March 3, 2024

Chitradurga hoysala

Kannada news portal

ಅಬ್ಬ ಬಿಆರ್ ಟಿ ಎಸ್ ಚಾಲಕನ ಸಮಯ ಪ್ರಜ್ಞೆಯಿಂದ 40 ಜನ ಸೇಫ್

1 min read

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಬಿಆರ್ ಟಿ ಎಸ್ ಚಾಲಕನ ಸಮಯ ಪ್ರಜ್ಞೆಯಿಂದ 40 ಜನರ ಪ್ರಾಣ ರಕ್ಷಣೆಯಾದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸೆ. 5ರಂದು ಚಿಗರಿ ಬಸ್ ನಲ್ಲಿ ನವನಗರದ ಬ್ರಿಡ್ಜ್ ಬಳಿ ಬರುತ್ತಿದ್ದಂತೆ ಚಾಲಕನಿಗೆ ತಲೆ ಸುತ್ತು ಬಂದಿದೆ. ತಕ್ಷಣ ಚಾಲಕನಿಗೆ ಬಸ್ ಚಾಲನೆ ಮಾಡಲು ಆಗಿಲ್ಲ.

ಆಗ ತಕ್ಷಣ ಬಸ್ ನಿಯಂತ್ರಣ ಮಾಡಿ ರಸ್ತೆ ಪಕ್ಕಕ್ಕೆ ನಿಲ್ಲಿಸಿ ಚಾಲಕನ ಸೀಟ್ ನಿಂದ ಕೆಳಗೆ ಬಿದ್ದಿದ್ದಾನೆ. ಇದರಿಂದ ಗಾಬರಿಗೊಂಡ ಮಹಿಳಾ ಪ್ರಯಾಣಿಕರು ಕಕ್ಕಾಬಿಕ್ಕಿಯಾಗಿದ್ದಾರೆ. ಆಗ ಕೆಲ ಪ್ರಯಾಣಿಕರು ಮುಂದೆ ಬಂದು ನೀರು ಕುಡಿಸಿ ಆರೈಕೆ ಮಾಡಿದ ಘಟನೆ ಕೇಲವು ದಿನಗಳ ನಂತರ ಬೆಳಕಿಗೆ ಬಂದಿದೆ.

About The Author

Leave a Reply

Your email address will not be published. Required fields are marked *