಾರ್ಡ್) ಜಿಮ್, ಫಿಟ್ನೆಸ್ ತರಬೇತುದಾರರು ಮತ್ತು ಮಾರ್ಕರ್ ತರಬೇತಿಯನ್ನು ನೀಡಲು ಅರ್ಜಿ ಆಹ್ವಾನ
1 min read
ಚಿತ್ರದುರ್ಗ,ಸೆಪ್ಟೆಂಬರ್09:
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ 2020-21ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಪರಿಶಿಷ್ಟ ಪಂಗಡದ ಉಪಯೋಜನೆಯಡಿಯಲ್ಲಿ ಕ್ರೀಡಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಜೀವರಕ್ಷಕ (ಲೈಫ್‍ಗಾರ್ಡ್) ಜಿಮ್, ಫಿಟ್ನೆಸ್ ತರಬೇತುದಾರರು ಮತ್ತು ಮಾರ್ಕರ್ ತರಬೇತಿಯನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಸೆಪ್ಟೆಂಬರ್ 30 ಅರ್ಜಿ ಸಲ್ಲಿಸಲು ಕೊನೆಯ ದಿನ.
ಕ್ರೀಡಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಯುವಜನರಿಗೆ ಪೂರಕವಾದ ಉದ್ಯೋಗಗಳ ವಿಪುಲ ಅವಕಾಶಗಳಿದ್ದು, ಅದರಂತೆ ಜೀವರಕ್ಷಕ (ಲೈಫ್‍ಗಾರ್ಡ್) ಜಿಮ್, ಫಿಟ್ನೆಸ್ ತರಬೇತುದಾರರು ಮತ್ತು ಮಾರ್ಕರ್ ತರಬೇತಿ ನೀಡಲು ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆಯಡಿ ಯುವಜನರಿಗೆ ತರಬೇತಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುವುದು.
ಈ ಕಾರ್ಯಕ್ರಮವು ವಸತಿ ಸಹಿತವಾಗಿದ್ದು, ಆಯ್ಕೆಯಾಗುವ ಯುವಕ, ಯುವತಿಯರಿಗೆ ಪ್ರಮಾಣ ಪತ್ರ, ಕ್ರೀಡಾಗಂಟು, ಊಟೋಪಹಾರ, ವಸತಿ ವ್ಯವಸ್ಥೆ ಹಾಗೂ ಪ್ರಯಾಣಭತ್ಯೆಯನ್ನು ಇಲಾಖೆಯ ವತಿಯಿಂದ ನೀಡಲಾಗುವುದು. ಯುವತಿಯರ ಸಂಖ್ಯೆ ಆಧಾರಿಸಿ ಪ್ರತ್ಯೇಕವಾಗಿ ತರಬೇತಿಯನ್ನು ನಿಡಲಾಗುವುದು.
ತರಬೇತಿಯನ್ನು ಇಲಾಖೆ ವತಿಯಿಂದ ವಿವಿಧ ವಿಭಾಗಗಳಾದ ಬೆಂಗಳೂರು, ಮೈಸೂರು, ಬೆಳಗಾವಿ, ಕಲಬುರುಗಿ ಜಿಲ್ಲೆಗಳಲ್ಲಿ ಆಯೋಜಿಸಲಾಗುವುದು. ಅರ್ಜಿಗಳನ್ನು ಕಚೇರಿಯಿಂದ ಪಡೆದು ಭರ್ತಿಮಾಡಿ ಸೆಪ್ಟೆಂಬರ್ 30 ರೊಳಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂರವಾಣಿ ಸಂಖ್ಯೆ 08194-235635 ಗೆ ಸಂಪರ್ಕಿಸಬಹುದು ಎಂದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ