ಪಾವಗಡ ಜನರಲ್ಲಿ ಅಚ್ಚರಿ ಮೂಡಿಸಿದ ಆ ಘಟನೆ ಯಾವುದು ಗೊತ್ತೆ?
1 min readಪಾವಗಡ: ತಾಲ್ಲೂಕಿನ ಕೋಟಗುಡ್ಡ ಗ್ರಾಮದಲ್ಲಿ ಜನಸಾಮಾನ್ಯರಲ್ಲಿ ಅಚ್ಚರಿ ಮೂಡಿಸುವ ಘಟನೆ ಒಂದು ನಡೆದಿದೆ.
ಸಾಮಾನ್ಯವಾಗಿ ಮನುಷ್ಯರ ಗರ್ಭದಲ್ಲಿ ಮಾನವ ರೂಪದ ಶಿಶು ಹುಟ್ಟೊದನ್ನ ನೋಡಿದ್ದೀವಿ..ಕೆಲವೊಮ್ಮೆಪ್ರಾಣಿಗಳ ಗರ್ಭದಲ್ಲಿ ಕೈ ಕಾಲಿಲ್ಲದ ಪ್ರಾಣಿಗಳು ಹುಟ್ಟಿರೋದನ್ನೂ ಕಂಡಿದ್ದೀವಿ…ಆದರೆ ಇಲ್ಲಿ ಪ್ರತಿಯೋಬ್ಬರನ್ನು ಕುತುಹಲಾ ತರಿಸುವ ಘಟನೆಯೊಂದು ನಡೆದಿದೆ. ಅದೇನೆಂದರೆ ಕುರಿಯ ಹೊಟ್ಟೆಯಲ್ಲಿ ಆಂಜನೇಯ ಸ್ವಾಮಿ ಮುಖ ಕೈ ಕಾಲು ಹೋಲಿಕೆ ಹೊಂದಿರುವ ಕುರಿಮರಿ ಜನನ ವಾಗಿರುವ ಘಟನೆ ಸಾರ್ವಜನಿಕರನ್ನು ಆಶ್ಚರ್ಯಚಕಿತರನ್ನಾಗಿಸಿದೆ.ಇಂತಹ ವಿಸ್ಮಯಕಾರಿ ಘಟನೆ ನಡೆದಿರೋದು ಪಾವಗಡ ತಾಲ್ಲೂಕಿನ ಕೋಟಗುಡ್ಡ ಗ್ರಾಮದಲ್ಲಿ. ಹೌದು ಹನುಮಂತರಾಯಪ್ಪನವರಿಗೆ ಸೇರಿದ ಕುರಿಯೊಂದು ರಾತ್ರಿ ಕುರಿ ಮರಿಗೆ ಜನ್ಮ ನೀಡಿದೆ ಅದು ಥೇಟ್ ಆಂಜನೇಯ ಸ್ವಾಮಿಯ ತರನೇ ಇದೆ. ಬಳಿಕ ಆ ಕುರಿ ಮರಿ ಮರಣವಾಗಿದೆ ಅದನ್ನು ಕಂಡ ಗ್ರಾಮದ ಜನರು ನಮ್ಮೂರಿಗೆ ಆಂಜನೇಯ ಸ್ವಾಮಿಯೇ ಬಂದು ನೆಲೆ ನಿಂತಿದ್ದಾನೆ ಎನ್ನುವುದಕ್ಕೆ ಕುರುಹು ನೀಡಿದ್ದಾನೆಂದು ತಿಳಿದು ಪೂಜೆ ಕೈಂಕರ್ಯಗಳನ್ನು ಮಾಡಿ ಭಕ್ತಿ ಮೆರೆದಿದ್ದಾರೆ. ಗ್ರಾಮದಲ್ಲಿ ನಡೆದಿರುವ ಈ ಘಟನೆಗೂ ಆಂಜನೇಯ ಸ್ವಾಮಿಗೂ ಏನಾದ್ರೂ ಸಂಬಂಧವಿದೆಯಾ ಎಂದು ಹುಡುಕಿದ್ರೆ....ಇಲ್ಲಿ ವಾರದ ಹಿಂದೆಯಷ್ಟೇ ಶ್ರೀ ಆಂಜನೇಯ ಸ್ವಾಮಿ ದೇಗುಲದ ಜೀರ್ಣೋದ್ದಾರ ಹಾಗೂ ಕಳಶ ಪ್ರತಿಷ್ಠಾಪನೆಯ ಕಾರ್ಯ ನಡೆದಿತ್ತು.ಅದರ ಬೆನ್ನೆಲ್ಲೆ ಕುರಿಯೊಂದು ಆಂಜನೇಯನ ರೂಪದ ಮರಿಗೆ ಜನ್ಮ ನೀಡಿರೋದು... ಜನರಲ್ಲಿ ಪವಾಡ ಸದೃಶ್ಯವಾಗಿದೆ.
ಸಾಕ್ಷಾತ್ ವಾಯುಪುತ್ರನೇ ಬಂದು ದರ್ಶನ ಭಾಗ್ಯ ಕರುಣಿಸಿ ದ್ದಾನೆ ಒಳಿತು ಮಾಡುವ ಮುನ್ಸೂಚನೆ ಕೊಟ್ಟಿದ್ದಾನೆ ಎಂಬ ನಂಬಿಕೆ ಈಗ ಜನರಲ್ಲಿ ಹರಿದಾಡ್ತಿದೆ.
ಏನೇ ಇರ್ಲಿ ಪ್ರಕೃತಿಯಲ್ಲಿ ಇಂತಹವುಗಳು ಸಹಜವಾದ್ರು ನಂಬೊದು ಬಿಡೋದು ಅವರವರ ವಿವೇಚನೆಗೆ ಬಿಟ್ಟ ವಿಚಾರ